'ಪೆದ್ದಿ' ಚಿತ್ರದ ಪ್ರಚಾರಕ್ಕಾಗಿ ನಟಿ ಜಾಹ್ನವಿ ಕಪೂರ್ ಬೆಂಗಳೂರಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಕನ್ನಡದಲ್ಲಿ ಮಾತನಾಡಿ ಅಭಿಮಾನಿಗಳ ಮನಗೆದ್ದ ಅವರು, ರಾಮ್ ಚರಣ್ ಮತ್ತು ಶಿವರಾಜ್‌ಕುಮಾರ್ ಅವರೊಂದಿಗೆ ವೇದಿಕೆ ಹಂಚಿಕೊಂಡರು
80-90ರ ದಶಕದಲ್ಲಿ ಬಾಲಿವುಡ್ ಆಳಿ, ಹಲವರ ನಿದ್ದೆ ಕದ್ದ ಸುರಸುಂದರಿ ಶ್ರೀದೇವಿಯ ಪುತ್ರಿ ಜಾಹ್ನವಿ ಕಪೂರ್ ಅವರು ಸದ್ಯ ಬಾಲಿವುಡ್ನಲ್ಲಿ ಬಿಜಿಯಾಗಿದ್ದಾರೆ. ಇದೀಗ ನಟಿ ನಟಿಸಿರುವ ಆ್ಯಕ್ಷನ್-ಪ್ಯಾಕ್ಡ್ ಸ್ಪೋರ್ಟ್ಸ್ ಡ್ರಾಮಾ 'ಪೆದ್ದಿ' ಜೂನ್ 4ರಂದು ಬಿಡುಗಡೆಯಾಗಲಿದ್ದು, ಅದರ ಪ್ರಚಾರಕ್ಕೆ ಬೆಂಗಳೂರಿಗೆ ಬಂದಿದ್ದರು.
26
ಪೆದ್ದಿ ಸಿನಿಮಾದ ಪ್ರಮೋಷನ್
ನಟ ಶಿವರಾಜ್‌ಕುಮಾರ್ ಹಾಗೂ ರಾಮ್ ಚರಣ್ ಅವರು ಸಿನಿಮಾದಲ್ಲಿ ಇರುವುದು ವಿಶೇಷ. ರಾಮ್ ಚರಣ್ ಜೋಡಿಯಾಗಿ ಜಾಹ್ನವಿ ಕಪೂರ್ ನಟಿಸಿದ್ದರೆ, ಜಗಪತಿ ಬಾಬು, ಬೊಮನ್ ಇರಾನಿ, ಶಿವರಾಜ್‌ಕುಮಾರ್ ಸೇರಿದಂತೆ ದೊಡ್ಡ ತಾರಾಬಳಗ ಈ ಚಿತ್ರದಲ್ಲಿದೆ. ಇದಾಗಲೇ ರಾಮ್ ಚರಣ್ ಅವರ ಪಾತ್ರದ ಮೇಕ್ ಓವರ್ ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.
36
ಕನ್ನಡದಲ್ಲಿ ಜಾಹ್ನವಿ ಕಪೂರ್ ಮಾತು
ಪೆದ್ದಿ ಚಿತ್ರಕ್ಕಾಗಿ ಚಿತ್ರತಂಡ ಬೆಂಗಳೂರಿನಲ್ಲಿ ಪ್ರಚಾರಕ್ಕೆ ಬಂದಾಗ ಹೈಲೈಟ್ ಆಗಿದ್ದು, ನಟಿ ಜಾಹ್ನವಿ ಕಪೂರ್ ಅವರ ಕನ್ನಡದ ಮಾತು. ಎಲ್ಲರೂ ಹೇಗಿದ್ದೀರಾ, ನಿಮ್ಮನ್ನು ನೋಡಿ ನನಗೆ ತುಂಬಾ ಸಂತೋಷವಾಯ್ತು ಎಂದು ನಟಿ ಹೇಳಿದಾಗ ಅಭಿಮಾನಿಗಳು ಹುಚ್ಚೆದ್ದು ಕುಣಿದರು.
