ಬಾಹುಬಲಿ ಶಿವಗಾಮಿ ಖ್ಯಾತಿಯ ನಟಿ ರಮ್ಯಕೃಷ್ಣ.
ರಮ್ಯಕೃಷ್ಣ ಅವರ ಕಾರಿನಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯದ ಬಾಟಲ್ ವಶ.
100 ಮದ್ಯದ ಬಾಟಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದವರನ್ನು ಬಂಧಿಸಲಾಗಿದೆ.
ರಮ್ಯಕೃಷ್ಣ ಕಾರು ಚಾಲಕ ಸೆಲ್ವ ಕುಮಾರ್ ಎಂಬವನನ್ನು ಬಂಧಿಸಲಾಗಿದೆ.
ಮಹಾಬಲಿಪುರಂನಿಂದ ಬರುತ್ತಿದ್ದ ಕಾರನ್ನು ಮುತ್ತುಕಾಡು ಚೆಕ್‌ಪೋಸ್ಟ್ ಬಳಿ ತನಿಖೆ ನಡೆಸಲಾಗಿತ್ತು.
ತನಿಖೆ ನಡೆಸಿದಾಗ ಮದ್ಯದ ಬಾಟಲ್ ಪತ್ತೆಯಾಗಿದೆ.
96 ಬಿಯರ್ ಬಾಟಲ್ ಹಾಗೂ 8 ವೈನ್ ಬಾಟಲ್ ಪತ್ತೆಯಾಗಿದೆ ಎನ್ನಲಾಗಿದೆ.
ಡ್ರೈವರ್‌ನನ್ನು ಕಾಂತಪುರ ಪೊಲೀಸ್ ಠಾಣೆಯಲ್ಲಿ ಬಂಧಿಸಲಾಗಿದೆ.
ರಮ್ಯಕೃಷ್ಣ ಹಾಗೂ ಸಹೋದರಿ ವಿನಯಕೃಷ್ಣ ಚಾಲಕನಿಗೆ ಬೇಲ್ ಕೊಡಿಸಿದ್ದಾರೆ ಎನ್ನಲಾಗಿದೆ.
Suvarna News