ಶ್ರೀಲೇಶ್ ನಾಯರ್ ನಿರ್ದೇಶನದ ‘ಗಿಬ್ಸಿ’ ಚಿತ್ರದಲ್ಲಿ ಗಾಯಕಿ ಅನನ್ಯಾ ಭಟ್ ರೊಚ್ಚಿಗೆದ್ದ ಹೆಣ್ಣಿನ ಪಾತ್ರ ನಿರ್ವಹಿಸಲಿದ್ದಾರೆ.
ಈವರೆಗೆ ಸೌಮ್ಯ ಪಾತ್ರಗಳಲ್ಲೇ ಕಾಣಿಸಿಕೊಂಡಿದ್ದ ಅನನ್ಯಾ ಇದೀಗ ಕಂಪ್ಲೀಟ್ ರಗಡ್ ಪಾತ್ರದ ಮೂಲಕ ಗಮನಸೆಳೆಯಲಿದ್ದಾರೆ.
‘ವಿಪರೀತ ಒರಟುತನದ, ಕಚ್ಚಾ ಹಳ್ಳಿ ಹೆಣ್ಣುಮಗಳ ಪಾತ್ರ. ಹಾಗಂತ ಇದರಲ್ಲಿ ಅಶ್ಲೀಲತೆ ಇಲ್ಲ.
ಇದು ಬೋಲ್ಡ್ ಪಾತ್ರ ಅಲ್ಲ. ಆದರೆ ರಿಯಲ್ ಅನಿಸೋ ಪಾತ್ರ’ ಅಂತಾರೆ ಅನನ್ಯಾ.
‘ಇಲ್ಲಿ ಈ ಪಾತ್ರ ಅಂಥಾ ಕಠಿಣ ಮನಸ್ಥಿತಿ ಬೆಳೆಸಿಕೊಳ್ಳಲು ಆಕೆಯ ದುರಂತ ಬದುಕೇ ಕಾರಣ.
ಒಂದು ಕೊಲೆ ಆಕೆಯನ್ನು ಇಂಥಾ ವ್ಯಕ್ತಿಯಾಗಿ ರೂಪಿಸಿರುತ್ತೆ. ಬಹುಶಃ ನನ್ನ ನಟನೆಯ ಕೆರಿಯರ್‌ನಲ್ಲಿ ಬಹಳ ಅಪರೂಪದ ಚಾಲೆಂಜಿಂಗ್ ರೋಲ್ ಇದು ’ಎನ್ನುತ್ತಾರವರು.
ಅರುಣ್ ಹಾಗೂ ಪ್ರಿಯಾಂಕಾ ಮುಖ್ಯಭೂಮಿಕೆಯಲ್ಲಿರುವ ಚಿತ್ರವಿದು.
ಉಳಿದಂತೆ ಅನನ್ಯಾ ಭಟ್, ಗುರು ಸಾವನ್ ನಿರ್ದೇಶನದ ನೈಜ ಘಟನೆಯನ್ನಾಧರಿಸಿದ ‘ಸೇನಾಪುರ’ ಚಿತ್ರದಲ್ಲಿ ಲೀಡ್ ಪಾತ್ರ ಮಾಡಿದ್ದಾರೆ.