ಪ್ರೀತಿಯಲ್ಲಿ ಬಿದ್ದ ಮೇಘಾ ಶೆಟ್ಟಿ; ಡಿಸೆಂಬರ್ 8 ರಿವೀಲ್ ಆಗಲಿದೆ ಗುಡ್ ನ್ಯೂಸ್!

Published : Dec 06, 2023, 10:42 AM IST

80'ರ ಸುಂದರಿ ಲುಕ್‌ ಅಯ್ಕೆ ಮಾಡಿಕೊಂಡ ಮೇಘನಾ ಶೆಟ್ಟಿ. ಡಿಸೆಂಬರ್‌ 8 ಪಡ್ಡೆ ಹುಡುಗರ ಹಾರ್ಟ್ ಗೆಲ್ಲುವುದು ಸತ್ಯ.....

PREV
16
ಪ್ರೀತಿಯಲ್ಲಿ ಬಿದ್ದ ಮೇಘಾ ಶೆಟ್ಟಿ; ಡಿಸೆಂಬರ್ 8 ರಿವೀಲ್ ಆಗಲಿದೆ ಗುಡ್ ನ್ಯೂಸ್!

ಧನ್ವೀರ್ ನಟನೆಯ, ಜಯತೀರ್ಥ ನಿರ್ದೇಶನದ ‘ಕೈವ’ ಚಿತ್ರದಲ್ಲಿ ಮೇಘಾ ಶೆಟ್ಟಿ 80ರ ದಶಕದ ಮುಸ್ಲಿಂ ಹುಡುಗಿಯ ಪಾತ್ರದಲ್ಲಿ ನಟಿಸಿದ್ದಾರೆ. ಸಲ್ಮಾ ಎಂಬುದು ಪಾತ್ರದ ಹೆಸರು.

26

ವಿಭಿನ್ನ ಗೆಟಪ್‌ಗಳ ಪಾತ್ರ ಮತ್ತು ಹಿನ್ನೆಲೆಯಿಂದಲೇ ಕುತೂಹಲ ಹುಟ್ಟಿಸಿರುವ ‘ಕೈವ’ ಡಿ.8ರಂದು ಬಿಡುಗಡೆಯಾಗುತ್ತಿದೆ. 1983ರಲ್ಲಿ ನಡೆದ ನೈಜ ಘಟನೆ ಆಧರಿತ ಸಿನಿಮಾದಲ್ಲಿ ಕರಗ ಆಚರಣೆ ಹಿನ್ನೆಲೆಯಲ್ಲಿ ಮೂಡಿಬರಲಿದೆ. 

36

ಭೂಗತ ಲೋಕದ ಪಾತ್ರಧಾರಿಗಳಂತೆ ಕಾಣುವ ಪಾತ್ರಗಳ ಮಧ್ಯೆ ಮೇಘಾ ಶೆಟ್ಟಿ ಪ್ರೇಮಕತೆಯ ಭಾಗವಾಗಿ ಕಾಣಿಸಿಕೊಂಡಿದ್ದಾರೆ. ಈ ಕುರಿತು ಮೇಘಾ, ‘ನನ್ನದಲ್ಲದ ಸಂಸ್ಕೃತಿಯ ಪಾತ್ರಕ್ಕೆ ಒಗ್ಗಿಕೊಳ್ಳಲು ನಾನು ಶ್ರಮ ಪಟ್ಟಿದ್ದೇನೆ.

46

ಈ ಪಾತ್ರಕ್ಕಾಗಿ ನಾನು ಮ್ಯಾನರಿಸಂ, ಬಾಡಿ ಲ್ಯಾಂಗ್ವೇಜ್ ಎಲ್ಲವನ್ನೂ ಬದಲಿಸಿಕೊಳ್ಳಬೇಕಿತ್ತು. ನಿರ್ದೇಶಕರ ನೆರವಿನಿಂದ ಸಲ್ಮಾ ಎಂಬ ಪಾತ್ರವಾಗಿ ಬದಲಾಗಿದ್ದೇನೆ. 

56

ನನ್ನ ಕರಿಯರ್‌ನಲ್ಲಿ ಇದೊಂದು ವಿಶಿಷ್ಟ ಪಾತ್ರವಾಗಿದ್ದು, ಗಾಢವಾದ ಪರಿಣಾಮ ಬೀರುವಂತೆ ರೂಪುಗೊಂಡಿದೆ. ಈ ಪಾತ್ರ ನನಗೆ ಸಿಕ್ಕಿದ್ದಕ್ಕೆ ಖುಷಿ ಇದೆ’ ಎನ್ನುತ್ತಾರೆ.

66

ಈಗಾಗಲೇ ಬಿಡುಗಡೆಯಾಗಿರುವ ಟ್ರೇಲರ್‌ಗೆ ಜನಮೆಚ್ಚುಗೆ ದೊರಕಿದ್ದು, 4 ಮಿಲಿಯನ್‌ಗೂ ಹೆಚ್ಚು ವೀಕ್ಷಣೆ ಕಂಡಿದೆ. ಟ್ರೇಲರ್‌ನಲ್ಲಿ ಗಮನ ಸೆಳೆದಿರುವ ಧನ್ವೀರ್, ದಿನಕರ್‌ ತೂಗುದೀಪ, ರಮೇಶ್ ಇಂದಿರಾ ಪಾತ್ರಗಳು ಸಿನಿಮಾ ಮೇಲಿನ ಕುತೂಹಲ ಹೆಚ್ಚಿಸಿದೆ.

Read more Photos on
click me!

Recommended Stories