ಪವಿತ್ರಾ ಗೌಡ ಪುತ್ರಿಯ ಹೊಸ ಫೋಟೋಶೂಟ್ ವೈರಲ್; ಪುಂಡರಿಂದ ದೂರ ಉಳಿಯಲು ಕಾಮೆಂಟ್ಸ್ ಆಫ್?

First Published | Nov 19, 2024, 3:20 PM IST

ಗೊಂಬೆಯಂತೆ ರೆಡಿಯಾದ ಪವಿತ್ರಾ ಗೌಡ ಪುತ್ರಿ. ಕಾಮೆಂಟ್ಸ್ ಆಫ್‌ ಮಾಡಿದ್ದಕ್ಕೆ ಬೇಸರ ವ್ಯಕ್ತ ಪಡಿಸಿದ ನೆಟ್ಟಿಗರು.....

ಕನ್ನಡ ಚಿತ್ರರಂಗದ ನಟಿ ಹಾಗೂ ಸೆಲೆಬ್ರಿಟಿ ಫ್ಯಾಷನ್ ಡಿಸೈನರ್ ಪವಿತ್ರಾ ಗೌಡರವರ ಮುದ್ದಿನ ಮಗಳು ಖುಷಿ ಹೊಸ ಫೋಟೋಶೂಟ್ ಮಾಡಿಸಿದ್ದಾರೆ. 

ಸುಮಾರು 23 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿರುವ ಖುಷಿ ಗೌಡ ಪಿಂಕ್ ರೇಶ್ಮೆ ಸೀರೆ ಧರಿಸಿ ಮೇಕಪ್ ಮಾಡಿಸಿಕೊಂಡು ಫೋಟೋಶೂಟ್ ಮಾಡಿದ್ದಾರೆ.

Tap to resize

ಸಚಿನ್ ಮೇಕ್‌ಓವರ್‌ ಎಂಬುವವರು ಖುಷಿಗೆ ಮೇಕಪ್ ಮಾಡಿದ್ದಾರೆ. ಜಡೆ ಹಾಕಿ ಅದಕ್ಕೆ ಬೈತಲೆ ಬೊಟ್ಟು ಕೈ ತುಂಬಾ ಬಳೆ, ಸೊಂಟಕ್ಕೆ ಡಾಬು ಹಾಕಿದ್ದಾರೆ ಖುಷಿ.

ಪಿಂಕ್ ಸೀರೆಯಲ್ಲಿ ಖುಷಿ ಹೈಲೈಟ್ ಆಗಲು ಪ್ರಮುಖ ಕಾರಣವೇ ಫುಲ್ ಕೈ ಕವರ್ ಆಗುತ್ತಿರುವ ಬ್ಲೌಸ್ ಹಾಗೂ ನಗು ಮುಖ. ಈ ಸೀರೆಯಲ್ಲಿ ಸೇಮ್‌ ತಾಯಿ ಪವಿತ್ರಾ ರೀತಿ ಕಾಣಿಸುತ್ತಿದ್ದಾರೆ. 

ಪವಿತ್ರಾ ಗೌಡ ಪರಪ್ಪನ ಅಗ್ರಹಾರ ಸೇರಿ ಸುಮಾರು 4 ತಿಂಗಳು ಕಳೆದಿದೆ. ತಾಯಿಯನ್ನು ಮಿಸ್ ಮಾಡಿಕೊಳ್ಳುತ್ತೀನಿ ಎಂದು ಆಗಾಗ ಪೋಸ್ಟ್‌ ಹಾಕುತ್ತಿರುತ್ತಾರೆ ಅಲ್ಲದೆ ತಾಯಿನೇ ನನ್ನ ಬೆಸ್ಟ್‌ ಫ್ರೆಂಡ್ ಮತ್ತು ರೂಲ್ ಮಾಡಲ್‌ ಎಂದು ಹೆಮ್ಮೆ ಎಂದು ಬರೆದುಕೊಂಡಿದ್ದರು. 

ಪವಿತ್ರಾ ಗೌಡ ನಡೆಸುತ್ತಿದ್ದ ರೆಡ್‌ ಕಾರ್ಪೆಟ್‌ ಡಿಸೈನರ್‌ ಸ್ಟುಡಿಯೋವನ್ನು ಈಗ ಖುಷಿ ಗೌಡ ಮುಂದುವರೆಸುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪೇಜ್‌ ಅಪ್‌ ಟುಡೇಟ್‌ ಆಗಿಟ್ಟಿರುತ್ತಾರೆ. 

ಮೇಕಪ್‌ ಮಾಡಿರುವ ಸಚಿನ್ ಈ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ಕಾಮೆಂಟ್ಸ್‌ ಸೆಕ್ಷನ್ ಆಫ್ ಆಗಿರುವುದಕ್ಕೆ ಅಭಿಮಾನಿಗಳು ಬೇಸರ ವ್ಯಕ್ತ ಪಡಿಸುತ್ತಿದ್ದಾರೆ. ಕಾಮೆಂಟ್ ಮಾಡುವ ಅವಕಾಶವಿದ್ದರೆ ನಮ್ಮ ಬೆಂಬಲ ಸೂಚಿಸುತ್ತಿದ್ದೆವು ಎಂದಿದ್ದಾರೆ. 

Latest Videos

click me!