ನನ್ನ ಮದುವೆ ಜೀವನ ತುಂಬಾ ಚೆನ್ನಾಗಿದೆ ಯಾಕೆ ಎಲ್ಲರೂ ಪದೇ ಪದೇ ಪ್ರಶ್ನೆ ಮಾಡ್ತಿದ್ದೀರಾ?: ದೀಪಿಕಾ ದಾಸ್ ಗರಂ

Published : Jan 26, 2025, 02:43 PM IST

ಮದುವೆ ಬಗ್ಗೆ ಪದೇ ಪದೇ ಪ್ರಶ್ನೆ ಮಾಡುತ್ತಿದ್ದ ಜನರಿಗೆ ದೀಪಿಕಾ ದಾಸ್ ಕ್ಲಾರಿಟಿ ನೀಡಿದ್ದಾರೆ. ನಾನು ಖುಷಿಯಾಗಿದ್ದೀನಿ ಎಂದು ಹೇಳಿದ್ದಾರೆ. 

PREV
17
ನನ್ನ ಮದುವೆ ಜೀವನ ತುಂಬಾ ಚೆನ್ನಾಗಿದೆ ಯಾಕೆ ಎಲ್ಲರೂ ಪದೇ ಪದೇ ಪ್ರಶ್ನೆ ಮಾಡ್ತಿದ್ದೀರಾ?: ದೀಪಿಕಾ ದಾಸ್ ಗರಂ

ಕಿರುತೆರೆ ನಾಗಿಣಿ ಮತ್ತು ಬಿಗ್ ಬಾಸ್ ಸ್ಪರ್ಧಿ ದೀಪಿಕಾ ದಾಸ್ ಮೊದಲ ಬಾರಿಗೆ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿದ್ದಾರೆ. ಪದೇ ಪದೇ ಮದುವೆ ಜೀವನ ಹೇಗಿದೆ ಎನ್ನುತ್ತಿದ್ದವರಿಗೆ ಖಡಕ್ ಉತ್ತರ ಕೊಟ್ಟಿದ್ದಾರೆ.

27

'ನನ್ನ ಮದುವೆ ಜೀವನ ತುಂಬಾನೇ ಚೆನ್ನಾಗಿದೆ ಯಾಕೆ ಎಲ್ಲರೂ ಪದೇ ಪದೇ ಪ್ರಶ್ನೆ ಮಾಡುತ್ತಿದ್ದಾರೆ ಗೊತ್ತಿಲ್ಲ. ನಾನು ಸ್ವಲ್ಪ ದಿನ ಕಾಣಿಸಿಕೊಂಡಿಲ್ಲ ಅಂತ ಎಲ್ಲರೂ ಪ್ರಶ್ನಿಸುತ್ತಿದ್ದಾರೆ. 

37

'ಸೀರಿಯಲ್, ಕೆಲವೊಂದು ಶೊಗಳು ಮತ್ತು ಕಮಿಟ್ ಆಗಿದ್ದ ಸಿನಿಮಾಗಳಲ್ಲಿ ಬ್ಯುಸಿಯಾಗಿ ನಾನು ಫ್ಯಾಮಿಲಿಗೆ ತುಂಬಾನೇ ಕಡಿಮೆ ಸಮಯ ಕೊಡುತ್ತಿದ್ದೆ. ಈಗ ಪರ್ಸನಲ್ ಲೈಫ್‌ನಲ್ಲಿ ಖುಷಿಯಾಗಿದ್ದೀನಿ ಇಷ್ಟೋಂದು ಎಂಜಾಯ್ ಮಾಡುತ್ತೀನಿ ಅಂದುಕೊಂಡಿರಲಿಲ್ಲ'

47

ಮದುವೆ ಆದ ಮೇಲೆ ಅವಕಾಶಗಳು ಕಡಿಮೆ ಆಗುತ್ತೆ ಅಂತ ನಾನು ಹೇಳುವುದಿಲ್ಲ ಏಕೆಂದರೆ ಇದನ್ನು ನೋಡುವ ರೀತಿ ಬೇರೆ. ಪರ್ಫಾರ್ಮೆನ್ಸ್‌ಗೆ ತೊಂದರೆ ಆಗುತ್ತದೆ ಅಥವಾ ನಾನು ಶೂಟಿಂಗ್ ಬರಲ್ಲ ಮಾಡಲ್ಲ ಅಂತ ಪರಿಸ್ಥಿತಿಯಲ್ಲಿ ಮಾತ್ರ ಸಿನಿಮಾಗಳಲ್ಲಿ ಕರೆಯುವುದಿಲ್ಲ. 

57

ನಾನು ಮದುವೆ ಮುನ್ನ ಮದುವೆ ನಂತರ ಅಷ್ಟೇ ಅಲ್ಲ ಮಗು ಆದ ಮೇಲೂ ಇದೇ ರೀತಿ ನಟಿಸುತ್ತೀನಿ. ಮದುವೆ ಆದ ಮೇಲೆ ಯಾರೂ ಕರೆಯುವುದಿಲ್ಲ ಅನ್ನೋದು ನಮ್ಮ ತಲೆಯಲ್ಲಿ ಬಂದು ಬಿಡುತ್ತದೆ ಅನಿಸುತ್ತದೆ. 

67

ಒಂದು ಲಿಮಿಟ್ ಅನ್ನೋದು ಇರುತ್ತದೆ...ಮದುವೆಗೂ ಮುನ್ನ ಮಾಡುತ್ತಿದ್ದ ಬೋಲ್ಡ್ ಕ್ಯಾರೆಕ್ಟ್‌ಗಳನ್ನು ನಾವು ಈಗ ಮಾಡಲು ಆಗುವುದಿಲ್ಲ ಆ ತರ ಸಣ್ಣ ಪುಟ್ಟ ಡಿಫರೆನ್ಸ್‌ ಇರುತ್ತದೆ ಬಿಟ್ಟರೆ ಏನೂ ಇರುವುದಿಲ್ಲ. 

77

ಮೊದಲು ಮದುವೆ ಆಗಿರುವ ನಟಿಯರನ್ನು ಸಂಪರ್ಕ ಮಾಡಿ ಆಮೇಲೆ ನಿರ್ಧಾರ ಮಾಡಿ.ಅಮ್ಮನ ಮನೆಯಲ್ಲಿ ಹಬ್ಬಗಳನ್ನು ಆಚರಿಸುತ್ತಿದ್ದೆ ಈಗ ಮದುವೆ ಆದ ಮೇಲೆ ಇಲ್ಲೂ ಮಾಡಬೇಕು ಅಲ್ವಾ ಹೀಗಾಗಿ....ಮೊದಲು ಅಮ್ಮನ ಮನೆ ಆಮೇಲೆ ಗಂಡನ ಮನೆ ಅಂತ ಪ್ಲ್ಯಾನ್ ಮಾಡಿಕೊಂಡು ಮಿಸ್ ಆಗದಂತೆ ನೋಡಿಕೊಳ್ಳುತ್ತೀನಿ ಎಂದಿದ್ದಾರೆ ದೀಪಿಕಾ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories