ಲವ್ ಬ್ರೇಕಪ್ ಮಾಡ್ಕೊಂಡ್ರೆ ಸ್ಟೇಟ್ಸ್‌ ಹಾಕೋದು; ಜನರೇಷನ್‌ ಗ್ಯಾಪ್‌ ಬಗ್ಗೆ ಮಾತನಾಡಿದ ಧನಂಜಯ್

Published : Apr 03, 2023, 04:14 PM IST

ಬ್ರೇಕಪ್ ಆಗಿದೆ ಎಂದು ಕಂಡು ಹಿಡಿಯುವುದು ತುಂಬಾ ಸುಲಭ, ಡಿಪಿ ಅಥವಾ ಸ್ಟೇಟ್ಸ್‌ ನೋಡಿ ಎಂದ ಧನಂಜಯ್...

PREV
17
ಲವ್ ಬ್ರೇಕಪ್ ಮಾಡ್ಕೊಂಡ್ರೆ ಸ್ಟೇಟ್ಸ್‌ ಹಾಕೋದು; ಜನರೇಷನ್‌ ಗ್ಯಾಪ್‌ ಬಗ್ಗೆ ಮಾತನಾಡಿದ ಧನಂಜಯ್

ಕನ್ನಡ ಚಿತ್ರರಂಗದ ನಟ ರಾಕ್ಷಸ ಡಾಲಿ ಧನಂಜಯ್ ಮೊದಲ ಸಲ ಜನರೇಷನ್‌ ಗ್ಯಾಪ್‌ ಲವ್‌ಗಳ ಬಗ್ಗೆ ಮಾತನಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದೆ.

27

'ಲವ್ ಬ್ರೇಕಪ್ ಮಾಡಿಕೊಂಡರೆ ನಮ್ಮ ಕಾಲದಲ್ಲಿ ಸ್ಟೇಟಸ್‌ ಹಾಕುವುದು ಡಿಪಿ ತೆಗೆಯುವುದು ಇರಲಿಲ್ಲ ಆದರೆ ಟೇಪ್‌ ಸುತ್ತುವುದು ಇತ್ತು.' ಎಂದು ಖಾಸಗಿ ಯುಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದಾರೆ.  

37

ಸ್ನೇಹಿತರು ಬಂದು ಪ್ರಶ್ನೆ ಕೇಳುವರು ಅವರಿಗೆ ಹೇಳಬೇಕಿತ್ತು ಮತ್ತೊಬ್ಬ ಕೇಳುವನು ಅವನಿಗೆ ಮತ್ತೆ ಹೇಳಬೇಕು ಸಂಜೆ ಮತ್ತೊಂದು ಗ್ರೂಪ್‌ ಬಾ ಬೇಸರದಲ್ಲಿ ಇರುವೆ ಎಂದು ಕರೆದುಕೊಂಡು ಟೇಪ್‌ ಕಿತ್ತು ಹೋಗುವವರೆಗೂ ಬಿಡುತ್ತಿರಲಿಲ್ಲ ಅಷ್ಟು ಸಲ ಪ್ರತಿಯೊಬ್ಬರಿಗೂ ನೋವು ಹೇಳಿಕೊಳ್ಳಬೇಕಿತ್ತು. 

47

ಆದರೆ ಈ ಜನರೇಷನ್‌ನಲ್ಲಿ ಹಾಗಿಲ್ಲ ವಾಟ್ಸಪ್ ಡಿಪಿ, ಸ್ಟೇಟಸ್‌ ಅಥವಾ  ಇನ್‌ಸ್ಟಾಗ್ರಾಂ ಸ್ಟೋರಿ ನೋಡಿದರೆ ಸಾಕು ಫುಲ್ ಡೀಟೇಲ್ಸ್‌ ಅರ್ಥವಾಗುತ್ತದೆ. ಓಕೆ ಇವನು ಗರ್ಲ್‌ಫ್ರೆಂಡ್‌ ಜೊತೆ ಬ್ರೇಕಪ್ ಮಾಡಿಕೊಂಡಿದ್ದಾನೆ, ಇವಳು ಅವನ ಜೊತೆ ಮಾತು ಬಿಟ್ಟಿದ್ದಾಳೆ ಅನ್ನೋದು ಚೆನ್ನಾಗಿ ಗೊತ್ತಾಗುತ್ತದೆ. 

57

ಆಗ ನೋವಾದರೆ ನಮಗೆ ನಾವೇ ಸಮಾಧಾನ ಮಾಡಿಕೊಳ್ಳುತ್ತಿದ್ದವೆ...ಎರಡು ದಿನ ಆದ್ಮೇಲೆ ಹೇಗೋ ಕೂಲ್ ಆಗಿ ಅಲ್ಲಿಂದ ಅವರು ಕೂಡ ಕೂಲ್ ಆಗಿ ಮತ್ತೆ ಮಾತನಾಡಿ ಸಂಬಂಧಗಳು ಸರಿ ಹೋಗುತ್ತಿತ್ತು. ಆದರೆ ಈಗ ಒಂದು ಹುಡುಗ ಬೇಸರದ ಪೋಸ್ಟ್ ಹಾಕಿದರೆ ಹುಡುಕಿ ಪೋಸ್ಟ್ ಹಾಕಿದರೆ ಸಮಾಧಾನ ಮಾಡಲು ನೂರು ಮಂದಿ ಇರುತ್ತಾರೆ.

67

ಸಮಾಧಾನ ಮಾಡಲು ಬಂದವರೇ ಲವ್ ಮಾಡಲು ಶುರು ಮಾಡುತ್ತಾರೆ ಎಷ್ಟು ಜನ ಸಾಮಾಧಾನ ಮಾಡುತ್ತಾರೆ ಅಂದ್ರೆ ನೋವು ಮಾಡಿರುವ ವ್ಯಕ್ತಿನೇ ಸಮಾಧಾನ ಮಾಡಲು ಅವಕಾಶ ಇರುವುದಿಲ್ಲ. ಅಲ್ಲಿ ಜನರು ಮೆಸೇಜ್ ಮಾಡುವುದನ್ನು ನೋಡಿ ಖುಷಿ ಪಡುತ್ತಾರೆ. 

77

ಇನ್ನು ಬ್ರೇಕಪ್ ಮಾಡಿಕೊಂಡಿರುವುದಿಲ್ಲ ಅಷ್ಟರಲ್ಲಿ ಮತ್ತೊಬ್ಬರು ಸಲಹೆ ಕೊಟ್ಟು ಬೇಡ ಬೇಡ ನನ್ನ ಜೀವನದಲ್ಲಿ ಹೀಗೆ ಅಗಿದೆ ನಿನಗೂ ಹೀಗೆ ಆಗುತ್ತದೆ ಎಂದು ಹೇಳಿ ಬ್ರೇಕಪ್ ಮಾಡಿಸುತ್ತಾರೆ.

Read more Photos on
click me!

Recommended Stories