ಈ ವಯಸ್ಸಲ್ಲೂ ಸೂಪರ್ಬ್ ಆಗಿ ಫಿಟ್ನೆಸ್ ಮೆಂಟೈನ್ ಮಾಡಿರೋ ಸುಧಾರಾಣಿಗೆ ಡಯಟ್ ಅಂದ್ರೆ ಆಗಿ ಬರೋಲ್ವಂತೆ!

Published : Apr 29, 2024, 03:29 PM IST

ಸ್ಯಾಂಡಲ್ ವುಡ್ ಮತ್ತು ಕಿರುತೆರೆಯಲ್ಲಿ ಬ್ಯುಸಿಯಾಗಿರುವ ಹಿರಿಯ ನಟಿ ಸುಧಾರಾಣಿಯವರು ತಮ್ಮ 50ನೇ ವಯಸ್ಸಿನಲ್ಲೂ ಇಷ್ಟೊಂದು ಫಿಟ್ ಆಗಿರೋದಕ್ಕೆ ಕಾರಣ ಏನು ಗೊತ್ತಾ?   

PREV
17
ಈ ವಯಸ್ಸಲ್ಲೂ ಸೂಪರ್ಬ್ ಆಗಿ ಫಿಟ್ನೆಸ್ ಮೆಂಟೈನ್ ಮಾಡಿರೋ ಸುಧಾರಾಣಿಗೆ ಡಯಟ್ ಅಂದ್ರೆ ಆಗಿ ಬರೋಲ್ವಂತೆ!

ಝೀ ಕನ್ನಡದಲ್ಲಿ (Zee Kannada) ಪ್ರಸಾರವಾಗುತ್ತಿರುವ ಶ್ರೀರಸ್ತು ಶುಭಮಸ್ತು ಸೀರಿಯಲ್ ನಲ್ಲಿ ತುಳಸಿಯಾಗಿ ನಟಿಸುತ್ತಿರುವ ಸ್ಯಾಂಡಲ್ ವುಡ್ ಹಿರಿಯ ನಟಿ ಸುಧಾರಾಣಿಯವರಿಗೆ ಸದ್ಯ 50 ವರ್ಷ. ಈ ವಯಸ್ಸಲ್ಲೂ ನಟಿ ಇಷ್ಟೊಂದು ಫಿಟ್ ಆಗಿರೋದು ಹೇಗೆ? 

27

ಸ್ಯಾಂಡಲ್ ವುಡ್ ಮತ್ತು ಕಿರುತೆರೆಯಲ್ಲಿ ಬ್ಯುಸಿಯಾಗಿರುವ ಸುಧಾರಾಣಿಯವರ (Sudha Rani) ಚೆಲುವು ಇಂದಿಗೂ ಕುಂದಿಲ್ಲ. ಅವರ ಫಿಟ್ನೆಸ್ ಸೌಂದರ್ಯ ಇವನ್ನೆಲ್ಲ ಗಮನಿಸಿದ್ರೆ ಇವರಿಗೆ 50 ವರ್ಷ ವಯಸ್ಸಾಯ್ತು ಅಂತ ಯಾರು ಕೂಡ ಹೇಳೋದಿಕ್ಕೆ ಸಾಧ್ಯವಿಲ್ಲ. ಇಂದಿಗೂ ಯುವತಿಯರನ್ನೇ ನಾಚಿಸುವಂತ ಸುಂದರಿ ನಮ್ಮ ಸುಧಾರಾಣಿ. 
 

37

ಆದರೆ ಸುಧಾರಾಣಿಯವರ ಫಿಟ್ನೆಸ್ ಸೀಕ್ರೆಟ್ (Fitness secret) ಏನು ಅನ್ನೋದು ನಿಮಗೆ ಗೊತ್ತಾ? ನೀವು ಸುಧಾರಾಣಿಯವರ ಅಭಿಮಾನಿಯಾಗಿದ್ದರೆ, ಈ ನಟಿಯ ಫಿಟ್ನೆಸ್ ರಹಸ್ಯ ಏನು ಅನ್ನೋದನ್ನು ನೀವು ತಿಳಿದುಕೊಳ್ಳಲೇಬೇಕು. ಹಾಗಿದ್ರೆ ಬನ್ನಿ ಅವರ ಫಿಟ್ನೆಸ್ ಬಗ್ಗೆ ತಿಳಿಯೋಣ. 

