ವಿದೇಶಕ್ಕೆ ಹೋಗಿ ಚಿರು-ರಾಯನ್‌ ಎಂದು ಹಚ್ಚೆ ಹಾಕಿಸಿಕೊಂಡ ಮೇಘನಾ ರಾಜ್!

Published : Aug 26, 2022, 01:04 PM IST

ಲಾಸ್ ವೇಗಾಸ್‌ನಲ್ಲಿ ಹಚ್ಚೆ ಹಾಕಿಸಿಕೊಂಡ ಮೇಘನಾ ರಾಜ್. ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತ ಪಡಿಸಿದ ಆಪ್ತರು ಮತ್ತು ಅಭಿಮಾನಿಗಳು 

PREV
16
ವಿದೇಶಕ್ಕೆ ಹೋಗಿ ಚಿರು-ರಾಯನ್‌ ಎಂದು ಹಚ್ಚೆ ಹಾಕಿಸಿಕೊಂಡ ಮೇಘನಾ ರಾಜ್!

ಕರ್ನಾಟಕದ ಮನೆ ಮಗಳು ಮೇಘನಾ ರಾಜ್‌ ಕ್ಯಾಲಿಫೋರ್ನಿಯಾದಲ್ಲಿಆಯೋಜಿಸಿಲಾಗಿದ್ದ ಫೆಸ್ಟಿವಲ್ ಆಫ್‌ ಗ್ಲೋಬ್‌ ಸಮಾರಂಭದಲ್ಲಿ ಭಾಗಿಯಾಗಿ FOG ಅವಾರ್ಡ್‌ ಪಡೆದಿದ್ದಾರೆ. 

26

ಮೂರ್ನಾಲ್ಕು ದಿನಗಳಿಂದ ವಿದೇಶದಲ್ಲಿರುವ ಮೇಘನಾ ರಾಜ್‌ ಇಂದು ಸ್ಪೆಷಲ್ ಫೋಟೋ ಹಂಚಿಕೊಂಡಿದ್ದಾರೆ. ಕೈಗೆ ಹಚ್ಚೆ ಹಾಕಿಸಿಕೊಂಡಿದ್ದಾರೆ.

36

ಹೌದು! ಮೇಘನಾ ರಾಜ್‌ ತಮ್ಮ ಎಡಗೈ ಮೇಲೆ Chiru ಎಂದು ಬರೆಸಿಕೊಂಡು  R ಅಕ್ಷರದಿಂದ ಕೆಳಗೆ Raayan ಎಂದು ಹಚ್ಚೆ ಹಾಕಿಸಿಕೊಂಡಿದ್ದಾರೆ. 

46

ಇಬ್ಬರೂ ಹೆಸರು ಹಚ್ಚೆ ಹಾಕಿಸಿಕೊಂಡಿರುವ ಎಡಗೈಯಲ್ಲಿ infinity ಟ್ಯಾಟೂ ಕೂಡ ಇದೆ. ಈ ಇನ್‌ಫಿನಿಟಿಯಲ್ಲಿ ಹಾರ್ಟ್‌ ಬೀಟ್‌ನ ಕೂಡ ಸೇರಿಸಲಾಗಿದೆ. 

56

 ಲಾಸ್‌ ವೇಗಾಸ್‌ ಟ್ರಿಪ್‌ನ ಎಂಜಾಯ್ ಮಾಡುತ್ತಿರುವ ಮೇಘನಾ ರಾಜ್‌ ಜನಪ್ರಿಯ ಸ್ಥಳಗಳಿಗೆ ಭೇಟಿ ನೀಡಿ ಸಮಯ ಕಳೆಯುತ್ತಿದ್ದಾರೆ. 'When the breeze agrees to be a part of your picture' ಎಂದು ಬರೆದುಕೊಂಡಿದ್ದಾರೆ.

66

ಆಶಾ ಪರೇಕ್, ಅಮಿತಾಬ್ ಬಚ್ಚನ್, ದೇವಾನಂದ್, ವಿನೋದ್ ಖನ್ನಾ, ಧರ್ಮೇಂದ್ರ ಮುಂತಾದ ಸಿನಿರಂಗದ ಗಣ್ಯರಿಗೆ ಈ ಪ್ರತಿಷ್ಠಿತ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ಬಾರಿ ದಕ್ಷಿಣ ಭಾರತದ ಖ್ಯಾತ ನಟಿ ಮೇಘನರಾಜ್ F0G HERO ಅವಾರ್ಡ್ ಗೆ ಭಾಜನರಾಗಿದ್ದಾರೆ. 

Read more Photos on
click me!

Recommended Stories