ಮೈಸೂರು ಝೂನಲ್ಲಿ ನಟಿ ಅಮೂಲ್ಯ ಮಕ್ಕಳು ಮಾಡಿದ ಕೆಲಸಕ್ಕೆ ಭಾರಿ ಮೆಚ್ಚುಗೆ!

First Published | Dec 27, 2024, 1:44 PM IST

ಸ್ಯಾಂಡಲ್’ವುಡ್ ನಟಿ ಅಮೂಲ್ಯ ಮತ್ತು ಜಗದೀಶ್ ದಂಪತಿಗಳು ತಮ್ಮ ಮಕ್ಕಳ ಹೆಸರಿನಲ್ಲಿ ಮೈಸೂರು ಮೃಗಾಲಯದಲ್ಲಿ ಮಹತ್ತರ ಕಾರ್ಯ ಮಾಡಿದ್ದು, ಭಾರಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 
 

ಚಂದನವನದ ನಟಿ ಅಮೂಲ್ಯ (Amulya) ಸಾಕಷ್ಟು ಹಿಟ್ ಸಿನಿಮಾಗಳನ್ನು ಕೊಟ್ಟಿದ್ದರೂ ಸಹ, ಮದುವೆಯಾದ ನಂತರ ನಟನೆಯಿಂದ ದೂರವೇ ಉಳಿದಿದ್ದಾರೆ. 2022 ರಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ಬಳಿಕವಂತೂ, ನಟಿ ಮನೆ, ಮಕ್ಕಳ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ.  

ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ನಟಿ ಅಮೂಲ್ಯ ಹೆಚ್ಚಾಗಿ ತಮ್ಮ ಮಕ್ಕಳ ಜೊತೆಗಿನ ಆಟ -ಪಾಠದ ಫೋಟೊಗಳನ್ನು ಶೇರ್ ಮಾಡುತ್ತಿರುತ್ತಾರೆ. ಅಷ್ಟೇ ಅಲ್ಲ ಮಕ್ಕಳಾದ ಅಥರ್ವ್ ಹಾಗೂ ಅಧವ್ ಹೆಸರಿನಲ್ಲಿ ಇನ್’ಸ್ಟಾಗ್ರಾಂ ಪೇಜ್ ಓಪನ್ ಮಾಡಿ ಮಕ್ಕಳ ಮುದ್ದಾದ ವಿಡೀಯೋಗಳನ್ನು ಶೇರ್ ಮಾಡುತ್ತಿರುತ್ತಾರೆ. 
 

Tap to resize

ಇದೀಗ ಮೊದಲ ಬಾರಿಗೆ ನಟಿ ಅಮೂಲ್ಯ ತಮ್ಮ ಪತಿ ಜಗದೀಶ್ ಹಾಗೂ ಮಕ್ಕಳೊಂದಿಗೆ ಮೈಸೂರಿಗೆ ತೆರಳಿದ್ದಾರೆ. ಜೊತೆಗೆ ಇದೇ ಮೊದಲ ಬಾರಿ ಮಕ್ಕಳಿಗೆ ಮೈಸೂರು ಝೂ ಹಾಗೂ ಪ್ರಾಣಿಗಳನ್ನು ತೋರಿಸುವ ಮೂಲಕ ಉತ್ತಮ ಕೆಲಸವೊಂದನ್ನು ಸಹ ಮಕ್ಕಳ ಹೆಸರಿನಲ್ಲಿ ಮಾಡಿದ್ದಾರೆ ಅಮೂಲ್ಯ ದಂಪತಿಗಳು. 
 

ಹೌದು, ಅಮೂಲ್ಯ ಅವರು ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ (Mysore Chamarajendra Zoo) ತಮ್ಮ ಮಕ್ಕಳ ಹೆಸರಲ್ಲಿ ಅಂದರೆ ಅಥರ್ವ್ ಮತ್ತು ಅಧವ್ ಹೆಸರಿನಲ್ಲಿ ಒಂದು ಬ್ಲ್ಯಾಕ್ ಪ್ಯಾಂಥರ್ ಅಂದರೆ ಕರಿ ಚಿರತೆಯನ್ನು ಹಾಗೂ ಒಂದು ಬಿಳಿ ನವಿಲನ್ನು ಒಂದು ವರ್ಷಕ್ಕೆ ದತ್ತು ಪಡೆದಿದ್ದಾರೆ. ಈ ಮೂಲಕ ಮಕ್ಕಳಿಗೆ ಪ್ರಾಣಿಗಳ ಮೇಲೆ ದಯೆ ತೋರುವಂತೆ ಹಾಗೂ ಪರಿಸರದ ಪಾಠ ಮಾಡಿದ್ದಾರೆ. 
 

ಅಮೂಲ್ಯ ಪತಿ ಜಗದೀಶ್ (Jagadish) ಈ ಫೋಟೊಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮೊದಲಬಾರಿಗೆ ಅಥರ್ವ್ ಮತ್ತು ಅಧವ್ (Atharv and Adhav) ರನ್ನು ಮೈಸೂರ್ ಝೂಗೆ ಕರೆದುಕೊಂಡು ಹೋಗಿದ್ದು, ಇದು ಮೆಮೋರೇಬಲ್ ಮತ್ತು ಅರ್ಥಭರಿತವಾಗಿತ್ತು. ಕರಿಚಿರತೆ ಮತ್ತು ಬಿಳಿ ನವಿಲುಗಳನ್ನು ದತ್ತು ಸ್ವೀಕರಿಸುವ ಮೂಲಕ ಮಕ್ಕಳಿಗೆ ಜೀವನ ಪರ್ಯಂತ ನೆನಪಿಟ್ಟುಕೊಳ್ಳುವ ನೆನಪುಗಳನ್ನು ನೀಡಲಾಯಿತು ಎಂದು ಬರೆದುಕೊಂಡಿದ್ದಾರೆ. 
 

ನಟಿ ಅಮೂಲ್ಯ ದಂಪತಿಗಳು ಮಾಡಿದ ಈ ಕಾರ್ಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಡಿಸೆಂಬರ್ 24 ರಂದು ದತ್ತು ಸ್ವೀಕಾರ ಮಾಡಿದ್ದು, ಜನವರಿ 1, 2025 ರಿಂದ ಜನವರಿ 1, 2026ರವರೆಗೆ ಈ ನವಿಲು(white peacock) ಮತ್ತು ಕರಿಚಿರತೆಯನ್ನು (black panther) ದತ್ತು ತೆಗೆದುಕೊಂಡಿದ್ದಾರೆ. 
 

Latest Videos

click me!