ಚಿರಂಜೀವಿ ರಾಯನ್ ಚಿತ್ರ ಬಿಡಿಸಿದ ಅಭಿಮಾನಿ, ಥ್ಯಾಂಕ್ಸ್‌ ಹೇಳಿದ ಮೇಘನಾ ರಾಜ್!

First Published | Mar 12, 2022, 4:54 PM IST

ಅಭಿಮಾನಿಗಳು ಕ್ರಿಯೇಟ್ ಮಾಡುತ್ತಿರುವ ಫೋಟೋಗಳನ್ನು ನೋಡಿ ಭಾವುಕರಾದ ಮೇಘನಾ ರಾಜ್‌. ಬಿಗ್ ಥ್ಯಾಂಕ್ಸ್‌ ಎಂದ ನಟಿ...

ನಟಿ ಮೇಘನಾ ರಾಜ್‌ ಈಗ ರಾಯನ್ ರಾಜ್‌ ಸರ್ಜಾಗೆ ತಾಯಿ ಮಾತ್ರವಲ್ಲದೆ ತಂದೆ ಸ್ಥಾನ ಕೂಡ ತುಂಬುತ್ತಿದ್ದಾರೆ. ಆಕೆಯನ್ನು ಸೂಪರ್ ಮಾಮ್ ಎಂದು ಕೂಡ ಕರೆಯುತ್ತಾರೆ. 

ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಮೇಘನಾ ರಾಜ್, ತಮ್ಮ ಫೋಟೋಶೂಟ್ ಮತ್ತು ಸಿನಿಮಾ ಕೆಲಸಗಳು ಮಾತ್ರವಲ್ಲದೆ ಪುತ್ರನ ಸಣ್ಣ ಪುಟ್ಟ ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ.

Tap to resize

ರಾಯನ್‌ ಮತ್ತು ಚಿರಂಜೀವಿ ಒಟ್ಟಿಗೆ ಇರುವ ಅನೇಕ ಫೋಟೋಗಳನ್ನು ಅಭಿಮಾನಿಗಳು ಗ್ರಾಫಿಕ್ಸ್‌ನಲ್ಲಿ ಮಾಡಿದ್ದಾರೆ. ಪುನೀತ್ ಎನ್ನುವ ಅಭಿಮಾನಿ ಚಿತ್ರ ಬಿಡಿಸಿ ಕ್ರಯಾನ್ಸ್‌ನಲ್ಲಿ ಬಣ್ಣ ಹಚ್ಚಿದ್ದಾರೆ.

ಅಪ್ಪ ಮಗ ಇಬ್ಬರು ನೀಲಿ ಬಣ್ಣದ ಜುಬ್ಬಾ ಧರಿಸಿದ್ದಾರೆ ಹಾಗೂ ಕೆಂಪು ಪ್ಯಾಂಟ್‌ ಹಾಕಿಕೊಂಡಿದ್ದಾರೆ. ಇಬ್ಬರು ಒಂದೇ ರೀತಿಯ ಹೇರ್‌ ಸ್ಟೈಲ್ ಮತ್ತು  ಒಂದೇ ರೀತಿಯಲ್ಲಿ ನಕ್ಕಿದ್ದಾರೆ. ಇದು ಎಲ್ಲರ ಗಮನ ಸೆಳೆದಿದೆ. 

'ಇದು ತುಂಬಾ ಸ್ಪೆಷಲ್. ನೀವು ಮಾಡಿರುವುದು ನನಗೆ ತುಂಬಾನೇ ಸ್ಪೆಷಲ್. ಧನ್ಯವಾದಗಳು ಪುನೀತ್' ಎಂದು ಮೇಘನಾ ಬರೆದುಕೊಂಡಿದ್ದಾರೆ.

ಕೆಲವು ದಿನಗಳ ಹಿಂದೆ ರಾಯನ್‌ ಮಾತನಾಡುತ್ತಿರುವ ವಿಡಿಯೋ ಹಂಚಿಕೊಂಡಿದ್ದರು. ಅದರಲ್ಲಿ ಅಪ್ಪ, ತಾತ ಮತ್ತು ಪಪ್ಪ ಎಂದು ಹೇಳುವ ರಾಯನ್‌ ಅಮ್ಮ ಎಂದು ಮಾತ್ರ ಹೇಳುವುದಿಲ್ಲ.

Latest Videos

click me!