ಮಗಳನ್ನು ಚಿತ್ರರಂಗಕ್ಕೆ ಕರ್ಕೊಂಡ್ ಬಂದೇ ಬಿಟ್ರು ನಟಿ ವಾಣಿ ಹರೀಶ್‌ಚಂದ್ರ; ಸ್ಟಾರ್‌ ನಟನ ಚಿತ್ರದಲ್ಲಿ ಕನ್ಫರ್ಮ್!

First Published | Nov 18, 2024, 2:07 PM IST

ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ಸಂಭ್ರಮದಲ್ಲಿ ಖುಷಿ. ಸೋಷಿಯಲ್ ಮೀಡಿಯಾದಲ್ಲಿ ತಾಯಿಗೆ ಕೃರಜ್ಞತೆ ರಿಳಿಸಿದ ಸುಂದರಿ............
 

ಕನ್ನಡ ಚಿತ್ರರಂಗ ಮತ್ತು ಬೆಳ್ಳೆ ತೆರೆಯಲ್ಲಿ ಸಖತ್ ಹೆಸರು ಮಾಡಿರುವ ಹಿರಿಯ ನಟಿ ವಾಣಿ ಹರಿಚಂದ್ರ ಇದೀಗ ತಮ್ಮ ಮಗಳು ಖುಷಿಯನ್ನು ಬಣ್ಣದ ಪ್ರಪಂಚಕ್ಕೆ ಬರ ಮಾಡಿಕೊಳ್ಳುತ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಖುಷಿ ಡಿಜಿಟಲ್ ಮಾರ್ಕೆಟರ್, ಮಾಡಲ್ ಮತ್ತು ರಂಗಭೂಮಿ ಕಲಾವಿದೆಯಾಗಿ ಗುರುತಿಸಿಕೊಂಡಿದ್ದಾರೆ. ಗಿಚ್ಚಿ ಗಿಲಿಗಿಲಿ ಸೀಸನ್ 3 ಕಾರ್ಯಕ್ರಮದಲ್ಲಿ ಸ್ಪರ್ಧಿಸಿದ್ದಾರೆ.

Tap to resize

'ಕನಸು ನನಸು ಆಗುವ ಕ್ಷಣ. ನನ್ನ ಜೀವನದ ಅದ್ಭುತ ಕ್ಷಣವನ್ನು ನಿಮ್ಮೊಟ್ಟಿಗೆ ಹಂಚಿಕೊಳ್ಳುತ್ತಿರುವುದು. ನನ್ನ ಬಾಲ್ಯದಿಂದ ನಟನೆ ನನ್ನ ಪ್ಯಾಶನ್ ಅಗಿತ್ತು ಇದಕ್ಕೆ ಶಕ್ತಿ ತುಂಬಿದ್ದು ನನ್ನ ತಾಯಿ, ಅಕೆನೇ ನನ್ನ ಸ್ಪೂರ್ತಿ' ಎಂದು ಖುಷಿ ಬರೆದುಕೊಂಡಿದ್ದಾರೆ.

'ಈಗ ನಾನು ಇಂಡಸ್ಟ್ರಿಗೆ ಕಾಲಿಡುತ್ತಿರುವುದಕ್ಕೆ ಖುಷಿ ಇದೆ. ನನ್ನ ಮೊದಲ ಡೆಬ್ಯೂ ಚಿತ್ರವನ್ನು ಸಿಂಪಲ್ ಸುನಿ ನಿರ್ದೇಶನ ಮಾಡುತ್ತಿದ್ದಾರೆ. ಅದ್ಭುತ ಟ್ಯಾಲೆಂಟ್ ಹೊಂದಿರುವ ಸ್ನೇಹಿತರು ಮತ್ತು ತಂಡದ ಜೊತೆ ಕೈ ಜೋಡಿಸಿರುವೆ' ಎಂದು ಖುಷಿ ಹೇಳಿದ್ದಾರೆ.

 'ನನ್ನ ಸ್ನೇಹಿತರು, ಹಿತೈಷಿಗಳು ತಾಯಿ ಮತ್ತು ಮೆಂಟರ್‌ಗಳ ಸಪೋರ್ಟ್‌ ಇಲ್ಲದೆ ಈ ಜರ್ನಿ ಸಾಧ್ಯವಾಗುತ್ತಿರಲಿಲ್ಲ. ನನ್ನನ್ನು ನಂಬಿ ನನ್ನ ಕನಸಿಗೆ ಸಾಥ್‌ ಕೊಟ್ಟಿದ್ದಕ್ಕೆ ವಂದನೆಗಳು. ಈ ಜರ್ನಿಯನ್ನು ಅರ್ಥ ಪೂರ್ಣವಾಗಿಸುವುದು ನನ್ನ ಗುರಿ' ಎಂದಿದ್ದಾರೆ ಖುಷಿ. 

ಖುಷಿ ತಮ್ಮ ಬಣ್ಣದ ಜರ್ನಿ ಆರಂಭಿಸುತ್ತಿರುವುದಕ್ಕೆ ಸಾಕಷ್ಟು ಮಂದಿ ಕಾಮೆಂಟ್ ಮೂಲಕ ಶುಭ ಹಾರೈಸಿದ್ದಾರೆ. ಈ ಹಿಂದೆ ಖುಷಿ ಮಾಡುತ್ತಿದ್ದ ರೀಲ್ಸ್‌ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿತ್ತು.

Latest Videos

click me!