ಕುತೂಹಲ ಹುಟ್ಟಿಸಿರುವ ನವೀನ್ ಶಂಕರ್‌ ಸಿನಿಮಾ 'ನೋಡಿದವರು ಏನಂತಾರೆ': ಯಾರೂ ಕಂಡಿರದ ಸುಂದರ ತಾಣಗಳಲ್ಲಿ ಚಿತ್ರೀಕರಣ

Published : Jan 03, 2025, 02:40 PM IST

ನವೀನ್‌ ಶಂಕರ್‌ ಹೊಸ ಗೆಟಪ್‌ಗೆ ಮೆಚ್ಚುಗೆ ಲಭಿಸಿದೆ. ಕುಲದೀಪ್ ಕಾರಿಯಪ್ಪ ಬರೆದು ನಿರ್ದೇಶಿಸಿರುವ ನೋಡಿದವರು ಏನಂತಾರೆ ಸಿನಿಮಾ ಜ.31ರಂದು ರಿಲೀಸ್ ಆಗುತ್ತಿದೆ. 

PREV
17
ಕುತೂಹಲ ಹುಟ್ಟಿಸಿರುವ ನವೀನ್ ಶಂಕರ್‌ ಸಿನಿಮಾ 'ನೋಡಿದವರು ಏನಂತಾರೆ': ಯಾರೂ ಕಂಡಿರದ ಸುಂದರ ತಾಣಗಳಲ್ಲಿ ಚಿತ್ರೀಕರಣ

ಪ್ರತಿಭಾನ್ವಿತ ನಟ ನವೀನ್‌ ಶಂಕರ್‌ ಸದಾ ಹೊಸತನದ ಹುಡುಕಾಟದಲ್ಲಿದ್ದಂತೆ ಕಾಣಿಸುತ್ತಾರೆ. ಅದಕ್ಕೆ ಸಾಕ್ಷಿ ಅವರ ಸಿನಿಮಾಗಳು. ಇತ್ತೀಚಿನ ಸಿನಿಮಾಗಳಲ್ಲಿ ರಗಡ್‌ ಆಗಿ ಕಾಣಿಸಿಕೊಂಡಿದ್ದ ಅವರು ಇದೀಗ ಹೊಸ ಗೆಟಪ್‌ನಲ್ಲಿ, ವಿಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ.

27

ಅವರ ಹೊಸ ಸಿನಿಮಾ ‘ನೋಡಿದವರು ಏನಂತಾರೆ’ ಚಿತ್ರದ ಟೀಸರ್‌ ಈಗಾಗಲೇ ಬಿಡುಗಡೆಯಾಗಿದ್ದು, ಕುತೂಹಲ ಹುಟ್ಟಿಸಿದೆ. ನವೀನ್‌ ಶಂಕರ್‌ ಹೊಸ ಗೆಟಪ್‌ಗೆ ಮೆಚ್ಚುಗೆ ಲಭಿಸಿದೆ. 

37

'ನೋಡಿದವರು ಏನಂತಾರೆ' ಚಿತ್ರದಲ್ಲಿ ನವೀನ್ ಶಂಕರ್ ನಾಯಕ ನಟನಾಗಿ ಕಾಣಿಸಿಕೊಳ್ಳಲಿದ್ದಾರೆ. ಅಪೂರ್ವ ಭಾರದ್ವಾಜ್ ನಾಯಕಿ ಪಾತ್ರಕ್ಕೆ ಜೀವ ತುಂಬಿದ್ದಾರೆ. 

47

ಕುಲದೀಪ್ ಕಾರಿಯಪ್ಪ ಬರೆದು ನಿರ್ದೇಶಿಸಿರುವ ಈ ಸಿನಿಮಾ ಜ.31ರಂದು ರಿಲೀಸ್ ಆಗುತ್ತಿದೆ. ನಾಗೇಶ್ ಗೋಪಾಲ್ ನಿರ್ಮಾಣ ಮಾಡಿದ್ದು, ಅಪೂರ್ವ ಭಾರದ್ವಾಜ್ ನಾಯಕಿಯಾಗಿ ಅಭಿನಯಿಸಿದ್ದಾರೆ.

57

ಕರ್ನಾಟಕದ ಪ್ರೇಕ್ಷಣೀಯ ಹಾಗೂ ಯಾರೂ ಕಂಡಿರದ ಸುಂದರ ತಾಣಗಳಲ್ಲಿ ನೋಡಿದವರು ಏನಂತಾರೆ ಸಿನಿಮಾ ಚಿತ್ರೀಕರಣಗೊಂಡಿದೆ. ಆಶ್ವಿನ್ ಕೆನೆಡಿ ಛಾಯಾಗ್ರಾಹಕರಾಗಿ ಆಕರ್ಷಕ ದೃಶ್ಯಗಳ ಮೂಲಕ ಕಥೆ ಜೀವಂತವಾಗಿಸಿದ್ದಾರೆ. ಮಯೂರೇಶ್ ಅಧಿಕಾರಿ ಹೃದಯಸ್ಪರ್ಶಿ ಸಂಗೀತವನ್ನು ಸಂಯೋಜಿಸಿದ್ದಾರೆ. 

67

ಮನು ಶೆಡಗಾರ್ ಅವರ ಸಂಕಲನ ಚಿತ್ರಕ್ಕಿದೆ. ಕುಲದೀಪ್ ಕಾರಿಯಪ್ಪ ಅವರು ಕಥೆ ಮತ್ತು ಚಿತ್ರಕಥೆಗೆ ಬರೆದಿದ್ದಾರೆ. ಅವರೊಂದಿಗೆ ಸಾಯಿ ಶ್ರೀನಿಧಿ, ಪ್ರಜ್ವಲ್ ರಾಜ್, ಮತ್ತು ಸುನಿಲ್ ವೆಂಕಟೇಶ್ ಸಂಭಾಷಣೆ ಬರೆದಿದ್ದಾರೆ.

77

ನವೀನ್‌ ಶಂಕರ್‌ ಈ ಚಿತ್ರದಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಇದು ಚಿತ್ರದ ಹೈಲೈಟ್‌. ಪ್ರೀತಿ, ನಗು, ಅಳು ಹೀಗೆ ಭಾವನಾತ್ಮಕ ಅಂಶಗಳನ್ನು ಚಿತ್ರವು ಒಳಗೊಂಡಿದೆ. ಸಾಧು ಕೋಕಿಲ, ಅನನ್ಯಾ ಭಟ್‌ ಮತ್ತು ಕೀರ್ತನ್ ಹೊಳ್ಳಾ ಹಾಗೂ ಅಮೇರಿಕಾದ ಗಾಯಕ ಜೋರ್ಡನ್ ರಾಬರ್ಟ್ ಕಿರ್ಕ್ ಹಾಡುಗಳಿಗೆ ಧ್ವನಿಯಾಗಿದ್ದಾರೆ.

Read more Photos on
click me!

Recommended Stories