ಬೆಂಗಳೂರು (ಫೆ. 12) 'ಪೊಗರು' ಚಿತ್ರತಂಡ ವಿಶೇಷ ಸುದ್ದಿ ನೀಡಿದ್ದು ಪ್ರೇಮಿಗಳ ದಿನದಂದು ಆಡಿಯೋ ಲಾಂಚ್ ಮಾಡುತ್ತೇನೆ ಎಂದು ತಿಳಿಸಿದೆ. ಅನೇಕ ಗಣ್ಯರಿಗೆ ಚಿತ್ರತಂಡ ಆಹ್ವಾನ ನೀಡಿದೆ. ವಿಪಕ್ಷ ನಾಯಕ, ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಅವರನ್ನು ಪೊಗರು ಚಿತ್ರತಂಡ ಭೇಟಿ ಮಾಡಿದೆ. ನಾಯಕ ನಟ ಧ್ರುವಸರ್ಜಾ, ನಿರ್ದೇಶಕ ನಂದ ಕಿಶೋರ್ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಸಮಾರಂಭಕ್ಕೆ ಆಹ್ವಾನ ನೀಡಿದರು. ಶಾಸಕ ಬೈರತಿ ಸುರೇಶ್ ನಟ ಪ್ರಥಮ್ ಹಾಜರಿದ್ದರು. ಪೊಗರು ಸಿನಿಮಾ ಫೆ. 19ಕ್ಕೆ ಬಿಡುಗಡೆ ಯಾಗಲಿದೆ . ಚಿತ್ರ ಬಿಡುಗಡೆ ದಿನಾಂಕವನ್ನು ಧ್ರುವ ಸರ್ಜಾ ಅವರೇ ಅನೌನ್ಸ್ ಮಾಡಿದ್ದರು. ಸೋಶಿಯಲ್ ಮೀಡಿಯಾದಲ್ಲಿಯೂ ಸಹ ಪೊಗರು ಹವಾ ಜೋರಾಗಿದೆ. ರಶ್ಮಿಕಾ ಮಂದಣ್ಣ ಮತ್ತು ಧ್ರುವ ಸರ್ಜಾ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. Pogaru dhruva sarja team invites Opposition leader Siddaramaiah to Audio release ಪೊಗರು ಆಡಿಯೋ ರಿಲೀಸ್; ಸಿದ್ದರಾಮಯ್ಯಗೆಆಹ್ವಾನ ಕೊಟ್ಟ ಚಿತ್ರತಂಡ