Raymo ಟ್ರೇಲರ್‌ ಬಿಡುಗಡೆ ಮಾಡಿದ ಶಿವಣ್ಣ; ನ.25ಕ್ಕೆ ಸಿನಿಮಾ ರಿಲೀಸ್!

Published : Nov 07, 2022, 09:31 AM IST

ಇಶಾನ್ - ಆಶಿಕಾ ರಂಗನಾಥ್ ನಟಿಸಿರುವ ರೇಮೊ ಸಿನಿಮಾ ನ.25ಕ್ಕೆ ಬಿಡುಗಡೆಯಾಗಲು ಸಜ್ಜಾಗಿದೆ. ಇಶಾನೆ ಎರಡನೇ ಸಿನಿಮಾ ಇದಾಗಲಿದ್ದು ಶಿವಣ್ಣ ಸಾಥ್ ಕೊಟ್ಟಿದ್ದಾರೆ.

PREV
19
Raymo ಟ್ರೇಲರ್‌ ಬಿಡುಗಡೆ ಮಾಡಿದ ಶಿವಣ್ಣ; ನ.25ಕ್ಕೆ ಸಿನಿಮಾ ರಿಲೀಸ್!

ಪವನ್‌ ಒಡೆಯರ್‌ ನಿರ್ದೇಶಿಸಿ, ಇಶಾನ್‌ ನಾಯಕನಾಗಿ ನಟಿಸಿರುವ ‘ರೇಮೊ’ ಚಿತ್ರದ ಟ್ರೇಲರ್‌ ಈಗಷ್ಟೆಬಿಡುಗಡೆ ಆಗಿದೆ. ನಟ ಶಿವರಾಜ್‌ಕುಮಾರ್‌ ಅವರಿಂದ ಬಿಡುಗಡೆ ಆಗಿರುವ ಈ ಟ್ರೇಲರ್‌, ಚಿತ್ರದ ಮೇಲೆ ಭರವಸೆ ಹುಟ್ಟಿಸಿದೆ. 

29

‘ರೋಗ್‌’ ನಂತರ ಇಶಾನ್‌ ಮತ್ತೆ ನಾಯಕನಾಗಿ ಪ್ರೇಕ್ಷಕರ ಮುಂದೆ ಈ ಚಿತ್ರದ ಮೂಲಕ ಬರುತ್ತಿದ್ದಾರೆ. ಆಶಿಕಾ ರಂಗನಾಥ್‌ ನಾಯಕಿಯಾಗಿ ನಟಿಸಿದ್ದು, ಸಿ ಆರ್‌ ಮನೋಹರ್‌ ಅವರೇ ಈ ಚಿತ್ರವನ್ನು ನಿರ್ಮಿಸಿದ್ದಾರೆ. 

39

ಕೊರೋನಾ ಸಂಕಷ್ಟದಿಂದ ಸಿನಿಮಾ ಬಿಡುಗಡೆ ಕೊಂಚ ತಡವಾಗಿದೆ. ಆದರೆ, ಇದೇ ನ.25ಕ್ಕೆ ದೊಡ್ಡ ಮಟ್ಟದಲ್ಲಿ ಚಿತ್ರವನ್ನು ತೆರೆ ಮೇಲೆ ತರಲು ನಿರ್ಮಾಪಕರು ತಯಾರಿ ಮಾಡಿಕೊಂಡಿದ್ದಾರೆ.

49

ಈ ಸಂದರ್ಭದಲ್ಲಿ ಮಾತನಾಡಿದ ಶಿವಣ್ಣ, ‘ಟ್ರೇಲರ್‌ ನೋಡಿದಾಗ ಇಶಾನ್‌ ಗೆಲುವಿನ ಭರವಸೆ ಮೂಡಿಸುತ್ತಾರೆ. ಚಿತ್ರದಲ್ಲಿ ಒಳ್ಳೆಯ ಕತೆ ಇದೆ ಎನಿಸುತ್ತಿದೆ. ನಾನೂ ಕೂಡ ಚಿತ್ರವನ್ನು ನೋಡುತ್ತೇನೆ. 

59

ಸಿ ಆರ್‌ ಮನೋಹರ್‌ ಅವರು ಒಳ್ಳೆಯ ಚಿತ್ರವನ್ನು ನಿರ್ಮಿಸಿದ್ದಾರೆ. ಪವನ್‌ ಒಡೆಯರ್‌ ನಿರ್ದೇಶನ ಎಂದ ಮೇಲೆ ಕೇಳಬೇಕಿಲ್ಲ. ಎಲ್ಲರಿಗೂ ಈ ಸಿನಿಮಾ ಇಷ್ಟವಾಗುವಂತೆ ಮಾಡಿರುತ್ತಾರೆ ಎನ್ನುವ ನಂಬಿಕೆ ಇದೆ’ ಎಂದರು. 

