ಮಗ ಕೃಷ್ಣ ಕುಮಾರ್ ಜೊತೆ ಸುಮಾರು ಮೂರು ವಾರಗಳಿಂದಐತಿಹಾಸಿಕ ಸ್ಥಳ ಹಂಪೆಯಲ್ಲಿ ಸಿಲುಕಿಕೊಂಡಿರವ ನಟಿ ಜಯಂತಿ.
ಲಾಕ್‌ಡೌನ್ ಮಂಚೆ ಬಳ್ಳಾರಿ ಜಿಲ್ಲೆಯ ಹಂಪೆಗೆ ತೆರಳಿದ್ದ 75 ವರ್ಷದ ನಟಿ.
ಅಂದಿನಿಂದ ಹೋಟೆಲ್‌ನಲ್ಲಿ ತಂಗಿದ್ದಾರೆ ಅಮ್ಮ ಮಗ.ಜಯಂತಿ ಹಳೆಯ ಸಿನೆಮಾ ನೋಡುತ್ತಾ ಸಮಯಕಳೆಯುತ್ತಿದ್ದಾರೆ.
21 ದಿನಗಳ ಲಾಕ್‌ಡೌನ್ ನಂತರ ಏಪ್ರಿಲ್ 14 ರಂದುಬೆಂಗಳೂರಿಗೆ ಮರಳುವ ಆಶಯದಲ್ಲಿದ್ದರು.
ಈಗ ಲಾಕ್‌ಡೌನ್ ಮೇ 3ರವರೆಗೆ ವಿಸ್ತರಣೆಯಾಗಿ ಇನ್ನೂ ಕೆಲವು ವಾರಗಳವರೆಗೆ ಅಲ್ಲೇ ಉಳಿಯುವಂತಾಗಿದೆ.
'ಜಯಂತಿಯ ಆರೋಗ್ಯದ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ವೈದ್ಯರು ಮತ್ತು ಅಧಿಕಾರಿಗಳು ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ. ಸಾರ್ವಜನಿಕ ಸಮಸ್ಯೆಗಳನ್ನು ಪರಿಹರಿಸುವ ಸವಾಲು ಸರ್ಕಾರಕ್ಕೆ ಇದೆ. ತುರ್ತು ಪರಿಸ್ಥಿತಿ ಇದ್ದಲ್ಲಿ ನಾವು ಸಹಾಯಕ್ಕಾಗಿ ಕರೆ ಮಾಡುತ್ತೇವೆ'ಎಂದು ಅವರ ಪುತ್ರ ಕೃಷ್ಣ ಕುಮಾರ್ ಪ್ರಮುಖ ದಿನಪತ್ರಿಕೆಯೊಂದಕ್ಕೆ ಹೇಳಿದ್ದಾರೆ.
ಕನ್ನಡದಲ್ಲಿ ಮಾತ್ರವಲ್ಲದೆ, ತಮಿಳು, ತೆಲುಗು, ಹಿಂದಿ, ಮಲಯಾಳಂ ಮತ್ತು ಮರಾಠಿ ಚಿತ್ರಗಳೂ ಸೇರಿದಂತೆ ಸುಮಾರು 500ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ ಅಭಿನಯ ಶಾರದೆ ಜಯಂತಿ.
ತಮ್ಮ ಫಾರ್ಮ್‌ಹೌಸ್‌ಗೆ ತೆರಳಿದ ಹಿಂದಿಯ ಸೂಪರ್ ಸ್ಟಾರ್ ಸಲ್ಲು ಬಾಯ್ ಅಲ್ಲೇ ಉಳಿದುಕೊಂಡು ಲಾಕ್‌ಡೌನ್ ಆದೇಶ ಪಾಲಿಸುತ್ತಿದ್ದಾರೆ.
ಬಾಲಿವುಡ್ ನಟ ಜಾಕಿ ಶ್ರಾಫ್ ಸಹ ಪುಣೆ ಮತ್ತು ಮುಂಬೈ ನಡುವೆ ಸ್ಟಕ್ ಆಗಿ ಸರ್ಕಾರದ ಆದೇಶವನ್ನು ಪಾಲಿಸಲು ಅಲ್ಲೇ ಉಳಿದಿರುವುದಾಗಿ ಹೇಳಿದ್ದಾರೆ ಹಾಗೂ ಫ್ಯಾನ್‌ಗಳಿಗೂ ಮನೆಯಿಂದ ಹೊರಗೆ ಹೋಗದಂತೆ ವಿಡಿಯೋ ಶೇರ್ ಮಾಡಿ ವಿನಂತಿಕೊಂಡಿದ್ದಾರೆ.