ಬ್ಲೌಸ್ ಧರಿಸದೇ ಕೇರಳ ಸೀರೆಯುಟ್ಟ ಚೈತ್ರಾ ಆಚಾರ್… ಓಣಂಗೆ ಹೀಗೂ ಡ್ರೆಸ್ ಮಾಡ್ತಾರ?

First Published | Sep 14, 2024, 5:51 AM IST

ಸ್ಯಾಂಡಲ್ ವುಡ್ ನಲ್ಲಿ ತಮ್ಮ ಬೋಲ್ಡ್ ಪಾತ್ರ, ನಟನೆ ಮತ್ತು ಡ್ರೆಸ್ಸಿಂಗ್ ನಿಂದಾನೆ ಸುದ್ದಿಯಲ್ಲಿರೋ ನಟಿ ಚೈತ್ರಾ ಆಚಾರ್ ಇದೀಗ ಬ್ಲೌಸ್ ಧರಿಸದೆ ಸೀರೆಯುಟ್ಟು ಫೋಟೊ ಶೂಟ್ ಮಾಡಿಸಿದ್ದಾರೆ. 
 

ಸ್ಯಾಂಡಲ್ ವುಡ್ ಬೆಡಗಿ ಚೈತ್ರಾ ಆಚಾರ್ (Chaithra Achar) ತಮ್ಮ ನಟನೆಯಲ್ಲಿ ಎಷ್ಟೊಂದು ಬೋಲ್ಡ್ ಆಗಿದ್ದಾರೋ? ಅಷ್ಟೇ ಬೋಲ್ಡ್ ತಮ್ಮ ಫೋಟೋ ಶೂಟ್ ನಲ್ಲೂ ತೋರಿಸುತ್ತಾರೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಇದೀಗ ಮತ್ತೊಂದು ಬಾರಿ ತಮ್ಮ ಬೋಲ್ಡ್ ನೆಸ್ ತೋರಿಸಿದ್ದಾರೆ. 
 

ಅದು ಟ್ರೆಡಿಶನಲ್ ಆಗಿರಲಿ, ಮಾಡರ್ನ್ ಲುಕ್ ಆಗಿರಲಿ ಯಾವುದೇ ಫ್ಯಾಷನ್ ಗೂ ಚೈತ್ರಾ ಆಚಾರ್ ಯಾವಾಗ್ಲೂ ಮುಂದು. ಸೋಶಿಯಲ್ ಮೀಡಿಯಾದಲ್ಲಿ (spcial media) ಆಕ್ಟೀವ್ ಆಗಿರುವ ನಟಿ ದಿನವೊಂದಕ್ಕೆ ಒಂದರಂತೆ ಫೋಟೊ ಶೂಟ್ ಮಾಡಿ ಶೇರ್ ಮಾಡ್ತಿರ್ತಾರೆ. 
 

Tap to resize

ಇದಕ್ಕೂ ಮೊದಲು ಚೈತ್ರಾ ಆಚಾರ್  ಬ್ಯಾಕ್ ಲೆಸ್ ಫೋಟೊ (backless photo), ಸ್ವಿಮ್ಮಿಂಗ್ ಸೂಟ್, ಟ್ರಾನ್ಸ್ಪ್ರೆಂಟ್ ಡ್ರೆಸಲ್ಲೂ ಫೋಟೊ ಶೂಟ್ ಮಾಡಿಸಿ, ತಮ್ಮ ಇನ್’ಸ್ಟಾಗ್ರಾಂ ಪೇಜ್ ನಲ್ಲಿ ಫೋಟೊಗಳನ್ನು ಹಂಚಿಕೊಳ್ಳುವ ಮೂಲಕ ಚೈತ್ರಾ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದರು. 
 

