ಕನ್ನಡ ಮತ್ತು ತೆಲುಗು ಸಿನಿಮಾಗಳಲ್ಲಿ ಅಭಿನಯಿಸುತ್ತಿರುವ ನಟಿ ಶ್ರೀಲೀಲಾ ಕೈಯಲ್ಲಿ ಸದ್ಯಕ್ಕೆ 8 ಸಿನಿಮಾಗಳಿದೆ. ಮೋಸ್ಟ್ ಬ್ಯುಸಿಯಾಗಿರುವ ನಟಿ.
ಬಾಲಾಕೃಷ್ಣ, ಪವನ್ ಕಲ್ಯಾಣ್, ನಿತಿಣ್ (Nitin), ರಾಮ್ ಹಾಗೂ ವಿಜಯ್ ದೇವರಕೊಂಡ (Vijay Deverakona) ಜೊತೆ ಶ್ರೀಲೀಲಾ ನಟಿಸಿದ್ದಾರೆ.
'ನಿಜ ಹೇಳಬೇಕು ಅಂದ್ರೆ ಇಂದಿಗೂ ಜನರು ಮೊದಲು ಟಿಕೆಟ್ ತೆಗೆದುಕೊಳ್ಳುವುದು ನಾಯಕರ ಮುಖ ನೋಡಿ' ಎಂದು ಇ-ಟೈಮ್ಸ್ ಸಂದರ್ಶನದಲ್ಲಿ ಹೇಳಿದ್ದಾರೆ.
'ಚಿತ್ರರಂಗಕ್ಕೆ ನಾನು ಹೊಸಬ್ಬಳು. ಬರ್ತಿದ್ದಂತೆ ಎಲ್ಲರ ಗಮನ ನನ್ನ ಮೇಲೆ ಇರಬೇಕು ಎಂದು ಬಯಸುವುದಿಲ್ಲ. ಮನೋರಂಜನೆ ನೀಡುವಂತ ಪಾತ್ರಗಳಲ್ಲಿ ಕಾಣಿಸಿಕೊಂಡರೆ ಸಾಕು' ಎಂದು ಶ್ರೀಲೀಲಾ ಮಾತನಾಡಿದ್ದಾರೆ.
'ವಿಭಿನ್ನ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವೆ, ಆ ಪಾತ್ರಗಳ್ನು ತೆರೆ ಮೇಲೆ ಚೆನ್ನಾಗಿ ಇರಬೇಕು ಅನ್ನೋದು ನನ್ನ ಉದ್ದೇಶ'
'ಪ್ರತಿ ದಿನ ನಾನು ಸಿನಿಮಾ ಸೆಟ್‌ನಲ್ಲಿ ಇರುತ್ತೀನಿ. ಈ ಕೆಲಸ ನನಗೆ ಖುಷಿ ಕೊಡುತ್ತಿದೆ. ಕ್ಯಾಮೆರಾ ಎದುರಿಸುವುದು ಅಭ್ಯಾಸ ಆಗಿದೆ' ಎಂದಿದ್ದಾರೆ ಲೀಲಾ.