ಹಾಡು-ಡ್ಯಾನ್ಸ್, ಫೈಟ್ ಇಲ್ಲದ ಮೊದಲ ಕನ್ನಡ ಚಿತ್ರ! ಆದರೂ ಈ ಶಂಕರ್ ನಾಗ್ ಸಿನಿಮಾ 100 ದಿನ ಓಡಿದ್ದು ಹೇಗೆ?

Published : Nov 25, 2026, 02:12 PM IST

Kannada movie: ಒಂದು ಹಾಡು, ಡ್ಯಾನ್ಸ್, ಫೈಟ್ ಸೀನ್ ಗಳಿಲ್ಲಾದೇ ತಯಾರಾದ ಕನ್ನಡದ ಮೊದಲ ಸಿನಿಮಾ ಇದು. ಹಾಗಂತ ಈ ಸಿನಿಮಾದಲ್ಲಿ ಏನೂ ಇಲ್ಲ ಅಂತ ಅಲ್ಲ. ಅದ್ಭುತವಾದ ಡಾರ್ಕ್ ಕ್ರೈಂ ಥ್ರಿಲ್ಲರ್ ಹೊಂದಿರುವ ಈ ಸಿನಿಮಾ ಭರ್ಜರಿ 100 ದಿನಗಳ ಕಾಲ ಪ್ರದರ್ಶನ ಕಂಡಿದೆ. ಆ ಸಿನಿಮಾ ಯಾವುವು ಗೊತ್ತಾ?

PREV
16
ಫೈಟು ಡ್ಯಾನ್ಸ್ ಗಳಿಲ್ಲದ ಮೊದಲ ಕನ್ನಡ ಸಿನಿಮಾ

ಸಿನಿಮಾ ಎಂದರೆ ಮೊದಲು ನೆನಪಾಗುವುದು ಭರ್ಜರಿ ಆಕ್ಷನ್, ಡ್ಯಾನ್ಸ್, ಹಾಡು ಇತ್ಯಾದಿ. ಹಿಂದಿನ ಕಾಲದಲ್ಲಂತೂ ಹಾಡುಗಳೆ ಸಿನಿಮಾದ ಹೆಚ್ಚಿನ ಭಾಗವನ್ನು ಆವರಿಸಿರುತ್ತಿತ್ತು. ಆದರೆ ಒಂದೇ ಒಂದು ಹಾಡು, ಫೈಟ್, ನೃತ್ಯ ಯಾವುದೂ ಇಲ್ಲದ ಕನ್ನಡದ ಮೊದಲ ಸಿನಿಮಾ ಯಾವುದು ಗೊತ್ತಾ? ಇದೊಂದು ಕ್ರೈಂ ಥ್ರಿಲ್ಲರ್ ಆಗಿದ್ದು, ರಾಜ್ಯದಲ್ಲಿ ಭರ್ಜರಿ ಪ್ರದರ್ಶನ ಕೂಡ ಕಂಡಿತ್ತು. ಅದು ಬೇರಾವುದೂ ಅಲ್ಲ್, ಶಂಕರ್ ನಾಗ್ ಅಭಿನಯದ ‘ತರ್ಕ’ ಸಿನಿಮಾ.

26
ಸುನೀಲ್ ಕುಮಾರ್ ದೇಸಾಯಿ ಅವರ ‘ತರ್ಕ’

'ತರ್ಕ' 1989ರಲ್ಲಿ ಬಿಡುಗಡೆಯಾದ ಒಂದು ಮಿಸ್ಟರಿ-ಥ್ರಿಲ್ಲರ್ ಸಿನಿಮಾವಾಗಿದೆ. ಪ್ರವೀಣ್ ನಿರ್ಮಿಸಿರುವ ಈ ಚಿತ್ರಕ್ಕೆ ಸುನಿಲ್ ಕುಮಾರ್ ದೇಸಾಯಿ ಕಥೆ ಬರೆದು ನಿರ್ದೇಶಿಸಿದ್ದಾರೆ; ಇದು ಅವರ ನಿರ್ದೇಶನದ ಚೊಚ್ಚಲ ಚಿತ್ರವಾಗಿದೆ. ಈ ಚಿತ್ರವು ಅಗಾಥಾ ಕ್ರಿಸ್ಟಿ ಅವರ 1958ರ ನಾಟಕ 'ದಿ ಅನ್‌ಎಕ್ಸ್‌ಪೆಕ್ಟೆಡ್ ಗೆಸ್ಟ್' (The Unexpected Guest) ಅನ್ನು ಆಧರಿಸಿದ ಸಿನಿಮಾ.

