ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವ ಮೂಲಕ ಗಮನ ಸೆಳೆಯುತ್ತಿರುವ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರ ‘ರಿಷಬ್ ಶೆಟ್ಟಿ ಫಿಲಂಸ್’ ಸಂಸ್ಥೆಯ ಹೊಸ ಸಿನಿಮಾದ ಆಡಿಷನ್‌ಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆಡಿಷನ್‌ಗಳಲ್ಲಿ ನೂರಾರು ಮಂದಿ ಬದಲು ಭಾಗವಹಿಸಿದವರ ಸಂಖ್ಯೆ ಎಷ್ಟು ಗೊತ್ತಾ? ನೋಡಿ..
ಹೊಸ ಪ್ರತಿಭೆಗಳಿಗೆ ಬೆಳ್ಳಿ ಪರದೆಯಲ್ಲಿ ಅವಕಾಶ ಕಲ್ಪಿಸುವ ಮೂಲಕ ಗಮನ ಸೆಳೆಯುತ್ತಿರುವ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರ ‘ರಿಷಬ್ ಶೆಟ್ಟಿ ಫಿಲಂಸ್’ ಸಂಸ್ಥೆಯ ಹೊಸ ಸಿನಿಮಾದ ಆಡಿಷನ್‌ಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಾಮಾನ್ಯವಾಗಿ ಸಿನಿಮಾಗಳ ಆಡಿಷನ್‌ಗಳಲ್ಲಿ ನೂರಾರು ಮಂದಿ ಭಾಗವಹಿಸುವುದು ಸಹಜ. ಆದರೆ, ಈ ಬಾರಿ ನಡೆದ ಕಾಸ್ಟಿಂಗ್ ಕಾಲ್‌ಗೆ ಸಾವಿರಾರು ಮಂದಿ ಆಗಮಿಸುವ ಮೂಲಕ ಚಿತ್ರತಂಡವನ್ನೇ ಅಚ್ಚರಿಗೊಳಿಸಿದ್ದಾರೆ.
27
ಹೊಸ ಪ್ರತಿಭೆಗಳಿಗೆ ಸದಾ ಪ್ರೋತ್ಸಾಹ ನೀಡುತ್ತಾ ಬಂದಿರುವ ರಿಷಬ್ ಶೆಟ್ಟಿ ಫಿಲಂಸ್, ತನ್ನ ನೂತನ ಸಿನಿಮಾಕ್ಕಾಗಿ ಕಲಾವಿದರ ಆಯ್ಕೆ ಪ್ರಕ್ರಿಯೆಯನ್ನು ಆರಂಭಿಸಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಜಯನಗರದಲ್ಲಿರುವ ವಿಜಯ ಕಾಲೇಜಿನಲ್ಲಿ ಇತ್ತೀಚೆಗೆ ಬೃಹತ್ ಆಡಿಷನ್ ಹಾಗೂ ಕಾಸ್ಟಿಂಗ್ ಕಾಲ್ ಆಯೋಜಿಸಲಾಗಿತ್ತು. ಈ ಕಾಸ್ಟಿಂಗ್ ಕಾಲ್‌ಗೆ 20ರಿಂದ 65 ವರ್ಷದೊಳಗಿನ ಪುರುಷರು ಹಾಗೂ 20ರಿಂದ 60 ವರ್ಷದೊಳಗಿನ ಮಹಿಳೆಯರನ್ನು ಆಹ್ವಾನಿಸಲಾಗಿತ್ತು.
37
ಆಡಿಷನ್ ಬಗ್ಗೆ ಮಾಹಿತಿ ಹೊರಬರುತ್ತಿದ್ದಂತೆ ಸಿನಿರಂಗದಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಿಕೊಳ್ಳಲು ಬಯಸಿದ್ದ ಅನೇಕರು ವಿಜಯ ಕಾಲೇಜಿನತ್ತ ಹೆಜ್ಜೆ ಹಾಕಿದ್ದಾರೆ. ನಿರೀಕ್ಷೆಗೂ ಮೀರಿ ಜನರು ಆಗಮಿಸಿದ್ದರಿಂದ ಸ್ಥಳದಲ್ಲಿ ದೊಡ್ಡ ಮಟ್ಟದ ಜನಜಂಗುಳಿ ಕಂಡುಬಂದಿದೆ. ಒಟ್ಟು 4,000ಕ್ಕೂ ಅಧಿಕ ಮಂದಿ ಆಡಿಷನ್ ಮತ್ತು ಕಾಸ್ಟಿಂಗ್ ಕಾಲ್‌ನಲ್ಲಿ ಭಾಗವಹಿಸಿರುವುದು ವಿಶೇಷವಾಗಿದೆ.