ಇದೀಗ ಮತ್ತೊಮ್ಮೆ ತಮ್ಮ ಬೋಲ್ಡ್ ಫೋಟೊ ಶೂಟ್ ಮೂಲಕ ಸದ್ದು ಮಾಡ್ತಿದ್ದಾರೆ. ಈ ಬಾರಿ ಬ್ಲೌಸ್ ಧರಿಸದೇ ಸೀರೆಯುಟ್ಟು, ಬ್ಯಾಕ್ ಸೈಡ್ ನಿಂದ ಫೋಟೊ ಶೂಟ್ ಮಾಡಿಸಿದ್ದು ನೆಟ್ಟಿಗರು ಹುಬ್ಬೇರಿಸುವಂತಿದೆ ಪ್ರತಿಯೊಂದು ಫೋಟೊಗಳು. 
 

ಹೇಳಿ ಕೇಳಿ ಈಗ ಕೇರಳದಲ್ಲಿ ಓಣಂ ಶುರು, ಈ ಟೈಮಲ್ಲೇ ನಟಿ ಕೇರಳದ ಪಟ್ಟು ಸೀರೆಯಂತಹ ಬಿಳಿ ಬಣ್ಣದ ಸೀರೆಯುಟ್ಟು, ಸೆರಗನ್ನು ಬಿಟ್ಟಿದ್ದು, ಬ್ಯಾಕ್ ಫೇಸ್ ಮಾಡಿ ಫೋಟೊ ತೆಗೆಸಿಕೊಂಡಿದ್ದಾರೆ. ಈ ಅರೆ ನಗ್ನ ಫೋಟೊಗಳು ಚೈತ್ರಾ ಆಚಾರ್ ಬೋಲ್ಡ್ ನೆಸ್ ಗೆ ಮತ್ತೊಂದು ಸಾಕ್ಷಿ ಅಂತಾನೆ ಹೇಳಬಹುದು. 
 

ಕೆಲದಿನಗಳ ಹಿಂದೆ ಕೂಡ ನಟಿ ಇದೇ ಸಿರೀಸ್ ಫೋಟೊಗಳನ್ನು ಶೇರ್ ಮಾಡಿದ್ದರು. ಫೋಟೊ ಕ್ಯಾಪ್ಶನ್ ನೋಡಿದ್ರೆ ತಮ್ಮ ಬೆನ್ನ ಹಿಂದೆ ಮಾತನಾಡೋರಿಗೆ ಟಾಂಗ್ ಕೊಟ್ಟಂತಿದೆ. ಈ ಹಿಂದೆ ನಟಿ ತಾನು ಫಿಟ್ನೆಸ್ ಮೈಂಟೇನ್ ಮಾಡ್ತಿದ್ದೀನಿ, ಹಾಗಾಗಿ ತಮಗೆ ಇಷ್ಟವಾಗುವ ಕಂಫರ್ಟೇಬಲ್ ನೀಡುವ ಡ್ರೆಸ್ ಧರಿಸುತ್ತೇನೆ ಎಂದಿದ್ದ ಸಪ್ತ ಸಾಗರದಾಚೆ ಬೆಡಗಿ ಈ ಬಾರಿ ತಮ್ಮ ಬ್ಯಾಕ್ ಲೆಸ್ ಫೋಟೊ ಹಾಕಿ ಏನು ಹೇಳಿದ್ರು ನೋಡಿ. 
 

ನಾನು ಈ ರೀತಿ ಬೆನ್ನು ತೋರಿಸಿದ್ರೆ ಮುಗಿತು, ಖಂಡಿತವಾಗಿಯೂ ಜನರು ನನ್ನ ಬಗ್ಗೆ ಬೆನ್ನ ಹಿಂದೆ ಸಾಕಷ್ಟು ಮಾತನಾಡುತ್ತಾರೆ ಎಂದು ಕ್ಯಾಪ್ಶನ್ ಕೊಡುವ ಮೂಲಕ ಬೆನ್ನ ಹಿಂದೆ ಮಾತನಾಡೋರಿಗೆ ತಿರುಗೇಟು ನೀಡಿದ್ದಾರೆ. ಇದಕ್ಕೆ ನಟಿ ಸಂಯುಕ್ತಾ ಹೆಗ್ಡೆ ಕೂಡ, ಖಂಡಿತವಾಗಿಯೂ ಹೌದು, ಯಾರೂ ನೇರವಾಗಿ ಮಾತನಾಡಲ್ಲ ಎಂದಿದ್ದಾರೆ. 
 

Latest Videos

click me!