ಯುಗಾದಿ ದಿನ ಭಾವಿ ಪತ್ನಿ ಮೀಟ್ ಆದ ನಿಖಿಲ್ ಕ್ಷಮೆಯಾಚನೆ, ಮದ್ವೆ ಬಗ್ಗೆ ಸ್ಪಷ್ಟನೆ

First Published | Mar 27, 2020, 6:33 PM IST

#StayHome ಎನ್ನುವುದು ಎಲ್ಲರ ಮಂತ್ರವೀಗ. ನಮ್ಮ, ಊರಿನ, ರಾಜ್ಯದ ಹಾಗೂ ದೇಶದ ಆರೋಗ್ಯ ಕಾಪಾಡಲು ನಮ್ಮ ಕೈಯಲ್ಲಿರುವುದು ಇದೊಂದೇ ಮದ್ದು. ಇದನ್ನು ಪ್ರತಿಯೊಬ್ಬ ಪ್ರಜ್ಞಾವಂತನೂ ಅರಿತುಕೊಂಡು ಕಟ್ಟುನಿಟ್ಟಾಗಿ ಪಾಲಿಸುವುದು ಈ ಕ್ಷಣದ ತುರ್ತು. ಪ್ರತಿಯೊಬ್ಬ ಸಿನಿ ತಾರೆ, ರಾಜಕಾರಣಿಯೂ ಇದಕ್ಕೆ ಹೊರತಲ್ಲ. ಆದರೆ, ಈ ನಿಯಮ ಮೀರಿ ನಿಖಿಲ್ ಕುಮಾರಸ್ವಾಮಿ ಯುಗಾದಿಯಂದು ತಮ್ಮ ಭಾವೀ ಪತ್ನಿಯನ್ನು ಭೇಟಿಯಾಗಲು ಮನೆಯಿಂದ ಹೊರ ಕಾಲಿಟ್ಟಿದ್ದು ದೊಡ್ಡು ಸುದ್ದಿಯಾಗಿತ್ತು. ಇದಕ್ಕೀಗ ಕ್ಷಮೆಯಾಚಿಸಿದ್ದಾರೆ ಅವರು

ಲಾಕ್‌ಡೌನ್ ಉಲ್ಲಂಘಿಸಿ, ಭಾವಿ ಪತ್ನಿಯನ್ನು ಭೇಟಿಯಾಗಿದ್ದ ನಿಖಿಲ್ ಕುಮಾರಸ್ವಾಮಿ.
ತಾವೇ ಖುದ್ದು ಭಾವಿ ಪತ್ನಿ ರೇವತಿಯೊಂದಿಗಿನ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು.
Tap to resize

ಎಲ್ಲರಿಗೊಂದು ಕಾನೂನು, ನಿಮಗೆ ಮತ್ತೊಂದಾ? ಎಂದು ಕಾಲೆಳೆದ ನೆಟ್ಟಿಗರು.
ಶ್ರೀ ಸಾಮಾನ್ಯನಿಗೆ ಮಾದಾರಿಯಾಗಬೇಕಾಗಿದ್ದ ನಿಖಿಲ್ ಈ ತಪ್ಪು ನಡೆಗೆ ಅಭಿಮಾನಿಗಳ ಆಕ್ರೋಶ.
ಲಾಕ್‌ಡೌನ್ ಆದೇಶ ಉಲ್ಲಂಘಿಸಿ ತಪ್ಪು ಮಾಡಿದೆ. ರಾಜ್ಯದ ಜನತೆ ಮನೆಯಿಂದ ಯಾರೂ ಹೊರ ಬರಬೇಡಿ ಎಂದು ನಿಖಿಲ್.
ಸುವರ್ಣ ನ್ಯೂಸ್ ಮೂಲಕ ರಾಜ್ಯದ ಜನತೆ ಹಾಗೂ ಅಭಿಮಾನಿಗಳಲ್ಲಿ ಮನವಿ.
ಸಾದ ರೇವತಿಯನ್ನು ಭೇಟಿಯಾದ ಫೋಟೋ ಹಾಕುವ ನಿಖಿಲ್, ಹಬ್ಬದಂದು ಶುಭ ಹಾರೈಸಿದ ಫೋಟೋ ಶೇರ್ ಮಾಡಿಕೊಂಡು, ತಮ್ಮ ತಪ್ಪನ್ನು ತಾವೇ ಜಗಜ್ಜಾಹೀರಗೊಳಿಸಿಕೊಂಡಿದ್ದರು.
ಈ ಜೋಡಿ ಮದುವೆ ಏ.14ಕ್ಕೆ ನಿಶ್ಚಯವಾಗಿದೆ.
ಏ.14ವರೆಗೂ ದೇಶದಲ್ಲಿ ನಿಷೇದಾಜ್ಞೆ ಇರಲಿದೆ. ನಂತರವೂ ತಕ್ಷಣ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳು ಕಾಣಿಸುತ್ತಿಲ್ಲ.
ಆದರೆ, ನಿಶ್ಚಯಿಸಿದಂತೆ ಸರಳವಾಗಿ ಮದುವೆ ನಡೆಯುವ ಬಗ್ಗೆ ಹಿರಿಯರ ಚರ್ಚಿಸುತ್ತಿದ್ದಾರೆ ಎಂದ ಕುಮಾರಸ್ವಾಮಿ ಪುತ್ರ.
ನಿಶ್ಚಯಿಸಿದ ದಿನದಂದೇ ಸಪ್ತಪದಿ ತುಳಿಯುವುದಾಗಿ ಹೇಳುತ್ತಿದ್ದಾರೆ.
ಹಾಗೆ ಮಾಡಿದರೂ ಕಾನೂನು ಉಲ್ಲಂಘನೆಯಾದಂತೆ ಆಗುತ್ತದೆ. ಹೇಗೆ ಈ ಜೋಡಿ ಸಪ್ತಪದಿ ತುಳಿಯುತ್ತಾರೋ ಗೊತ್ತಿಲ್ಲ.

Latest Videos

click me!