Rashmika Mandanna ಎಷ್ಟು ದಿನ ಮೌನವಾಗಿರುವುದು? ದ್ವೇಷವೇ ಸಿಗುತ್ತಿದೆ: ಟ್ರೋಲ್‌ಗಳಿಗೆ ರಶ್ಮಿಕಾ ರಿಯಾಕ್ಷನ್

Published : Nov 09, 2022, 11:48 AM IST

 ವೃತ್ತಿ ಜೀವನ ಆರಂಭದಿಂದಲ್ಲೂ ದ್ವೇಷ ಮತ್ತು ಟ್ರೋಲ್‌ ಎದುರಿಸುತ್ತಿರು ರಶ್ಮಿಕಾ ಮಂದಣ್ಣ ಮನನೊಂದು ಭಾವುಕ ಪೋಸ್ಟ್‌ ಹಾಕಿದ್ದಾರೆ. 

PREV
17
Rashmika Mandanna ಎಷ್ಟು ದಿನ ಮೌನವಾಗಿರುವುದು? ದ್ವೇಷವೇ ಸಿಗುತ್ತಿದೆ: ಟ್ರೋಲ್‌ಗಳಿಗೆ ರಶ್ಮಿಕಾ ರಿಯಾಕ್ಷನ್

ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಪದೇ ಪದೇ ಟ್ರೋಲ್‌ಗಳಿಗೆ ಒಳಗಾಗಿದ್ದು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಬರೆಯುವ ಮೂಲಕ  ಪ್ರತಿಯೊಬ್ಬರಿಗೂ ಉತ್ತರಿಸಿಕೊಂಡಿದ್ದಾರೆ.

27

ಕಳೆದ ಕೆಲವು ದಿನಗಳಿಂದ ವಾರಗಳಿಂದ ತಿಂಗಳುಗಳಿಂದ ಅಥವಾ ವರ್ಷಗಳಿಂದ ನನಗೆ ಟ್ರೋಲ್ ವಿಚಾರಗಳು ತುಂಬಾನೇ ತೊಂದರೆ ಕೊಡುತ್ತಿದೆ. ನನ್ನ ವೃತ್ತಿ ಜೀವನ ಆರಂಭಿಸಿದ ಕ್ಷಣದಿಂದಲ್ಲೂ ನಾನು ತುಂಬಾನೇ hate ಸ್ವೀಕರಿಸುತ್ತಿರುವೆ' ಎಂದು ರಶ್ಮಿಕಾ ಮಂದಣ್ಣ ಬರೆದುಕೊಂಡಿದ್ದಾರೆ.

37

ನಾನು ಆಯ್ಕೆ ಮಾಡಿಕೊಂಡಿರುವ ಜೀವನಕ್ಕೆ ಬೆಲೆ ಇದೆ ಎಂಬುದು ನನಗೆ ಗೊತ್ತಿದೆ ಹೀಗಾಗಿ ನಾನು everyone’s cup of tea ಅಲ್ಲ ಅನ್ನೋ ವಿಚಾರ ಸ್ಪಷ್ಟವಾಗಿ ಗೊತ್ತಿದೆ, ಪ್ರತಿಯೊಬ್ಬರು ನನ್ನನ್ನು ಪ್ರೀತಿಸಬೇಕು ಎಂದು ನಿರೀಕ್ಷೆ ಮಾಡುತ್ತಿಲ್ಲ. ಒಪ್ಪಿಕೊಳ್ಳದಿದ್ದರೂ ಪರ್ವಾಗಿಲ್ಲ ನೆಗೆಟಿವಿಟಿ ಕೊಡಬೇಡ'

47

ನಾನು ಹೇಳದ ಮಾತುಗಳನ್ನು  ಹೇಳಿರುವ ಎಂದು ಹಾಸ್ಯಾ ಮಾಡಿ  ವ್ಯಂಗ್ಯ ಮಾಡುವುದು ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿವೆ. ಇದರಿಂದ ಮನಸ್ಸಿಗೆ ನೋವು ಕೊಡುತ್ತಿದೆ ಮತ್ತು ನನ್ನ ಸ್ಥೈರ್ಯವನ್ನು ಕೆಡಿಸುತ್ತಿದೆ.ನನ್ನ ಗಮನಕ್ಕೆ ಬಂದಿರುವ ಪ್ರಕಾರ ನನ್ನ ಕೆಲವೊಂದು ಸಂದರ್ಶನಗಳ ಕ್ಲಿಪ್‌ಗಳನ್ನು ತಪ್ಪಾಗಿ ತೋರಿಸಿ ನನ್ನ ವಿರುದ್ಧ ತಿರುಗಿ ಬೀಳುವಂತೆ ಮಾಡಿದ್ದಾರೆ.

 

57

'ಖಂಡಿತ ನಾನು ನೆಗೆಟಿವ್ ಕಾಮೆಂಟ್‌ಗಳನ್ನು ಸ್ವೀಕರಿಸುತ್ತೀನಿ ಏಕೆಂದರೆ ಅದೇ ನನ್ನ ಶ್ರಮಕ್ಕೆ ಕಾರಣ ಹಠದಿಂದ ಕೆಲಸ ಮಾಡುವ ಹುಮ್ಮಸ್ಸು ನೀಡುತ್ತದೆ ಆದರೆ ಈ ದೇಷ ಬೆಳೆಸುವುದರಲ್ಲಿ ಏನಿದೆ ಅರ್ಥ?  ತುಂಬಾ ವರ್ಷಗಳಿಂದ ಇದನ್ನು ನಿರ್ಲಕ್ಷಿಸುವಂತೆ ಹೇಳುತ್ತಿದ್ದಾರೆ ಆದರೆ ಇದರಿಂದ ಏನೂ ಪರಿಹಾರ ಸಿಕ್ಕಿಲ್ಲ ಸಮಯ ಇನ್ನು ಹೆಚ್ಚಿಗೆ ಕೆಟ್ಟದಾಗುತ್ತಿದೆ.'

67

  'ಅಭಿಮಾನಿಗಳ ಸಪೋರ್ಟ್‌ನಿಂದ ನಾನು ವೃತ್ತಿ ಜೀವನದಲ್ಲಿ ಈ ಮಟ್ಟಕ್ಕೆ ಬರಲು ಸಾಧಯವಾಗಿದ್ದು. ಹಾಗೂ ಅದೇ ಪ್ರೀತಿ ನನ್ನ ನೋವನ್ನು ಹೇಳಿಕೊಳ್ಳಲು ಧೈರ್ಯ ಕೊಟ್ಟಿದ್ದು. ಅದೆಷ್ಟೋ ಜನರಿಂದ ನಾನು ಸ್ಪೂರ್ತಿಗೊಂದು ಕೆಲಸ ಮಾಡುತ್ತಿರುವೆ, ಆರಂಭದಲ್ಲಿ ಹೇಗೆ ನಿಮ್ಮನ್ನು ನಾನು ಪ್ರೀತಿಸುತ್ತಿದ್ದೆ ಅದೇ ರೀತಿ ಪ್ರೀತಿ ಮಾಡುತ್ತೀನಿ. ಶ್ರಮದಿಂದ ಕೆಲಸ ಮಾಡಿ ಒಳ್ಳೆ ವ್ಯಕ್ತಿಯಾಗಿ ಗುರುತಿಸಿಕೊಳ್ಳುತ್ತೀನಿ'

77

ರಶ್ಮಿಕಾ ಪೋಸ್ಟ್‌ಗೆ ಸ್ಟಾರ್ ನಟ-ನಟಿಯರು ಕಾಮೆಂಟ್ ಮಾಡುವ ಮೂಲಕ ಬಿಗ್ ಸಪೋರ್ಟ್‌ ಕೊಟ್ಟಿದ್ದಾರೆ. 'ನಿಮ್ಮಂತೆ ಜೀವನ ಮಾಡಲು ಇಷ್ಟ ಪಡುವವರು ಈ ಪ್ರೀತಿ ಕೊಡುತ್ತಿದ್ದಾರೆ, ಯಾರಿಂದ ಸಾಧ್ಯವಿಲ್ಲ ಅವರು ದ್ವೇಷ ಸಾಧಿಸುತ್ತಿದ್ದಾರೆ. ನೀನು ನೀನಾಗಿರು. ನಾನು ಕಂಡ ಅದ್ಭುತ ವ್ಯಕ್ತಿ ನೀವು' ಎಂದು ಮಲಯಾಳಂ ನಟ ದುಲ್ಕರ್ ಸಲ್ಮಾನ್ ಕಾಮೆಂಟ್ ಮಾಡಿದ್ದಾರೆ. 

Read more Photos on
click me!

Recommended Stories