ಅರ್ಜುನ್‌ ಜನ್ಯ ನಿರ್ದೇಶನದ ಹೊಸ ಚಿತ್ರಕ್ಕೆ ಕಿರುತೆರೆ ಸುಂದರಿ ಕೌಸ್ತುಭ ನಾಯಕಿ

Published : Mar 30, 2023, 09:59 AM IST

ರಾಜ್‌ ಬಿ ಶೆಟ್ಟಿ ಚಿತ್ರಕ್ಕೆ 'ನನ್ನರಸಿ ರಾಧೆ' ಧಾರಾವಾಹಿ ಸುಂದರಿ ಕೌಸ್ತುಭ ಮಣಿ ನಾಯಕಿ. 

PREV
16
ಅರ್ಜುನ್‌ ಜನ್ಯ ನಿರ್ದೇಶನದ ಹೊಸ ಚಿತ್ರಕ್ಕೆ ಕಿರುತೆರೆ ಸುಂದರಿ ಕೌಸ್ತುಭ ನಾಯಕಿ

 ಕನ್ನಡ ಚಿತ್ರರಂಗದ ಮ್ಯೂಸಿಕಲ್ ಮ್ಯಾಜಿಕಲ್ ಕಂಪೋಸರ್ ಅರ್ಜುನ್‌ ಜನ್ಯ ನಿರ್ದೇಶನ, ಉಪೇಂದ್ರ, ಶಿವಣ್ಣ, ರಾಜ್‌ ಬಿ ಶೆಟ್ಟಿನಟನೆಯ ‘45’ ಚಿತ್ರಕ್ಕೆ ಕೌಸ್ತುಭ ಮಣಿ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. 

26

ರಾಜ್‌ ಬಿ ಶೆಟ್ಟಿಅವರಿಗೆ ಕೌಸ್ತುಭ ನಾಯಕಿಯಾಗಿರುತ್ತಾರೆ ಎಂದು ಚಿತ್ರತಂಡ ತಿಳಿಸಿದೆ. ಕಿರುತೆರೆ ಹಿನ್ನೆಲೆಯ ಕೌಸ್ತುಭ ‘ನನ್ನರಸಿ ರಾಧೆ’ ಎಂಬ ಸೀರಿಯಲ್‌ನಲ್ಲಿ ನಟಿಸಿದ್ದರು. ತೆಲುಗು ಸೀರಿಯಲ್‌ಗಳಲ್ಲೂ ನಾಯಕಿಯಾಗಿ ಕಾಣಿಸಿಕೊಂಡಿದ್ದರು.

36

ಯುವ ಪ್ರತಿಭೆ ತೇಜ್ ನಟಿಸಿ, ನಿರ್ದೇಶನ ಮಾಡುತ್ತಿರುವ  'ರಾಮಾಚಾರಿ 2.0' (Ramachari 2.0)ಚಿತ್ರದಲ್ಲೂ ಕೌಸ್ತುಭ ನಟಿಸಿದ್ದಾರೆ. ನಟಿಯಾಗಿ, ನಾನು ಹೊಸ ಉದ್ಯಮಗಳನ್ನು ಅನ್ವೇಷಿಸಲು ಮತ್ತು ಅನುಭವಿಸಲು ಉತ್ಸುಕಳಾಗಿದ್ದೇನೆ ಎಂದು ಅವರು ಹೇಳಿದ್ದಾರೆ. ಈ ಚಿತ್ರ ಮುಂದಿನ ತಿಂಗಳು ರಿಲೀಸ್ ಆಗಲಿದೆ. 

46

ನಟಿಯಾಗಬೇಕು ಎಂಬ ಕನಸೇ ಕಂಡಿರದ ಕೌಸ್ತುಭ, ನಟಿಯಾಗಿದ್ದು ಮಾತ್ರ ವಿಶೇಷ. ಖಾಸಗಿ ಕಂಪನಿಯೊಂದರಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದ ಕೌಸ್ತುಭ ಮಣಿ ಆಕಸ್ಮಿಕವಾಗಿ ಬಣ್ಣದ ಬದುಕಿಗೆ ಕಾಲಿಟ್ಟರು. 

56

ನಟಿ ಮಾನ್ವಿತಾ ಕಾಮತ್ ಅವರನ್ನು  ಫ್ಯಾಶನ್ ಶೋವೊಂದರಲ್ಲಿ  ಭೇಟಿ ಮಾಡಿದ ನಂತರ ಮಾನ್ವಿತಾ ಧಾರಾವಾಹಿಯ ತಂಡಕ್ಕೆ ಇವರನ್ನು ಪರಿಚಯಿಸಿದ್ದರಂತೆ . ನಂತರ ‘ನನ್ನರಸಿ ರಾಧೆ’ ಧಾರಾವಾಹಿಯ ಲುಕ್ ಟೆಸ್ಟ್ ಮತ್ತು ಆಡಿಷನ್‌ನಲ್ಲಿ (look test audiiton) ಪಾಸ್ ಆದ ಕೌಸ್ತುಭ ಮಣಿ ಕಿರುತೆರೆ ಲೋಕಕ್ಕೆ ಕಾಲಿಟ್ಟರು.

66

ಕೌಸ್ತುಭ ಮಣಿ (Kaustubha Mani) ಡಿಸೆಂಬರ್ 25, 1999 ರಂದುಬೆಂಗಳೂರಿನಲ್ಲಿ ಜನಿಸಿದರು. ಈ ನಟಿ ಸಿರೀಯಲ್ ಗಳಲ್ಲಿ ಸದಾ ಟ್ರೆಡಿಶನಲ್ ಉಡುಗೆಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೂ ಇವರ ಸೋಶಿಯಲ್ ಮೀಡಿಯಾ ಪೇಜ್ ನೋಡಿದ್ರೆ ಅಲ್ಲೂ ಸಹ ಟ್ರೆಡಿಶನಲ್ ಬಟ್ಟೆಯಲ್ಲಿಯೇ ನಟಿ ಕಾಣಿಸಿಕೊಂಡಿದ್ದಾರೆ. 

Read more Photos on
click me!

Recommended Stories