ಸಾಮಾನ್ಯವಾಗಿ ಚಿತ್ರರಂಗಕ್ಕೆ ಕಾಲಿಡುವ ಹೆಣ್ಣುಮಕ್ಕಳು ಸಖತ್ ಬೋಲ್ಡ್ ಆಗಿರುತ್ತಾರೆ. ಆದರೆ ಎಷ್ಟರ ಮಟ್ಟಕ್ಕೆ ಧೈರ್ಯ ಇರ್ಬೇಕು ಅಂದ್ರೆ ನಟಿ ಖುಷ್ಬೂ ಚಪ್ಪಲಿ ತೋರಿಸಿದಷ್ಟು. ಕಾಸ್ಟಿಂಗ್ ಕೌಸ್ ಬಗ್ಗೆ ನಟಿ ಖುಷ್ಬು ಮಾತು.
28
'ಕಾಸ್ಟಿಂಗ್ ಕೌಸ್ ಅನುಭವ ನನಗೂ ಆಗಿದೆ. ಇದನ್ನು ನಾನು ಮೊದಲೇ ಮಾತನಾಡಬೇಕಿತ್ತು ಆದರೆ ಪರಿಸ್ಥಿತಿಗೆ ಆಗಲಿಲ್ಲ. ನನ್ನ ಸಿನಿಮಾ ಬದುಕನ್ನು ಕಟ್ಟಿಕೊಳ್ಳಲು ನಾನು ಎಲ್ಲೂ ರಾಜೀ ಆಗಲಿಲ್ಲ' ಎಂದು ಖುಷ್ಬು ಈ ಹಿಂದೆ ಹೇಮಾ ಸಮ್ಮಿತಿ ರಚನೆ ಸಮಯದಲ್ಲಿ ಮಾತನಾಡಿದ್ದರು.
38
ಒಂದು ವೇಳೆ ಖುಷ್ಬೂ ನಿರ್ಧಾರಗಳಲ್ಲಿ ಎಡವಿದರೆ ಸಹಾಯಕ್ಕೆ ನಿಲ್ಲಬೇಕಿದ್ದವರು ಫ್ಯಾಮಿಲಿ. ಪ್ರಮುಖವಾಗಿ ತಂದೆ ಆದರೆ ಆ ವ್ಯಕ್ತಿಯಿಂದ ದೌರ್ಜನ್ಯ ಆಗಿರುವ ಘಟನೆಯನ್ನು ನೆನಪಿಸಿಕೊಂಡಿದ್ದರು.
48
ಖುಷ್ಬೂ 8ನೇ ಕ್ಲಾಸ್‌ನಲ್ಲಿ ಓದುತ್ತಿರುವಾಗಲೇ ಹೆತ್ತ ತಂದೆಯಿಂದಲೇ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಾರೆ. ಹೀಗಾಗಿ ಅಲ್ಲಿಂದ ಖುಷ್ಬೂ ಗಟ್ಟಿಯಾಗಿ ನಿಂತಿದ್ದಾರೆ.
58
'ಸಿನಿಮಾದಲ್ಲಿ ನನಗೆ ಯಾವುದೇ ಗಾಡ್ ಫಾದರ್ ಇರಲಿಲ್ಲ. ನನ್ನನ್ನು ನಿರ್ಮಾಪಕರೊಬ್ಬರು ಸಂಪರ್ಕಿಸಿದ್ದರು. ಸಿನಿಮಾದಲ್ಲಿ ಚಾನ್ಸ್ ಕೊಡುವುದಾಗಿ ಹೇಳಿದ್ದರು. ನನ್ನ ಹಿಂದೆ ಮುಂದೆ ಯಾರೂ ಇಲ್ಲದ ಕಾರಣ ಅವರ ಒತ್ತಡಕ್ಕೆ ಮಣಿಯುತ್ತಿದ್ದೆ'
68
'ನಾನು ತೆಲುಗು ಚಿತ್ರದ ಶೂಟಿಂಗ್‌ನಲ್ಲಿದ್ದಾಗ ನಿರ್ಮಾಪಕರೊಬ್ಬರು ನಾನು ಮೇಕಪ್ ಮಾಡಿಸಿಕೊಳ್ಳುತ್ತಿದ್ದ ರೂಮ್‌ಗೆ ಬಂದರು. ಅವರ ಹಾವಭಾವದಿಂದಲೇ ಏನೋ ಬಯಸುತ್ತಿದ್ದಾಎ ಎನ್ನುವುದು ನನಗೆ ಅರ್ಥವಾಗಿತ್ತು'
78
'ಮೇಕಪ್ ರೂಮ್‌ನಲ್ಲಿ ತೀರಾ ಅಶ್ಲೀಲವಾಗಿ ನಡೆದುಕೊಂಡರು. ಕೊಡಲೇ ನಾನು ಧರಿಸಿದ್ದ ಚಪ್ಪಲಿಗಳನ್ನು ತೆಗೆದು ನನ್ನ ಚಪ್ಪಲಿಯ ಸೈಜ್ 41. ಅದನ್ನು ಇಲ್ಲಿಯೇ ಬಳಸಲಾ ಅಥವಾ ನೀವಿದ್ದಲ್ಲಿಗೆ ಬಂದು ನಾನೇ ಪ್ರಯೋಗ ಮಾಡ್ಲಾ ಎಂದೆ'
88
'ನನ್ನ ಖಡಕ್ ಮಾತುಗಳನ್ನು ಕೇಳಿಸಿಕೊಂಡು ಆ ವ್ಯಕ್ತಿ ಶಾಕ್‌ನಿಂದ ಅವಮಾನವಾಗಿ ಅಲ್ಲಿಂದ ಹೊರಟು ಹೋದರು' ಎಂದು ಖುಷ್ಬೂ ಹೇಳಿದ್ದರು.