ನಿಖಿಲ್ ಸತಿಯಾದ ರೇವತಿ, ದಾಂಪತ್ಯಕ್ಕೆ ಕಾಲಿಟ್ಟ ಜಾಗ್ವಾರ್ ಹೀರೋ!

First Published | Apr 17, 2020, 7:52 PM IST

ಜಾಗ್ವಾರ್ ನಿಖಿಲ್ ಮತ್ತು ರೇವತಿ ಮದುವೆ ಅದ್ದೂರಿ ಆಗಿಯೇ ನಡೆದಿದೆ. ಕಡಿಮೆ ಜನರ ಮಧ್ಯೆ ಗೌಡ ಸಂಪ್ರದಾಯದಂತೆ ಶಾಸ್ತ್ರೊಕ್ತವಾಗಿ ಈ ಜೋಡಿ ಸಪ್ತಪದಿ ತುಳಿದಿದೆ.ಯಾರೆಲ್ಲ ಬಂದಿದ್ದರು. ಹೇಗೆಲ್ಲ ಇತ್ತು ಮದುವೆ ಸಂಭ್ರಮ. ನೋಡಿ ಫೋಟೋಗಳಲ್ಲಿ...

ನಿಖಿಲ್ ಜೀವನದಲ್ಲಿ ರೇವತಿ ಜೀವನ ಸಂಗಾತಿಯಾಗಿ ಕಾಲಿಟ್ಟಿದ್ದಾರೆ. ಕೆಲವೇ ಕೆಲವು ಗುರು-ಹಿರಿಯರ ಸಮ್ಮುಖದಲ್ಲಿ ಈ ಜೋಡಿ ಸತಿ ಪತಿಯಾಗಿದೆ.
ಶುಭ ಶುಕ್ರವಾರದ ಈ ಶುಭ ದಿನವೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕುಮಾರಸ್ವಾಮಿ ಪುತ್ರ.
Tap to resize

ಮದುವೆ ಸರಳವಾಗಿ, ಕಡಿಮೆ ಜನರ ಸಮ್ಮುಖದಲ್ಲಿ ನಡೆದರೂ, ಅದ್ಧೂರಿಯಾಗಿಯೇ ಇತ್ತು.
ನಿಖಿಲ್ ಮತ್ತು ರೇವತಿ ಮದುವೆ ನಿಗದಿ ಪಡಿಸಿದ ದಿನವೇ ನೆರವೇರಿದೆ. ಆದರೆ, ಅಂದು ಕೊಂಡ ಆ ಜನ ಸಾಗರದ ಮುಂದೆ ನಡೆದಿಲ್ಲ.
ನಿಖಿಲ್ ಮತ್ತು ರೇವತಿ ಮದುವೆ ನಿಗದಿ ಪಡಿಸಿದ ದಿನವೇ ನೆರವೇರಿದೆ. ಆದರೆ, ಅಂದು ಕೊಂಡ ಆ ಜನ ಸಾಗರದ ಮುಂದೆ ನಡೆದಿಲ್ಲ
ನಿಖಿಲ್ ಮದುವೆ ಅತೀ ವೈಭದಿಂದಲೇ ಪ್ಲಾನ್ ಆಗಿತ್ತು. ರಾಮನಗರದ ಜಾನಪದ ಲೋಕದ ಬಳಿ ಅದ್ದೂರಿ ತಯಾರಿ ನಡೆದಿತ್ತು.
ನಿಖಿಲ್ ಮದುವೆ ಅತೀ ವೈಭದಿಂದಲೇ ಪ್ಲಾನ್ ಆಗಿತ್ತು. ರಾಮನಗರದ ಜಾನಪದ ಲೋಕದ ಬಳಿ ಅದ್ದೂರಿ ತಯಾರಿ ನಡೆದಿತ್ತು.
ಬೆಂಗಳೂರಿನ ಜೆ.ಪಿ.ಜನಗರದ ಮನೆಯಲ್ಲಿಯೇ ಕುಮಾರಸ್ವಾಮಿ-ಅನಿತಾ ದಂಪತಿ ಸೊಸೆಯನ್ನು ಮನೆ ತುಂಬಿಸಿಕೊಂಡಿದ್ದಾರೆ.
ನಿಖಿಲ್ ಮತ್ತು ರೇವತಿ ಮದುವೆಗೆ ಹೆಚ್ಚು ಜನರೇ ಇರಲ್ಲಿಲ್ಲ ಎನ್ನುತ್ತಾರೆ. ಆದರೆ, ಫಾರ್ಮ್ ಹೌಸ್ ಪ್ರವೇಶಿಸಿದ ವಾಹನಗಳ ಲೆಕ್ಕ 150 ಅನ್ನೊ ಗುಸುಗುಸು ಕೂಡ ಇದೆ.
ಅರಿಶಿನ ಶಾಸ್ತ್ರದಿಂದ ಹಿಡಿದು, ಪ್ರತಿಯೊಂದೂ ಶಾಸ್ತ್ರವೂ ನಡೆದಿತ್ತು.
ಮಂಡ್ಯ ಎಂಪಿ ಮಾಡಬೇಕೆಂದು ಕುಮಾರಸ್ವಾಮಿ ಕನಸು ನೆರವೇರಲಿಲ್ಲ. ದೊಡ್ಡ ಫಿಲ್ಮ್ ಹೀರೋ ಮಾಡಬೇಕೆಂಬ ಕನಸೂ ಇನ್ನುನನಸಾಗಿಲ್ಲ. ಮಗನ ಮದುವೆಯನ್ನು ಅದ್ಧೂರಿಯಾಗಿ ಮಾಡುವ ಯೋಗವೂ ಮಾಜಿ ಸಿಎಂಗೆ ಬರಲಿಲ್ಲವೆಂದು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿದೆ.
ಮದುಮಗನಾಗಿ ನಿಖಿಲ್ ಮಿಂಚಿದ್ದು ಹೀಗೆ.

Latest Videos

click me!