ಕಾಂತಾರ ಸಪ್ತಮಿ ಗೌಡ ಹೊಸ ಫೋಟೋಶೂಟ್‌; 6 ಪ್ಯಾಕ್ಸ್‌ ಲೇಡಿ ಎಂದ ನೆಟ್ಟಿಗರು

First Published Feb 3, 2023, 3:59 PM IST

ಹಿಂದಿ ಸಿನಿಮಾ ಸಹಿ ಮಾಡಿದ ಬೆನ್ನಲ್ಲೇ ಹೊಸ ಫೋಟೋಶೂಟ್ ಮಾಡಿಸಿದ ಸಪ್ತಮಿ ಗೌಡ. 6 ಪ್ಯಾಕ್ಸ್‌ ನೆಟ್ಟಿಗರ ಗಮನ ಸೆಳೆದಿದೆ...
 

ಕಾಂತಾರ ಸಿನಿಮಾ ಯಶಸ್ಸಿನ ಬೆನ್ನಲ್ಲೇ ಲೀಲಾ ಉರ್ಫ್‌ ಸಪ್ತಮಿ ಗೌಡ ಬಾಲಿವುಡ್‌ ಸಿನಿಮಾ ಸಹಿ ಮಾಡಿದ್ದರು. ವಿವೇಕ್ ಅಗ್ನಿಹೋತ್ರಿ ನಿರ್ದೇಶನ ಮಾಡುತ್ತಿದ್ದಾರೆ. 

ದಿ ಕಾಶ್ಮೀರ್ ಫೈಲ್‌ ನಿರ್ದೇಶನ ಮಾಡಿರುವ ವಿವೇಕ್ ಅಗ್ನಿಹೋತ್ರಿ ಮುಂದಿನ ಸಿನಿಮಾ ದಿ ವ್ಯಾಕ್ಸಿನ್‌ ವಾರ್‌ನಲ್ಲಿ ಸಹಿ ಮಾಡಿ ಶೂಟಿಂಗ್ ಕೂಡ ಮುಗಿಸಿದ್ದಾರೆ. 

 ಬಾಲಿವುಡ್ ಸಿನಿಮಾ ಚಿತ್ರೀಕರಣ ಮುಗಿಸಿದ ಬೆನ್ನಲ್ಲೇ ಸಪ್ತಮಿ ಗೌಡ ಹೊಸ ಫೋಟೋ ಶೂಟ್ ಮಾಡಿಸಿ ನೆಟ್ಟಿಗರ ಗಮನ ಸೆಳೆದಿದ್ದಾರೆ. ವೈರಲ್ ಆಗಲು ಕಾರಣ 6 ಪ್ಯಾಕ್ಸ್.

ಹೌದು! ಮರೂನ್‌ ಬಣ್ಣದ ಲೆಹೆಂಗಾದಲ್ಲಿ ಸಪ್ತಮಿ ಗೌಡ ಮಿಂಚಿದ್ದಾರೆ. ಈ ವೇಳೆ ಅವರ 6 ಪ್ಯಾಕ್ಸ್‌ ನೆಟ್ಟಿಗರ ಗಮನ ಸೆಳೆದಿದೆ. ಈ ಹಿಂದೆ ಸಪ್ತಮಿ ಗೌಡ ವರ್ಕೌಟ್ ವಿಡಿಯೋ ವೈರಲ್ ಆಗಿತ್ತು. 

ತೇಜು ಕ್ರಾಂತಿ ಡಿಸೈನ್ ಮಾಡಿರುವ ವಸ್ತ್ರ ಇದಾಗಿದ್ದು ನಮ್ರತಾ ಮೇಕಪ್ ಮಾಡಿದ್ದಾರೆ. ಲೀಲಾ ಬ್ಯೂಟಿ ಬ್ಯೂಟಿಫುಲ್ ಫೋಟೋ ಕ್ಲಿಕ್ ಮಾಡಿರುವುದು ಮಾಯಾಥನ ಪ್ರೋಡಕ್ಷನ್ಸ್‌. 

6 ಪ್ಯಾಕ್ಸ್ ಲೇಡಿ, 6 ಪ್ಯಾಕ್‌ ವುಮೆನ್‌ ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ. ಪ್ರಮೋದ್ ಎನ್ನುವ ವ್ಯಕ್ತಿ ಕನ್ನಡತಿ ಸರಿಯಾಗಿ ಬಟ್ಟೆ ಆಕ್ಬೇಕು ಇರತ ಅಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. 

click me!