69

ಚಿತ್ರದ ನಾಯಕ ಇಶಾನ್‌ ಅವರು ಮಾತನಾಡಿ, ‘ಮೂರು ವರ್ಷದ ಕಷ್ಟವನ್ನು ಈಗ ನಾನು ಟ್ರೇಲರ್‌ ಮೂಲಕ ತೆರೆ ಮೇಲೆ ನೋಡುತ್ತಿದ್ದೇನೆ. ಇದೊಂದು ಸ್ವಚ್ಚವಾದ ಪ್ರೇಮ ಕತೆಯ ಸಿನಿಮಾ. 

79

ಒಳ್ಳೆಯ ನಿರ್ದೇಶಕರು, ನಟ, ನಟಿಯರು ಹಾಗೂ ತಂತ್ರಜ್ಞರ ಜತೆಗೆ ಕೆಲಸ ಮಾಡುವ ಅವಕಾಶ ಈ ಚಿತ್ರದಿಂದ ಸಿಕ್ಕಿದ್ದು ನನ್ನ ಅದೃಷ್ಟ. ಈ ಚಿತ್ರದ ಮುಹೂರ್ತಕ್ಕೂ ಶಿವಣ್ಣ ಅವರು ಬಂದಿದ್ದರು. ಈಗ ಟ್ರೇಲರ್‌ ಬಿಡುಗಡೆಗೂ ಬಂದಿದ್ದಾರೆ. ಅವರ ಪ್ರೀತಿ ಮತ್ತು ಆಶೀರ್ವಾದ ನಮ್ಮ ಚಿತ್ರದ ಮೇಲೆ ಇರುವುದು ಖುಷಿ ಕೊಟ್ಟಿದೆ’ ಎಂದರು.

89

ಚಿತ್ರದ ನಾಯಕಿ ಆಶಿಕಾ ರಂಗನಾಥ್‌ ಅವರಿಗೆ ಸಿನಿಮಾ ಬಿಡುಗಡೆ ಸಂಭ್ರಮ. ‘ನಾನು ಇಲ್ಲಿ ಮುದ್ದಾದ ಪಾತ್ರ ಮಾಡಿದ್ದೇನೆ. ಒಳ್ಳೆಯ ಕತೆ ಇರುವ ಚಿತ್ರದಲ್ಲಿ ನಟಿಸಿದ ಹೆಮ್ಮೆ ಇದೆ. ನಾನೂ ಈ ಚಿತ್ರವನ್ನು ನೋಡಲು ಕಾಯುತ್ತಿದ್ದೇನೆ’ ಎಂದರು. 

99

‘ಮೂರು ಹಂತದ ಕೊರೋನಾ ಅಲೆಯನ್ನು ಎದುರಿಸಿ ಬಂದ ಸಿನಿಮಾ ನಮ್ಮದು. ಹೀಗಾಗಿ ಚಿತ್ರಮಂದಿರಗಳಿಗೆ ಬರುವ ಮುನ್ನವೇ ಫೈಟ್‌ ಮಾಡಿದ ಸಿನಿಮಾ ನಮ್ಮದು. ಕೊನೆಗೂ ಇದೇ ನ.25ಕ್ಕೆ ಚಿತ್ರಮಂದಿರಗಳಿಗೆ ಸಿನಿಮಾ ಬರುತ್ತಿದೆ. ಎಲ್ಲರು ನೋಡಿ ಬೆಂಬಲಿಸಿ. ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಿಕೊಟ್ಟಶಿವಣ್ಣ ಅವರಿಗೆ ಕೃತಜ್ಞತೆಗಳು’ ಎಂದು ನಿರ್ದೇಶಕ ಪವನ್‌ ಒಡೆಯರ್‌ ಹೇಳಿದರು. ನಿರ್ಮಾಪಕ ಸಿ ಆರ್‌ ಮನೋಹರ್‌, ನೃತ್ಯ ನಿರ್ದೇಶಕ ಇಮ್ರಾನ್‌ ಸರ್ಧಾರಿಯಾ ಅವರು ಚಿತ್ರದ ಕುರಿತು ಮಾತನಾಡಿದರು.

Read more Photos on
click me!

Recommended Stories