‘ಅಂಜನ್’ ಚಿತ್ರದ ಟ್ರೇಲರ್ ಅನ್ನು ಶಾಸಕ ರವಿ ಸುಬ್ರಮಣ್ಯ ಬಿಡುಗಡೆ ಮಾಡಿದ್ದಾರೆ. ‘ನಾನು ಈ ಚಿತ್ರದ ದೃಶ್ಯಗಳನ್ನು ನೋಡಿದ್ದೇನೆ. ಆ್ಯಕ್ಷನ್ ಸಿನಿಮಾ.
25
ಕುತೂಹಲಕಾರಿ ಆಗಿದೆ. ಈ ಚಿತ್ರಕ್ಕೆ ಯಶಸ್ಸು ಸಿಗಲಿ’ ಎಂದು ಶಾಸಕರು ಹಾರೈಸಿದ್ದಾರೆ. ಯೂರೋಪ್‌ನಲ್ಲಿ ನೆಲೆಸಿರುವ ಇಂಜಿನಿಯರ್ ಪ್ರದೀಪ್ ಸೋನ್ಸ್ ಈ ಚಿತ್ರವನ್ನು ನಿರ್ಮಿಸಿದ್ದಾರೆ, ಚಿತ್ರದಲ್ಲಿ ಡಾನ್ ಪಾತ್ರದಲ್ಲೂ ನಟಿಸಿದ್ದಾರೆ.
35
ನಾಯಕನಾಗಿ ಅಂಜನ್, ತಂಗಿ ಪಾತ್ರದಲ್ಲಿ ಮಂಜುಳಮ್ಮ ನಟಿಸಿದ್ದಾರೆ. ‘ನಟನಾಗಬೇಕು ಎಂಬುದು ಚಿಕ್ಕಂದಿನಿಂದಲೂ ನನಗೆ ಇದ್ದ ಆಸೆ.
45
ಅದು ಈ ಚಿತ್ರದ ಮೂಲಕ ಈಡೇರುತ್ತಿದೆ. ಒಳ್ಳೆಯ ಕತೆ ಇರುವ ಸಿನಿಮಾ’ ಎಂದರು ಅಂಜನ್. ಆರ್ ಸಾಗರ್ ಈ ಚಿತ್ರಕ್ಕೆ ಕತೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.