ಕಂಡವರ ದುಡ್ಡಲ್ಲಿ ಶೋಕಿ ಮಾಡಿದ್ರೆ ಹೀಗೆ ಆಗೋದು; ಪವಿತ್ರಾ ಗೌಡ ಕಾಸಿನ ಸರ ನೋಡಿ ಕಾಲೆಳೆದ ನೆಟ್ಟಿಗರು!

First Published | Sep 16, 2024, 5:33 PM IST

ವೈರಲ್ ಆಯ್ತು ಪವಿತ್ರಾ ಗೌಡ ಗೌರಮ್ಮ ಲುಕ್. ಕುತ್ತಿಗೆಯಲ್ಲಿ ಇರುವ ಸರಗಳ ಮೇಲೆ ನೆಟ್ಟಿಗರ ಕಣ್ಣು....
 

ಮೊದ ಮೊದಲು ಪವಿತ್ರಾ ಗೌಡ ಅಂದ್ರೆ ಯಾರು ಅಂತ ಅನೇಕರಿಗೆ ಗೊತ್ತಾಗುತ್ತಿರಲಿಲ್ಲ. ಈಗ ಪವಿತ್ರಾ ಗೌಡ ಅಂತ ಹೆಸರು ಕೇಳಿದರೆ ಸಾಕು...ಓ ಎಂದು ರೇಣುಕಾಸ್ವಾಮಿ ಕೊಲೆ ಪ್ರಕರಣ ನೆನಪು ಮಾಡಿಕೊಳ್ಳುತ್ತಾರೆ.

 ಒಂದೆರಡು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಪವಿತ್ರಾ ಗೌಡ ಸದ್ಯ ನಟನೆಯಿಂದ ದೂರ ಉಳಿದು ಫ್ಯಾಷನ್ ಡಿಸೈನರ್ ಆಗಿ ಬ್ಯುಸಿನೆಸ್ ನಡೆಸುತ್ತಿದ್ದಾರೆ. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಅಂಗಡಿ ಹೊಂದಿದ್ದಾರೆ.

Tap to resize

ಕಳೆದ ವರ್ಷ ವರಮಹಾಲಕ್ಷ್ಮಿ ಅಥವಾ ಗೌರಿ ಗಣೇಶ ಹಬ್ಬದಂದು ಪವಿತ್ರಾ ಗೌಡ ಮಾಡಿಸಿದ ಫೋಟೋಶೂಟ್ ಈಗ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್ ಆಗಿದೆ. ಈಗ ವೈರಲ್ ಆಗುತ್ತಿರುವುದಕ್ಕೆ ಟ್ರೋಲ್ ಆಗುತ್ತಿದೆ.

ಪಿಂಕ್ ಆಂಡ್ ಪರ್ಪಲ್ ಕಾಂಬಿನೇಷನ್‌ ರೇಶ್ಮೆ ಸೀರೆ ಧರಿಸಿರುವ ಪವಿತ್ರಾ ಗೌಡ ಇದಕ್ಕೆ ಕಲಂಕಾರಿ ವರ್ಕ್ ಇರುವ ಬ್ಲೌಸ್ ಧರಿಸಿದ್ದಾರೆ. ಇದು ಪವಿತ್ರಾನೇ ಡಿಸೈನ್ ಮಾಡಿರುವ ಬ್ಲೌಸ್.

ಈ ಸೀರೆಯ ಲುಕ್ ಹೆಚ್ಚಿಸಲು ಪವಿತ್ರಾ ಗೌಡ ಸೊಂಟಕ್ಕೆ ಚಿನ್ನದ ಡಾಬು, ಡೈಮೆಂಡ್ ಸ್ಟೋನ್ ಇರುವ ಚೋಕರ್ ಮತ್ತು ಉದ್ದ ಕಾಸಿನ ಸರ ಮತ್ತು ಒಂದೆರಡು ಬಳೆಗಳನ್ನು ಧರಿಸಿದ್ದಾರೆ. ಈ ಲುಕ್‌ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು.

ಕಂಡೋರ ಹಣದಲ್ಲಿ ಶೋಕಿ ಮಾಡಬಾರದು, ಸೆಕೆಂಡ್ ಹ್ಯಾಂಡ್ ಆಗಿರುವುದಕ್ಕೆ ಅತ್ತಿಗೆ ಒಡವೆ ಧರಿಸಿರಬೇಕು, ನಮ್ಮ ಅಣ್ಣನ ದುಡ್ಡು ಇಲ್ಲಿ ಖರ್ಚಾಗುತ್ತಿದೆ, ಯಾರ್ದೋ ದುಡ್ಡು ಎಲ್ಲಮ್ಮನ ಜಾತ್ರೆ ಎಂದು ನೆಟ್ಟಿಗರು ಕಾಮೆಂಟ್‌ ಮಾಡಿ ಕಾಲೆಳೆದಿದ್ದಾರೆ. 

Latest Videos

click me!