ಮಲಗಿ 10 ನಿಮಿಷಕ್ಕೆ ಕನಸಿನಲ್ಲಿ ಕಪ್ಪು ಕಾಣಿಸುತ್ತಿತ್ತು...ತಂದೆಗೆ ಮುಕ್ತಿ ಸಿಕ್ಕಿರಲಿಲ್ಲ: ನೀತು ಶೆಟ್ಟಿ

Published : Jan 25, 2025, 05:00 PM IST

ನಿದ್ರೆ ಮಾಡಿದರೆ ಕಪ್ಪು ಕಾಣಿಸುತ್ತಿತ್ತು...ಭಯದಿಂದ ಹೊರ ಬರಲು ನಟಿ ನೀತು ಶೆಟ್ಟಿ ಏನ್ ಮಾಡಿದ್ದರು ನೋಡಿ.... 

PREV
17
ಮಲಗಿ 10 ನಿಮಿಷಕ್ಕೆ ಕನಸಿನಲ್ಲಿ ಕಪ್ಪು ಕಾಣಿಸುತ್ತಿತ್ತು...ತಂದೆಗೆ ಮುಕ್ತಿ ಸಿಕ್ಕಿರಲಿಲ್ಲ: ನೀತು ಶೆಟ್ಟಿ

ಕನ್ನಡ ಚಿತ್ರರಂಗದ ಮುದ್ದು ಮುಖದ ಚೆಲುವೆ ನೀತು ಶೆಟ್ಟಿ ಒಂದು ಸಮಯದಲ್ಲಿ ನಿದ್ರೆ ಮಾಡುವಾಗ ಎದುರಿಸುತ್ತಿದ ಕಷ್ಟಗಳನ್ನು ಹಂಚಿಕೊಂಡಿದ್ದಾರೆ.

27

ತಂದೆ ತೀರಿಕೊಂಡು ಒಂದು ವರ್ಷ ಆಮೇಲೆ ನಿದ್ರೆಯಲ್ಲಿ ಏನೋ ಕಪ್ಪು ಕಾಣಿಸುತ್ತಿದೆ ನಾನು ಗಾಬರಿ ಆಗುತ್ತಿದ್ದೀನಿ ಉಸಿರು ಗಟ್ಟುತ್ತಿದೆ. ಮಲಗಿ 10 ನಿಮಿಷಕ್ಕೆ ಈ ರೀತಿ ಆಗುತ್ತಿತ್ತು, ಇದನ್ನು ಮತ್ತೊಬ್ಬರ ಜೊತೆ ಚರ್ಚೆ ಮಾಡಿದರೆ ಭ್ರಮೆ ಎನ್ನುತ್ತಿದ್ದರು.

37

ಈ ಘಟನೆ ಬಗ್ಗೆ ಪ್ರಾಣಿಕ್ ಹೀಲರ್ ಜೊತೆ ಮಾತನಾಡಿದ ಮೇಲೆ ತಿಳಿಯಿತ್ತು ಆ ಕಪ್ಪು ನನ್ನ ತಂದೆ ಅವರು ಸತ್ತ ಮೇಲೆ ಮುಕ್ತಿ ಸಿಕ್ಕಿಲ್ಲ ಎಂದು ತಿಳಿಯಿತ್ತು. ಗುರುವಾಯುರ್ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿದರೆ ಒಳ್ಳೆಯದಾಗುತ್ತದೆ ಎಂದರು.

47

ಅಲ್ಲಿ ಪೂಜೆ ಮುಗಿಸಿದ ಮೇಲೆ ಮತ್ತೆ ಕಪ್ಪು ಕಾಣಿಸಿಕೊಳ್ಳಲಿಲ್ಲ. ಯಾವಾಗ ಕಪ್ಪು ಕಾಣಿಸಿಕೊಳ್ಳುವುದು ಸ್ಟಾಪ್ ಆಯ್ತು ಆಗ ನನಗೆ ತುಂಬಾ ಕನಸುಗಳು ಬರಲು ಶುರುವಾಗಿತ್ತು ಅದರಿಂದ ನಿದ್ರೆ ಮಾಡಲು ಶುರುಮಾಡಿದೆ.

57

ಕನಸುಗಳು ಎಷ್ಟು ಡ್ರಮಾಟಿಕ್ ಆಗಿತ್ತು ಅಂದ್ರೆ ಭಯದಿಂದ ತಾಯಿ ಜೊತೆ ಮಲಗುವುದಕ್ಕೆ ಶುರು ಮಾಡಿದೆ. ಈ ಕನಸುಗಳ ಅರ್ಥ ತಿಳಿದುಕೊಳ್ಳಲು ನಾನು ವಿದ್ಯೆಯನ್ನು ಕಲಿತೆ. 

67

ಮೂಡ ನಂಬಿಕೆ ಮತ್ತು ಭಯದ ಮಾತುಗಳಿಗೆ ನಾನು ಬೀಳುವುದಿಲ್ಲ. ಕನಸು ಮತ್ತು ರಿಯಾಲಿಟಿ ನಡುವೆ ನಡೆದ ಘಟನೆಯನ್ನು ನಾನು ಹೇಳುತ್ತಿರುವುದು. ಷಾಮನಿಸಂ ಅನ್ನೋದು ವಿದ್ಯೆ ಇದು ಬರುತ್ತಿರುವುದು ನೆಟಿವ್ ಅಮೆರಿಕನ್‌ಗಳಿಂದ. ಈ ವಿದ್ಯೆಯಲ್ಲಿ ಪ್ರತಿಯೊಂದಕ್ಕೂ ಜೀವನ ಇರುತ್ತೆ...ಒಂದು ಬಿಲ್ಡಿಂಗ್‌ಗೂ ಜೀವನ ಇರುತ್ತದೆ. 

77

ಈ ನಿಮಗೆ ಯಾವುದರಿಂದ ಮಾಹಿತಿ ಬೇಕು ನೀವೇ ನೇರವಾಗಿ ಬಂದು ಕೇಳಿದರೆ ನಾವು ಅವರೊಟ್ಟಿಗೆ ಮಾತನಾಡಿ ಮೆಸೇಜ್‌ನ ತಿಳಿಸುತ್ತೀನಿ. ನಮ್ಮನ್ನು ನಾವು ಎಂದೂ ಅನುಮಾನಿಸಬಾರದು ಎಂದು ಈ ವಿದ್ಯೆ ಹೇಳಿಕೊಟ್ಟಿದೆ' ಎಂದು ಆರ್‌ಜೆ ರಾಜೇಶ್‌ ಸಂದರ್ಶನದಲ್ಲಿ ನೀತು ಮಾತನಾಡಿದ್ದಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories