ಸ್ಯಾಂಡಲ್‌ವುಡ್ ಮನೆ ಮಗಳು ಮೇಘನಾ ರಾಜ್ ತಮ್ಮ ಹೊಸ ಮನೆಯಲ್ಲಿ ಮೊದಲ ಕ್ರಿಸ್ಮಸ್ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ಅಪ್ಲೋಡ್ ಮಾಡಿದ್ದಾರೆ.
'ಮೆರಿ ಕ್ರಿಸ್ಮಸ್' ಎಂದು ಮೇಘನಾ ರಾಜ್ ಬರೆದುಕೊಂಡಿದ್ದಾರೆ. ಹಸಿರು ಬಣ್ಣದ ಡಿಸೈನರ್ ಡ್ರೆಸ್‌ನಲ್ಲಿ ಮೇಘನಾ ಕಾಣಿಸಿಕೊಂಡರೆ ಬ್ರೌನ್ ಬಣ್ಣದ ಟೀ-ಶರ್ಟ್‌ನಲ್ಲಿ ರಾಯನ್ ಮಿಂಚಿದ್ದಾನೆ.
ಮೊದಲ ಕ್ರಿಸ್ಮಸ್ ಹಬ್ಬದಂದು ಮೇಘನಾ ರಾಜ್ ಕುಟುಂಬಸ್ಥರು, ಸ್ನೇಹಿತರು, ಟೀಂ ಮತ್ತು ಅಕ್ಕಪಕ್ಕದ ಮನೆಯರುವ ಭಾಗಿಯಾಗಿದ್ದರು. ರಾಯನ್ ಜಾಲಿ ಮಾಡುವುದನ್ನು ನೋಡಬಹುದು.
ಹಿಂದು ಮತ್ತು ಕ್ರಿಶ್ಚಿಯನ್ ಸಂಪ್ರದಾಯದಲ್ಲಿ ಮೇಘನಾ ರಾಜ್ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಅಂದಿನಿಂದ ಮೇಘನಾ ಎರಡೂ ಧರ್ಮಗಳನ್ನು ಪಾಲಿಸುತ್ತಿರುವುದು ಅಭಿಮಾನಿಗಳಿಗೆ ಖುಷಿ ಇದೆ.
ರಾಯನ್ ರಾಜ್ ಸರ್ಜಾ ಹುಟ್ಟಿದ ದಿನದಿಂದ ಅಭಿಮಾನಿಗಳು ನೋಡಿಕೊಂಡು ಬಂದಿದ್ದಾರೆ. ಪುಟ್ಟ ಹುಡುಗ ಬೆಳೆಯುತ್ತಿದ್ದಾನೆ ಖುಷಿಯಾಗಿದ್ದಾನೆ ಅಲ್ಲದೆ ತಂದೆಯನ್ನು ಹೋಲುತ್ತಾನೆ ಅನ್ನೋ ಖುಷಿಯಲ್ಲಿದ್ದಾರೆ ಫ್ಯಾನ್ಸ್.
ರಾಯನ್ ರಾಜ್‌ಗೆ ವರ್ಷ ತುಂಬುತ್ತಿದ್ದಂತೆ ಮೇಘನಾ ರಾಜ್ ಮತ್ತೊಮ್ಮೆ ಕೆಲಸ ಶುರು ಮಾಡಿದ್ದರು. ಕಲರ್ಸ್ ಕನ್ನಡ ವಾಹಿನಿಯ ಡ್ಯಾನ್ಸಿಂಗ್ ಸ್ಟಾರ್ ರಿಯಾಲಿಟಿ ಶೋಗೆ ಜಡ್ಜ್ ಆಗಿ ಎಂಟ್ರಿ ಕೊಟ್ಟ ಕಿರುತೆರೆ ವೀಕ್ಷಕರಿಗೆ ಹತ್ತಿರವಾದ್ದರು.
ಮಗ ಹುಟ್ಟಿದ ಮೇಲೆ ತತ್ಸಮ ತದ್ಭವ ಚಿತ್ರದಲ್ಲಿ ನಟಿಸಿ ಈಗ ಶ್ರೀನಗರ ಕಿಟ್ಟಿ ಜೊತೆ ಅಮರ್ಥ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆ ಸಾಕಷ್ಟು ಖಾಸಗಿ ಬ್ರ್ಯಾಂಡ್ ಮತ್ತು ಮೇಕಪ್ ಆರ್ಟಿಸ್ಟ್‌ಗಳ ಜೊತೆ ಕೋಲಾಬೋರೆಟ್ ಮಾಡಿಕೊಳ್ಳುತ್ತಾರೆ.
ಇನ್‌ಸ್ಟಾಗ್ರಾಂ ಮಾತ್ರವಲ್ಲದೆ ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ತಮ್ಮ ಜೀವದ ಪ್ರತಿಯೊಂದು ಅಪ್ಡೇಟ್‌ಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಾರೆ. ಮೇಘನಾ ಲಕ್ಷಗಟ್ಟಲೆ ಫಾಲೋವರ್ಸ್ ಹೊಂದಿದ್ದಾರೆ.