ಕೈಯಲ್ಲಿ ರೋಜಾ ಹೂ ಹಿಡಿದು ಯಾವ ಊರಿನ ರಾಜನಿಗಾಗಿ ಕಾಯ್ತಿದ್ದಾರೆ ಈ ‘ಯುವರಾಣಿ’

First Published | Nov 19, 2024, 3:12 PM IST

ಇತ್ತೀಚೆಗಷ್ಟೇ ವಿಂಟೇಜ್ ಲುಕ್ ನಲ್ಲಿ ಪೋಸ್ ಕೊಟ್ಟ ಕಾಂತಾರ ಚೆಲುವೆ ಸಪ್ತಮಿ ಗೌಡ ಇದೀಗ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಪ್ತಮಿಯ ಹೊಸ ಲುಕ್ ಸದ್ದು ಮಾಡುತ್ತಿದೆ.
 

ಕಾಂತಾರಾ, ಯುವ ಸಿನಿಮಾದ ಮೂಲಕ ಮೋಡಿ ಮಾಡಿದ ಚೆಲುವೆ ಸಪ್ತಮಿ ಗೌಡ (Sapthami Gowda), ಸದ್ಯಕ್ಕಂತೂ ತಮ್ಮ ಸಿನಿಮಾಗಿಂತ ಸೋಶಿಯಲ್ ಮೀಡಿಯಾದಲ್ಲಿ ಫೋಟೊಗಳನ್ನು ಶೇರ್ ಮಾಡುವ ಮೂಲಕ ಹೆಚ್ಚು ಸದ್ದು ಮಾಡುತ್ತಿದ್ದಾರೆ. 
 

ಇತ್ತೀಚೆಗೆ ಸಪ್ತಮಿ ಗೌಡ ಸೀರೆಯುಟ್ಟು, ಜಡೆ ಹಾಕಿ , ತಲೆ ತುಂಬಾ ಹೂವು ಮೂಡಿದು, ಕೈಯಲ್ಲಿ ಇನ್ ಲ್ಯಾಂಡ್ ಲೆಟರ್ ಹಿಡಿದು,  ವೆಂಟೇಜ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಯುವ ಚೆಲುವೆ ಅಪ್ಸರೆಯಂತೆ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
 

Tap to resize

ಸೋಶಿಯಲ್ ಮೀಡಿಯಾದಲ್ಲಿ (Social media)ಆಕ್ಟಿವ್ ಆಗಿರುವ ಸಪ್ತಮಿ ಗೌಡ ಇದೀಗ ಹೊಸ ಫೋಟೋ ಶೂಟ್ ಶೇರ್ ಮಾಡಿದ್ದು, ನಟಿ ಸುಂದರವಾದ ಲಾಂಗ್ ಗೌನ್ ಧರಿಸಿ ಕೈಯಲ್ಲಿ ಗುಲಾಬಿ ಹೂಗಳನ್ನು ಹಿಡಿದು ಮುದ್ದಾಗಿ ಪೋಸ್ ಕೊಟ್ಟಿದ್ದಾರೆ. ಇವರ ಹೊಸ ಲುಕ್ ಗೆ ಅಭಿಮಾನಿಗಳು ಮನ ಸೋತಿದ್ದಾರೆ. 
 

ಕಾಂತಾರ  (Kantara Film)ಬೆಡಗಿ ಸಪ್ತಮಿ ನೀಲಿ ಬಣ್ಣದ ಡೀಪ್ ನೆಕ್ ಗೌನ್ ಧರಿಸಿದ್ದು, ಅದರ ಜೊತೆ ಸಿಂಪಲ್ ಆಗಿ ಮಿನಿಮಲ್ ಜ್ಯುವೆಲರಿ ಧರಿಸಿದ್ದಾರೆ. ಹೇರ್ ಸ್ಟೈಲ್ ಕೂಡ ತುಂಬಾನೇ ವಿಭಿನ್ನವಾಗಿದೆ. ಸಿಂಪಲ್ ಹಾಗೂ ಎಲಿಗೆಂಟ್ ಲುಕ್ ನಲ್ಲಿ ಸಪ್ತಮಿ ಗೌಡ ಮೋಡಿ ಮಾಡುತ್ತಿರುವುದು ನಿಜ. ಇವರನ್ನ ನೋಡಿದ್ರೆ, ಧರೆಗಿಳಿದು ಬಂದ ಅಪ್ಸರೆ ಅಥವಾ ಕಥೆಯಲ್ಲಿ ಬರೋ ಯುವರಾಣಿಯಂತೆ ಕಾಣುತ್ತಿದ್ದಾರೆ. 
 

ಸಪ್ತಮಿ ಗೌಡ ಫೋಟೋ ನೋಡಿ ಅಭಿಮಾನಿಗಳು ತಮ್ಮ ಪ್ರೀತಿಯನ್ನು ಕಾಮೆಂಟ್ ಮೂಲಕ ತಿಳಿಸಿದ್ದು, ಯುವರಾಣಿ, ಪ್ರಿನ್ಸೆಸ್ ಎನ್ನುತ್ತಾ ಕವನಗಳನ್ನು ಕೂಡ ಗೀಚಿದ್ದಾರೆ. ಒಬ್ಬರಂತೂ ಅಂದಕ್ಕೂ ಅಸೂಯೆ ತಂದ, ನಗುವಿಗೂ ನಾಚಿಕೆ ತಂದ, ಸೌಂದರ್ಯದ ಗಣಿಯೊಂದಕ್ಕೆ ಜೀವ ಬಂದಂತಿದೆ ಎಂದಿದ್ದಾರೆ. ಒಟ್ಟಲ್ಲಿ ಸಪ್ತಮಿ ಅಂದಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ.
 

ಇನ್ನು ಸಪ್ತಮಿ ಗೌಡ ಸಿನಿಮಾ ವಿಚಾರಕ್ಕೆ ಬಂದ್ರೆ ಯುವ ಸಿನಿಮಾದ ಬಳಿಕ ಸಪ್ತಮಿ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ತಮಿಳು ಸಿನಿಮಾ ಒಂದರಲ್ಲಿ ನಟಿಸುತ್ತಿರೋದಾಗಿ ತಿಳಿಸಿದ್ದಾರೆ ಆದರೆ ಯಾವ ಸಿನಿಮಾ ಅನ್ನೋದರ ಬಗ್ಗೆ ಸ್ಪಷ್ಟನೆ ಇಲ್ಲ, ಸಿನಿಮಾ ಯಾವಾಗ ರಿಲೀಸ್ ಆಗಲಿದೆ ಅನ್ನೋದು ಕೂಡ ಗೊತ್ತಿಲ್ಲ. 
 

ಡಾಲಿ ಧನಂಜಯ್ (Daali Dhananjay)ನಟಿಸುತ್ತಿರುವ ಹಲಗಲಿ ಎನ್ನುವ ಸಿನಿಮಾಕ್ಕೆ ಸಪ್ತಮಿ ಗೌಡ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ಈ ಸಿನಿಮಾದಲ್ಲಿ ಸಪ್ತಮಿ ಹೊನ್ನಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ಬಿಟ್ಟರೆ ಬೇರೆ ಯಾವ ಸಿನಿಮಾಗಳಲ್ಲೂ ನಟಿಸುವ ಬಗ್ಗೆ ಮಾಹಿತಿ ದೊರೆತಿಲ್ಲ. 
 

Latest Videos

click me!