ಹೊಸ ಮನೆಗೆ ಪ್ರವೇಶಿಸಿದ ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್; ಇಲ್ಲಿವೆ ಫೋಟೋಗಳು

Published : Nov 08, 2022, 10:59 AM ISTUpdated : Nov 08, 2022, 11:00 AM IST

ಸ್ಯಾಂಡಲ್ ವುಡ್ ನಟ ಡಾರ್ಲಿಂಗ್​ ಕೃಷ್ಣ ಮತ್ತು ಮಿಲನಾ ನಾಗರಾಜ್​ ಹೊಸ ಮನೆಗೆ ಕಾಲಿಟ್ಟಿದ್ದಾರೆ.  ಕೃಷ್ಣ ಮತ್ತು ಮಿಲನಾ ಜೋಡಿ ಹೊಸ ಮನೆ ಖರೀದಿಸಿದ್ದು ಇತ್ತೀಚಿಗಷ್ಟೆ ಗೃಹ ಪ್ರವೇಶ ಮಾಡಿದ್ದಾರೆ.   

PREV
17
ಹೊಸ ಮನೆಗೆ ಪ್ರವೇಶಿಸಿದ ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್; ಇಲ್ಲಿವೆ ಫೋಟೋಗಳು

ಸ್ಯಾಂಡಲ್ ವುಡ್ ನಟ ಡಾರ್ಲಿಂಗ್​ ಕೃಷ್ಣ ಮತ್ತು ಮಿಲನಾ ನಾಗರಾಜ್​ ಹೊಸ ಮನೆಗೆ ಕಾಲಿಟ್ಟಿದ್ದಾರೆ. ಸ್ಯಾಂಡಲ್ ವುಡ್‌ನ ಈ ಕ್ಯೂಟ್ ಜೋಡಿ ಮದುವೆಯಾಗಿ ಎರಡು ವರ್ಷ ಸಮೀಪಿಸುತ್ತಿದೆ. ಇದೀಗ ಕೃಷ್ಣ ಮತ್ತು ಮಿಲನಾ ಜೋಡಿ ಹೊಸ ಮನೆ ಖರೀದಿಸಿದ್ದು ಇತ್ತೀಚಿಗಷ್ಟೆ ಗೃಹ ಪ್ರವೇಶ ಮಾಡಿದ್ದಾರೆ. 
 

27

ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ದಂಪತಿಯ ಗೃಹ ಪ್ರವೇಶದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂದಹಾಗೆ ಸುಂದರ ಕ್ಷಣಗಳ ಫೋಟೋಗಳನ್ನು ಮಿಲನಾ ನಾಗರಾಜ್ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

37

ಶುಭಕೋರಿದ ಎಲ್ಲಿರಿಗೂ ಧನ್ಯವಾದ ತಿಳಿಸಿ ಪೋಸ್ಟ್ ಮಾಡಿದ್ದಾರೆ. ಜೊತೆಗೆ ಒಂದಿಷ್ಟು ಸಿಂದರ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಮಿಲನಾ ಜೋಡಿಗೆ ಅನೇಕ ಸ್ಟಾರ್ ಮತ್ತು ಅಭಿಮಾನಿಗಳು ಅಭಿನಂದನೆ ಸಲ್ಲಿಸುತ್ತಿದ್ದಾರೆ. 
 

47

ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಇಬ್ಬರೂ ಸಿನಿಮಾರಂಗದಲ್ಲಿ ಸಕ್ಸಸ್ ಫುಲ್ ಸ್ಟಾರ್. ಅನೇಕ ವರ್ಷಗಳಿಂದ ಇಬ್ಬರೂ ಸಿನಿಮಾರಂಗದಲ್ಲಿದ್ದಾರೆ. ಆದರೆ ಲವ್ ಮಾಕ್‌ಟೇಲ್ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ತಂದುಕೊಟ್ಟಿತು. ಡಾರ್ಲಿಂಗ್ ಕೃಷ್ಣ ನಿರ್ದೇಶನ ಮಾಡಿ ನಟಿಸಿದ್ದ ಲವ್ ಮಾಕ್‌ಟೇಲ್ ಸಿನಿಮಾಗೆ ದೊಡ್ಡ ಮಟ್ಟದ ಯಶಸ್ಸು ತಂದು ಕೊಟ್ಟಿತ್ತು. 

57

ಈ ಸಿನಿಮಾ ಬಳಿಕ ಇಬ್ಬರೂ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಕೈ ತುಂಬಾ ಸಿನಿಮಾಗಳನ್ನು ಇಟ್ಟುಕೊಂಡಿದ್ದಾರೆ. ಲವ್ ಮಾಕ್‌ಟೇಲ್ ಬಳಿಕ ಇಬ್ಬರೂ ಮತ್ತೆ ಪಾರ್ಟ್-2 ಮೂಲಕ ಮತ್ತೆ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ಕೂಡ ಯಶಸ್ಸು ತಂದು ಕೊಟ್ಟಿತು. 

67

ಡಾರ್ಲಿಂಗ್ ಕೃಷ್ಣ ಸದ್ಯ ಶುಕರ್ ಫ್ಯಾಕ್ಟರಿ, ಮಿಸ್ಟರ್ ಬ್ಯಾಚುಲರ್, ಲವ್ ಮಿ ಆರ್ ಹೇಟ್ ಮಿ, ದಿಲ್ ಪಸಂದ್ ಸೇರಿದಂತೆ ಅನೇಕ ಸಿನಿಮಾಗಳು ಕೃಷ್ಣ ಕೈಯಲ್ಲಿದೆ. ಕೃಷ್ಣ ಕೊನೆಯದಾಗಿ ಲಕ್ಕಿ ಮ್ಯಾನ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. 

77

ಸ್ಯಾಂಡಲ್ ವುಡ್  ಡಾರ್ಲಿಂಗ್ ಜೋಡಿಗೆ ಅಭಿಮಾನಿಗಳು ಅಭಿನಂದನೆ ಸಲ್ಲಿಸುತ್ತಿದ್ದಾರೆ. ಮತ್ತಷ್ಟು ಯಶಸ್ಸು ಸಿಗಲಿ ಎಂದು ಹಾರೈಸುತ್ತಿದ್ದಾರೆ. ಈ ಜೋಡಿಯ ಮುಂದಿನ ಸಿನಿಮಾಗಳಿಗಾಗಿ ಅಭಿಮಾನಿಗಳ ಕಾತರದಿಂದ ಕಾಯುತ್ತಿದ್ದಾರೆ.    

Read more Photos on
click me!

Recommended Stories