ವಿಭಿನ್ನ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಗಮನ ಸೆಳೆದಿರುವ ಸ್ಯಾಂಡಲ್‌ವುಡ್ ಸಿಂಪಲ್ ಬೆಡಗಿ ಮೇಘನಾ ಗಾಂವ್ಕರ್ (Meghana Gaonkar) ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.
ಗುಲ್ಬರ್ಗಾದ ಈ ಬ್ಯೂಟಿ, ಕಾಲೇಜು ಓದಲು ಬೆಂಗಳೂರಿಗೆ ಬಂದವರು. ನಂತರ ಬೆಂಗಳೂರನ್ನೇ ತಮ್ಮ ಮನೆಯನ್ನಾಗಿ ಮಾಡಿಕೊಂಡ ಚೆಲುವೆ. ನಮ್ ಏರಿಯಾದಲ್ ಒಂದು ದಿನ ಸಿನಿಮಾ ಮೂಲಕ ನಟನೆಗೆ ಎಂಟ್ರಿ ಕೊಟ್ಟ ಇವರು ಇಂದಿಗೂ ಸಿನಿಮಾಗಳಲ್ಲಿ ಬ್ಯುಸಿ.
ಕನ್ನಡಲ್ಲಿ ತುಘಲಕ್, ಚಾರ್ಮಿನಾರ್, ಸಿಂಪಲ್ಲಾಗ್ ಇನ್ನೊಂದು ಲವ್ ಸ್ಟೋರಿ, ಶಿವಾಜಿ ಸುರತ್ಕಲ್ (Shivaji Surathkal) ನಂತಹ ಹಿಟ್ ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸುವ ಮೂಲಕ ಜನಮನ ಗೆಲ್ಲುವಲ್ಲಿ ಯಶಸ್ವಿಯಾದರು.
ಸದ್ಯ ಮೇಘನಾ ಎರಡು ಮೂರು ಸಿನಿಮಾಗಳ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಕರ್ವ 3, ದ ಜಡ್ಜ್ ಮೆಂಟ್, ಛೂ ಮಂತರ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಿನಿಮಾಗಳು ಸದ್ಯದಲ್ಲೇ ಬಿಡುಗಡೆಯಾಗಲಿದೆ.
ಮೇಘನಾ ಹುಟ್ಟುಹಬ್ಬಕ್ಕೆ (birthday( ಅಭಿಮಾನಿಗಳು, ಸಿನಿಮಾದ ಕ್ಷೇತ್ರದ ಗಣ್ಯರು ಶುಭ ಕೋರಿದ್ದಾರೆ. ನಿರ್ದೇಶಕಿ ಸುಮನಾ ಕಿತ್ತೂರು ಅವರು ಮೇಘನಾ ಫೋಟೋ ಹಾಕಿ ಪ್ರೀತಿಯ ಮೇಘು.....ನಿನ್ನ ಬದುಕು ಮತ್ತಷ್ಟು ಸೊಬಗುಗೊಳ್ಳಲಿ. ಹುಟ್ಟುಹಬ್ಬದ ಶುಭಾಶಯಗಳು ನನ್ನ ಒಲವಿನ ಪುಟ್ಟಕ್ಕ ಎಂದು ಶುಭ ಕೋರಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಮೇಘನಾ ಹೆಚ್ಚಾಗಿ ತಮ್ಮ ಸಿನಿಮಾದ ವಿಷ್ಯಗಳನ್ನು ಮತ್ತು ತಮ್ಮ ಫೋಟೋ, ವಿಡಿಯೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಟ್ರಾವೆಲ್ ಪ್ರಿಯೆಯಾಗಿರುವ ಮೇಘನಾ ಹೆಚ್ಚಾಗಿ ಟ್ರಾವೆಲ್ ಮಾಡುತ್ತಾ, ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ.
ಮೇಘನಾ ಗಾಂವ್ಕರ್ ಗೆ 38 ವರ್ಷ ವಯಸ್ಸಾದರೂ ಇನ್ನೂ ಸಿಂಗಲ್ ಆಗಿದ್ದಾರೆ, ಈ ಹಿಂದೆ ರಕ್ಷಿತ್ ಶೆಟ್ಟಿ ಮತ್ತು ಮೇಘನಾ ಜೊತೆಯಾಗಿ ಕಾಣಿಸಿಕೊಂಡಾಗ ಇಬ್ಬರು ಲವ್ ಮಾಡ್ತಿದ್ದಾರೆ ಅನ್ನೋದು ಸುದ್ದಿ ಜೋರಾಗಿಯೇ ಹರಡಿತ್ತು, ಆದರೆ ಇಬ್ಬರೂ ಜಸ್ಟ್ ಫ್ರೆಂಡ್ಸ್ ಅಷ್ಟೆ ಎನ್ನುವ ಮೂಲಕ ಎಲ್ಲಾ ಊಹಾಪೋಹಗಳಿಗೆ ಫುಲ್ ಸ್ಟಾಪ್ ಇಟ್ಟಿದ್ದರು.