36
ಹಾಡು ನೃತ್ಯಗಳಿಲ್ಲದ ಮೊದಲ ಕನ್ನಡ ಸಿನಿಮಾ

ಕನ್ನಡ ಚಿತ್ರರಂಗದಲ್ಲಿ ಇದೇ ಮೊದಲ 'ಫಿಲ್ಮ್ ನೋಯರ್' (film noir) ಶೈಲಿಯ ಚಲನಚಿತ್ರವಾಗಿದ್ದು, ಜೊತೆಗೆ ಹಾಡುಗಳು, ನೃತ್ಯಗಳು ಅಥವಾ ಸಾಹಸ ದೃಶ್ಯಗಳಿಲ್ಲದೆ ನಿರ್ಮಿಸಲಾದ ಮೊದಲ ಕನ್ನಡ ಚಿತ್ರವೂ ಹೌದು. 'ತರ್ಕ' ಚಿತ್ರವು 1989ರ ಜನವರಿ 1ರಂದು, ಅಂದರೆ ಹೊಸ ವರ್ಷದ ದಿನದಂದು ಬಿಡುಗಡೆಯಾಯಿತು. ಜೊತೆಗೆ ಹಿಂದಿ ಮತ್ತು ತಮಿಳಿನಲ್ಲಿ ರಿಮೇಕ್ ಕೂಡ ಆಗಿದೆ.

46
‘ತರ್ಕ’ ಸಿನಿಮಾದಲ್ಲಿ ಯಾರ್ಯಾರು ನಟಿಸಿದ್ದಾರೆ?

ಈ ಚಿತ್ರದಲ್ಲಿ ಶಂಕರ್ ನಾಗ್, ವನಿತಾ ವಾಸು ಮತ್ತು ದೇವರಾಜ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಇವರೊಂದಿಗೆ ಅವಿನಾಶ್, ಶಿವರಾಜ್ ಮತ್ತು ಪ್ರವೀಣ್ ನಾಯಕ್ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

56
ಎರಡು ರಾಜ್ಯ ಪ್ರಶಸ್ತಿ, ಜೊತೆಗೆ 100 ದಿನ ಪ್ರದರ್ಶನ

ಚಿತ್ರಕಥೆ ಮತ್ತು ಅತ್ಯುತ್ತಮ ಧ್ವನಿ ಮುದ್ರಣ ವಿಭಾಗಗಳಲ್ಲಿ ಎರಡು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದುಕೊಂಡಿತು. ಇದು ವಾಣಿಜ್ಯಿಕವಾಗಿಯೂ ಯಶಸ್ವಿಯಾಯಿತು ಮತ್ತು ಚಿತ್ರಮಂದಿರಗಳಲ್ಲಿ 100 ದಿನಗಳಿಗೂ ಹೆಚ್ಚು ಕಾಲ ಪ್ರದರ್ಶನಗೊಂಡಿತು.. ಅಷ್ಟೇ ಅಲ್ಲ ಅತ್ಯುತ್ತಮ ನಿರ್ದೇಶನಕ್ಕಾಗಿ ಫಿಲಂ ಫೇರ್ ಪ್ರಶಸ್ತಿಯೂ ಪಡೆದ ಸಿನಿಮಾ ಇದಾಗಿದೆ.

66
ಸಿನಿಮಾ ಕಥೆ ಏನು?

ಜೈಲಿನಿಂದ ತಪ್ಪಿಸಿಕೊಂಡ ಕೈದಿಯೊಬ್ಬ, ತನ್ನ ಬಾಲ್ಯದ ಸ್ನೇಹಿತೆಯ ಮನೆಯಲ್ಲಿ ಅಡಗಿಕೊಳ್ಳಲು ಬರುತ್ತಾನೆ. ಅಲ್ಲಿ ವ್ಯಕ್ತಿಯೊಬ್ಬನ ಶವವನ್ನು ಕಂಡು ಬೆಚ್ಚಿ ಬೀಳುತ್ತಾನೆ. ಆದರೆ ಆ ವ್ಯಕ್ತಿಯು ಈಗಾಗಲೇ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿರುವ ಸುದ್ದಿ ಬರುತ್ತದೆ. ಹಾಗಿದ್ರೆ ಅಲ್ಲಿ ನಡೆದದ್ದು, ಏನು? ಒಂದು ಸಾವಿನ ಸುತ್ತ ನಡೆಯುವ ಕಥೆ ಇದಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories