ಕನ್ನಡ ಚಿತ್ರರಂಗದ ಕ್ರೇಜಿ ಕ್ವೀನ್ ರಕ್ಷಿತಾ ಪ್ರೇಮ್ ಇಂದು 39ನೇ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ವಿಶ್ ಮಾಡುತ್ತಿದ್ದಾರೆ.
ನಟಿಯಾಗಿ, ನಿರೂಪಿಯಾಕಿ, ನಿರ್ಮಾಪಕಿಯಾಗಿ ಈಗ ತೀರ್ಪುಗಾರ್ತಿಯಾಗಿ ಕರ್ನಾಟಕದ ಜನತೆಗೆ ಹತ್ತಿರವಾಗಿರುವ ರಕ್ಷಿತಾ ಪ್ರೇಮ್ ಎಡಗೈಯಲ್ಲಿ ಮಾಡಿದ ಕೆಲಸ ಬಲಗೈಗೆ ಗೊತ್ತಾಗಬಾರದು ಎಂಬ ಪಾಲಿಸಿ ಫಾಲೋ ಮಾಡುತ್ತಾರೆ.
ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋನಲ್ಲಿ ಅನೇಕರಿಗೆ ಸಹಾಯ ಮಾಡಿದ್ದಾರೆ ಆದರೆ ಯಾರೊಂದಿಗೂ ಹೇಳಿಕೊಂಡಿಲ್ಲ. ಈ ಹಿಂದೆ ಆ ಸ್ಪರ್ಧಿಗಳು ರಿವೀಲ್ ಮಾಡಿದ್ದರು. ಹಣದ ಅವಶ್ಯಕತೆ ಇರುವವರಿಗೆ ಹಣ ಸೆಂಡ್ ಮಾಡಿದ್ದಾರೆ ಅವರು ಮರು ಕರೆ ಮಾಡಿ ಪ್ರಶ್ನೆ ಮಾಡಬಾರದು ಎಂದು ಫೋನ್ ಆಫ್ ಮಾಡಿಬಿಡುತ್ತಾರೆ.
ಫೋನ್ ಹೊಡೆದು ಹೋಗಿದ್ದರೆ ಕುಟುಂಬ ಸಂಪರ್ಕ ಮಾಡಲು ಕಷ್ಟವಾಗುತ್ತದೆ ಎಂದು ಸ್ಪರ್ಧಿಯೊಬ್ಬರಿಗೆ ಮೊಬೈಲ್ ಗಿಫ್ಟ್ ಮಾಡಿದ್ದರಂತೆ. ಹೀಗೆ ಅನೇಕ ವಿಚಾರಗಳು ಇದೆ ಆದರೆ ಎಲ್ಲೂ ಮಾತನಾಡಬಾರದು ಎಂದಿದ್ದಾರಂತೆ.
'ವಿಶ್ ಯು ಹ್ಯಾಪಿ ಬರ್ತಡೇ ಕ್ರೇಜಿ ಡಾನ್' ಎಂದು ಪ್ರೇಮ್ ಬರೆದುಕೊಂಡು ಅದ್ಧೂರಿ ಆಚರಣೆ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ. ಅದಕ್ಕೆ ರಕ್ಷಿತಾ ಧನ್ಯವಾದಗಳನ್ನು ತಿಳಿಸಿದ್ದಾರೆ.
ಸದ್ಯ ಧ್ರುವ ಸರ್ಜಾ ಮತ್ತು ಶಿಲ್ಪಾ ಶೆಟ್ಟಿ ನಟನೆಯ ಕೆಡಿ ಸಿನಿಮಾವನ್ನು ರಕ್ಷಿತಾ ನಿರ್ಮಾಣ ಮಾಡುತ್ತಿದ್ದಾರೆ. ಇದು ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾ ಅಂತೆ.