ಮಲೆ ಮಹದೇಶ್ವರ ಬೆಟ್ಟಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿದ ಉಮಾಪತಿ ಶ್ರೀನಿವಾಸ್; ಫೋಟೋ ವೈರಲ್!

Published : Sep 14, 2024, 11:41 AM ISTUpdated : Sep 14, 2024, 11:42 AM IST

ಮಹದೇಶ್ವರನ ದರ್ಶನ ಪಡೆದ ಖ್ಯಾತ ನಿರ್ಮಾಪಕ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್.....   

PREV
16
ಮಲೆ ಮಹದೇಶ್ವರ ಬೆಟ್ಟಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿದ ಉಮಾಪತಿ ಶ್ರೀನಿವಾಸ್; ಫೋಟೋ ವೈರಲ್!

ಕಿಚ್ಚ ಸುದೀಪ್ ನಟನೆಯ ಹೆಬ್ಬುಲಿ ಸಿನಿಮಾವನ್ನು ಉಮಾಪತಿ ಶ್ರೀನಿವಾಸ್ ನಿರ್ಮಾಣ ಮಾಡಿರುವುದು. 2017ರಲ್ಲಿ ಕೋಟಿಗಟ್ಟಲೆ ಕಲೆಕ್ಷನ್ ಮಾಡಿದ ಸಿನಿಮಾವಿದು.

26

ಇದಾದ ಮೇಲೆ ರೋರಿಂಗ್ ಸ್ಟಾರ್ ಶ್ರೀಮುರಳ ಮತ್ತು ಆಶಿಕಾ ರಂಗನಾಥ್ ನಟನೆಯ ಮದಗಜ ಸಿನಿಮಾ ನಿರ್ಮಾಣ ಮಾಡಿದ್ದರು, ಇದಾದ ಮೇಲೆ ದರ್ಶನ್ ನಟನೆಯ ರಾಬರ್ಟ್ ಸಿನಿಮಾ ನಿರ್ಮಾಣ ಮಾಡಿದರು.

36

ಸ್ಟಾರ್ ನಟರ ಸಹಾಯವಿಲ್ಲದೆ ಸಿನಿಮಾ ಹಿಟ್ ಮಾಡುತ್ತೀನಿ ಎಂದು ಹಾಸ್ಯ ನಟ ಚಿಕ್ಕಣ್ಣ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡ ಉಪಾಧ್ಯಕ್ಷ ಚಿತ್ರಕ್ಕೂ ಉಮಾಪತಿ ಬಂಡವಾಳ ಹಾಕಿದ್ದರು.

46

 ಇತ್ತೀಚಿಗೆ ಉಮಾಪತಿ ಶ್ರೀನಿವಾಸ್ ತಮ್ಮ ಫ್ಯಾಮಿಲಿ ಜೊತೆ ಮಲೆ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಫೋಟೋ ಅಪ್ಲೋಡ್ ಮಾಡಿದ್ದಾರೆ.

56

'ಶ್ರೀ ಮಲೆ ಮಹದೇಶ್ವರ ಬೆಟ್ಟಕೆ ಕುಟುಂಬ ಸಮೇತರಾಗಿ ಭೇಟಿ ನೀಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಶ್ರೀ ಮಲೆ ಮಹದೇಶ್ವರ ಸ್ವಾಮಿ ಮಠದ ಸ್ವಾಮೀಜಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆಯಲಾಯಿತು' ಎಂದು ಉಮಾಪತಿ ಬರೆದುಕೊಂಡಿದ್ದಾರೆ.

66

ಒಂದಲ್ಲ ಒಂದು ಕಾರಣಕ್ಕೆ ಉಮಾಪತಿ ಶ್ರೀನಿವಾಸ್ ಸುದ್ದಿಯಲ್ಲಿದ್ದಾರೆ. ಸ್ಟಾರ್ ನಟ ಬಗ್ಗೆ ನಿರ್ಮಾಪಕರು ನೀಡುವ ಹೇಳಿಕೆ ಎಲ್ಲೆಡೆ ವೈರಲ್ ಆಗುತ್ತದೆ. ನಿರ್ಮಾಪಕರಿಗೂ ಫ್ಯಾನ್ ಬೇಸ್ ಇದ್ದಾರೆ ಅಂದ್ರೆ ಅದು ಶ್ರೀನಿವಾಸ್‌ಗೆ ಮಾತ್ರ ಎನ್ನಬಹುದು. 

Read more Photos on
click me!

Recommended Stories