ಈ ವಾಕ್ಯವನ್ನು ಬೆಳಿಗ್ಗೆಯಿಂದ ತುಂಬಾ ಸಲ ಪ್ರಾಕ್ಟೀಸ್ ಮಾಡಿರುವುದಾಗಿ ಆ್ಯಂಕರ್ ಅನುಶ್ರೀ ಅವರು ಹೇಳಿದರು. ಬಳಿಕ ನಟಿ, ಇಂಗ್ಲಿಷ್ನಲ್ಲಿ ಇದೊಂದು ವಿಭಿನ್ನ ಚಿತ್ರ. ಅದರಲ್ಲೂ ರಾಮ್ ಚರಣ್ ಜೊತೆ ವರ್ಕ್ ಮಾಡಿದ್ದು ಒಂದೊಳ್ಳೆ ಅನುಭವ. ನನಗೆ ಬೆಂಗಳೂರು ಅಂದ್ರೆ ಇಷ್ಟ ಎಂದು ತಿಳಿಸಿದರು.
56
ಶಿವರಾಜ್‌ಕುಮಾರ್ ಮಾತು
ಈ ಸಂದರ್ಭದಲ್ಲಿ ಶಿವರಾಜ್‌ಕುಮಾರ್ ಅವರು, ''ಚಿರಂಜೀವಿ ಸರ್ ಕುಟುಂಬಕ್ಕೂ ನಮ್ಮ ಕುಟುಂಬಕ್ಕೂ ಅವಿನಾಭಾವ ಸಂಬಂಧವಿದೆ. ಡೈರೆಕ್ಟರ್ ಬುಚಿ ಬಾಬು ಸನಾ ಅವರು ಪೆದ್ದಿ ಚಿತ್ರದಲ್ಲಿ ನೀವು ಅಭಿನಯಿಸಬೇಕು ಅಂದಾಗ ನಾನು ಒಪ್ಪಿಕೊಂಡೆ. ಚಿರಂಜೀವಿ ಸರ್ ಫ್ಯಾಮಿಲಿ ಜೊತೆ ಇರುವ ಬಾಂಡಿಂಗ್ ಒಂದು ಕಾರಣವಾದ್ರೆ, ಮತ್ತೊಂದು ರಾಮ್ ಚರಣ್ ತೇಜಾ ಮೇಲಿರುವ ಪ್ರೀತಿ ಎಂದರು.
66
ರಾಮ್ಚರಣ್ ಹೇಳಿದ್ದೇನು?
ರಾಮ್ಚರಣ್ ತುಂಬಾ ಎಫರ್ಟ್ ಹಾಕಿದ್ದಾರೆ. ಅದನ್ನು ನೋಡಿದ್ರೆ ನ್ಯಾಷನಲ್ ಅವಾರ್ಡ್ ಕೊಡುವಷ್ಟು ಚೆನ್ನಾಗಿ ಈ ಸಿನಿಮಾ ಮೂಡಿ ಬಂದಿದೆ. ಅದಕ್ಕೆ ನಾನು ಗ್ಯಾರಂಟಿ ಎಂದಿದ್ದಾರೆ. ಬಳಿಕ ರಾಮ್ ಚರಣ್ ಅವರು, ಈ ಸಿನಿಮಾದಲ್ಲಿ ಶಿವಣ್ಣ ನನ್ನ ಗುರುವಿನ ಪಾತ್ರ ಮಾಡಿದ್ದಾರೆ. ಅವರು ಈ ಪಾತ್ರ ನಿರ್ವಹಿಸಿದ್ದು ನನಗೆ ಬಹಳ ಖುಷಿ ಆಯಿತು. ಏಕೆಂದರೆ ಅವರನ್ನು ಬಿಟ್ಟು ಬೇರೆ ಯಾರೇ ಈ ಪಾತ್ರ ಮಾಡಿದ್ರೂ ಅಷ್ಟು ಚೆನ್ನಾಗಿ ಇರುತ್ತಿರಲಿಲ್ಲ ಎಂದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.