ಸಿನಿಮಾವೊಂದರ ಪಾತ್ರಗಳಿಗಾಗಿ ನಡೆದ ಆಡಿಷನ್‌ನಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಜನರು ಭಾಗವಹಿಸಿರುವುದು ಇದೇ ಮೊದಲ ಬಾರಿಗೆ ಎನ್ನಲಾಗಿದ್ದು, ಇದು ರಿಷಬ್ ಶೆಟ್ಟಿ ಫಿಲಂಸ್ ತಂಡದ ಗಮನ ಸೆಳೆದಿದೆ. ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದ ಹೊಸ ಪ್ರತಿಭೆಗಳಿಗೂ ಅವಕಾಶ ಸಿಗಬೇಕು ಎಂಬ ಉದ್ದೇಶದಿಂದ ನಡೆಸಿದ ಈ ಕಾಸ್ಟಿಂಗ್ ಕಾಲ್‌ಗೆ ಸಿಕ್ಕಿರುವ ಪ್ರತಿಕ್ರಿಯೆ ಚಿತ್ರತಂಡದ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿದೆ.
57
ರಿಷಬ್ ಶೆಟ್ಟಿ ಅವರ ಸಿನಿಮಾಗಳಲ್ಲಿ ಹೊಸ ಮುಖಗಳು ಹಾಗೂ ವಿಭಿನ್ನ ಪ್ರತಿಭೆಗಳಿಗೆ ಅವಕಾಶ ಸಿಗುತ್ತಲೇ ಬಂದಿದೆ. ಇದೀಗ ಅವರ ನಿರ್ಮಾಣ ಸಂಸ್ಥೆಯ ಮತ್ತೊಂದು ಚಿತ್ರಕ್ಕಾಗಿ ನಡೆದ ಆಡಿಷನ್ ಕೂಡ ಅದೇ ರೀತಿಯ ಕುತೂಹಲ ಮೂಡಿಸಿದೆ. 4,000ಕ್ಕೂ ಅಧಿಕ ಮಂದಿ ತಮ್ಮ ಪ್ರತಿಭೆ ಪ್ರದರ್ಶಿಸಲು ಮುಂದಾಗಿರುವುದು ಕನ್ನಡ ಚಿತ್ರರಂಗದಲ್ಲಿ ಹೊಸ ಕಲಾವಿದರ ಮೇಲಿರುವ ಆಸಕ್ತಿಗೂ ಸಾಕ್ಷಿಯಾಗಿದೆ.
67
ಇಷ್ಟೊಂದು ಸಂಖ್ಯೆಯಲ್ಲಿ ಜನರು ಆಗಮಿಸಿ ಆಡಿಷನ್‌ನಲ್ಲಿ ಭಾಗವಹಿಸಿದ್ದಕ್ಕೆ ರಿಷಬ್ ಶೆಟ್ಟಿ ಫಿಲಂಸ್ ಸಂಸ್ಥೆ ಸಂತಸ ವ್ಯಕ್ತಪಡಿಸಿದೆ. ಜೊತೆಗೆ ಕಾಸ್ಟಿಂಗ್ ಕಾಲ್‌ಗೆ ಆಗಮಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ತಿಳಿಸಿದೆ.
77
ಇದೀಗ ಈ ಬೃಹತ್ ಆಡಿಷನ್‌ನಿಂದ ಆಯ್ಕೆಯಾಗಲಿರುವ ಹೊಸ ಮುಖಗಳು ಯಾರು? ರಿಷಬ್ ಶೆಟ್ಟಿ ಫಿಲಂಸ್‌ನ ಹೊಸ ಸಿನಿಮಾದಲ್ಲಿ ಯಾರಿಗೆ ಅದೃಷ್ಟ ಒಲಿಯಲಿದೆ? ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.