47

ಅಡುಗೆ ಕಾರ್ಯಕ್ರಮವೊಂದರಲ್ಲಿ ಡಯಟ್ (diet) ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ ಸುಧಾರಾಣಿ, ನಾನು ಇಲ್ಲಿವರೆಗೆ ಯಾವುದೇ ರೀತಿಯ ಡಯಟಿಂಗ್ ಮಾಡಿಲ್ಲ ಎಂದು ಹೇಳಿದ್ದಾರೆ. ನನಗೆ ಡಯಟ್ ಅನ್ನೋ ಶಬ್ಧನೇ ಗೊತ್ತಿಲ್ಲ. ಅದು ಮಾಡೋದು ಇಷ್ಟವಿಲ್ಲ ಎಂದಿದ್ದಾರೆ. 

57

ಅಲ್ಲದೇ ತಾವು ವೆಜಿಟೇರಿಯನ್ ಆಗಿದ್ದು, ಎಲ್ಲಾ ರೀತಿಯ ಸಸ್ಯಾಹಾರಗಳನ್ನು ತಿನ್ನೋದಾಗಿ ಸುಧಾರಾಣಿ ಹೇಳಿದ್ದಾರೆ. ಆದರೆ ಯಾವುದೇ ಆಹಾರ ತಿಂದ್ರೂನೂ ಅದನ್ನು ಇತಿ, ಮಿತಿಯಲ್ಲಿ ತಿನ್ನುವ ಬಗ್ಗೆ ಹೆಚ್ಚು ಗಮನ ಹರಿಸ್ತೇನೆ, ಇದರಿಂದ ಫಿಟ್ ಆಗಿರಬಹುದು ಎನ್ನುತ್ತಾರೆ ಸ್ಯಾಂಡಲ್‌ವುಡ್ ಎವರ್‌ಗ್ರೀನ್ ಸುಂದರಿ.

67

ಬಾಲನಟಿಯಾಗಿ ಸಿನಿಮಾರಂಗ ಪ್ರವೇಶಿಸಿದ ಸುಧಾರಾಣಿ, ವಾಯ್ಸ್ ಆರ್ಟಿಸ್ಟ್, ಮಾಡೆಲ್ ಆಗಿ ಸಹ ಗುರುತಿಸಿಕೊಂಡಿದ್ದಾರೆ. ತಮ್ಮ 1978 ರಲ್ಲಿ ಕಿಲಾಡಿ ಕಿಟ್ಟು ಸಿನಿಮಾ ಮೂಲಕ ಬಾಲನಟಿಯಾಗಿ ಸಿನಿರಂಗ ಪ್ರವೇಶಿಸಿದ ಸುಧಾರಾಣಿ, ಅಲ್ಲಿಂದ ಇಲ್ಲಿವರೆಗೆ ಕನ್ನಡ, ತಮಿಳು, ತೆಲುಗು, ತುಳು ಸೇರಿ ಸುಮಾರು 150ಕ್ಕೂ ಅಧಿಕ ಸಿನಿಮಾದಲ್ಲಿ ನಟಿಸಿದ್ದಾರೆ. 

77

ಈ ವರ್ಷ ಸುಧಾರಾಣಿ ಪೋಷಕಪಾತ್ರದಲ್ಲಿ ಅಭಿನಯಿಸಿದ  ಜೂನಿ, ಯುವ, ಅವತಾರಪುರುಷ ಸಿನಿಮಾಗಳು ಸಹ ಬಿಡುಗಡೆಯಾಗಿವೆ. ಹಲವು ಸೀರಿಯಲ್ ಗಳಲ್ಲಿ ನಟಿಸಿರುವ ಸುಧಾರಾಣಿ ಸದ್ಯ ಶ್ರೀರಸ್ತು ಶುಭಮಸ್ತು ಸೀರಿಯಲ್ ನಲ್ಲಿ ತಮ್ಮ ಅಮೋಘ ಅಭಿನಯದ ಮೂಲಕ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. 

Read more Photos on
click me!

Recommended Stories