ಬೇಲೂರಿನ ಪ್ರತಿಭೆಗೆ ಸಾತ್ ಕೊಟ್ಟ ಚಿಟ್ಟೆ; ರಕ್ತಾಕ್ಷ ಮೂಲಕ ಎಂಟ್ರಿ ಕೊಟ್ಟ ರೋಹಿತ್!

First Published | May 23, 2023, 2:39 PM IST

'ರಕ್ತಾಕ್ಷ' ಸಿನಿಮಾ ಮೂಲಕ ಬೆಳ್ಳಿಪರದೆಗೆ ಎಂಟ್ರಿ ಕೊಟ್ಟ ಬಿಸಿಲೂರಿನ ಯುವ ನಾಯಕ ರೋಹಿತ್.

ಮಾಡಲಿಂಗ್ ಲೋಕದಿಂದ ಸಿನಿಮಾಲೋಕಕ್ಕೆ ಎಂಟ್ರಿ ಕೊಟ್ಟ ಅದೆಷ್ಟು ಪ್ರತಿಭೆಗಳು ಸ್ಯಾಂಡಲ್ ವುಡ್ ನಲ್ಲಿ ನೆಲೆ ಕಂಡುಕೊಂಡಿದ್ದಾರೆ.  ಆ ಸಾಲಿಗೆ ಸೇರಲು ರೋಹಿತ್ ಕಾತುರರಾಗಿದ್ದಾರೆ. 

ಮೂಲತಃ ಉತ್ತರ ಕರ್ನಾಟಕದ ರಾಯಚೂರು ಜಿಲ್ಲೆ ಪುಟ್ಟ ಹಳ್ಳಿಯ ರೋಹಿತ್ ಆರು ವರ್ಷಗಳ ಕಾಲ ಮಾಡಲಿಂಗ್ ಸಾಮ್ರಾಜ್ಯದಲ್ಲಿ ಮಿಂಚಿದವರು. ಎರಡು ವರ್ಷಗಳ ರಂಗಭೂಮಿ ಅನುಭವ ಪಡೆದಿರುವ ಅವರೀಗ ರಕ್ತಾಕ್ಷ ಸಿನಿಮಾ ಮೂಲಕ ನಾಯಕನಾಗಿ ಅದೃಷ್ಟ ಪರೀಕ್ಷೆಗಿಳಿದ್ದಾರೆ.

Tap to resize

 ಒಂದಷ್ಟು ಪ್ರತಿಷ್ಠಿತ ಬ್ರ್ಯಾಂಡ್ ಪ್ರತಿನಿಧಿಸಿರುವ ರೋಹಿತ್ ಎಬಿ ಪಾಸಿಟಿವ್ ಸಿನಿಮಾದಲ್ಲಿ ಖಳನಾಯಕನಾಗಿ ಅಭಿನಯಿಸಿದ ಅನುಭವಿದೆ.

 ನಾಯಕನಾಗಿ ಬೆಳ್ಳಿಪರದೆಯಲ್ಲಿ ರಾರಾಜಿಸಬೇಕೆಂಬ ಹೊಸ ಉತ್ಸಹ ಹಾಗೂ ಹುಮ್ಮಸ್ಸಿನೊಂದಿಗೆ ತಮ್ಮದೇ ಸಾಯಿ ಪ್ರೊಡಕ್ಷನ್ ಹೌಸ್ ನಡಿ ರಕ್ತಾಕ್ಷ ಚಿತ್ರ ನಿರ್ಮಾಣ ಮಾಡಿ ನಟಿಸುತ್ತಿದ್ದಾರೆ. ವಾಸುದೇವ ಎಸ್ ಎನ್ ಎಂಬುವವರು ಈ ಚಿತ್ರ ಆಕ್ಷನ್ ಕಟ್ ಹೇಳುತ್ತಿದ್ದು, ಇದು ಇವರ ಚೊಚ್ಚಲ ನಿರ್ದೇಶನದ ಸಿನಿಮಾವಾಗಿದೆ. 

 ಒಂದಷ್ಟು ಸಿನಿಮೋತ್ಸಾಹಿ ಪ್ರತಿಭೆಗಳು ಸೇರಿ ತಯಾರಿಸುತ್ತಿರುವ ರಕ್ತಾಕ್ಷ ಸಿನಿಮಾಗೆ ವಸಿಷ್ಠ ಸಿಂಹ ಸಾಥ್ ಕೊಟ್ಟಿದ್ದಾರೆ. ರೋಹಿತ್ ಹೀರೋ ಆಗಿ ನಟಿಸುತ್ತಿರುವ ಈ ಚಿತ್ರದ ಟೈಟಲ್ ಟ್ರ್ಯಾಕ್ ಗೆ ಚಿಟ್ಟೆ ಧ್ವನಿಯಾಗಿದ್ದಾರೆ. 

ಸುಜಿತ್ ವೆಂಕಟ್ ವೆಂಕಟರಾಮಯ್ಯ ಸಾಹಿತ್ಯ, ಧೀರೇಂದರ್ ದಾಸ್ ಸಂಗೀತ ಈ ಹಾಡಿಗಿದ್ದು, ಶೀಘ್ರದಲ್ಲಿ ರಕ್ತಾಕ್ಷ ಟೈಟಲ್ ಟ್ರ್ಯಾಕ್ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಲಿದೆ. 

ಚಿಕ್ಕಂದಿನಿಂದಲೇ ಬಣ್ಣದ ಲೋಕದಲ್ಲಿ ಮಿಂಚಬೇಕೆಂಬ ಕನಸುಕಟ್ಟಿಕೊಂಡಿರುವ ಪ್ರತಿಭಾವಂತ ರೋಹಿತ್,  ತನ್ನಜೊತೆ ಹಳ್ಳಿ ಪ್ರತಿಭೆಗಳಿಗೂ ಈ ಸಿನಿಮಾದಲ್ಲಿ ಅವಕಾಶ ಕೊಟ್ಟಿದ್ದಾರೆ. 

ಉಳಿದ ತಾರಾಬಳಗ ಹಾಗೂ ತಾಂತ್ರಿಕ ವರ್ಗವನ್ನು ಮುಂದಿನ ದಿನಗಳಲ್ಲಿ ಚಿತ್ರತಂಡ ರಿವೀಲ್ ಮಾಡಲು ಪ್ಲಾನ್ ಹಾಕಿಕೊಂಡಿದೆ.ಸುಜಿತ್ ವೆಂಕಟ್ ವೆಂಕಟರಾಮಯ್ಯ ಸಾಹಿತ್ಯ, ಧೀರೇಂದರ್ ದಾಸ್ ಸಂಗೀತ ಈ ಹಾಡಿಗಿದೆ.

Latest Videos

click me!