'ಇಷ್ಟೊಂದು ಕ್ಯೂಟ್ ಆಗಿರೋದು ಕ್ರೈಂ ಅಲ್ವಾ?' ಕಪ್ಪು ಸೀರೆಯಲ್ಲಿ ಕೈವಾ ನಟಿ ಮೇಘಾ ಶೆಟ್ಟಿ

First Published Feb 24, 2024, 11:52 AM IST

ಕಪ್ಪು ಸೀರೆ ಉಟ್ಟು ಕುಳಿತು ವಿವಿಧ ಪೋಸ್ ಕೊಡುತ್ತಿರುವ ಮೇಘಾ ಶೆಟ್ಟಿಯನ್ನು ನೋಡಿದ ಅಭಿಮಾನಿಗಳು ದೃಷ್ಟಿ ತೆಗೆಸ್ಕೊಳ್ಳಿ ಇಲ್ಲದಿದ್ರೆ ದೃಷ್ಟಿ ಬೊಟ್ಟಾದ್ರೂ ಇಟ್ಕೋಬೇಕಿತ್ತು ಅಂತಿದಾರೆ.

'ಜೊತೆಜೊತೆಯಲಿ' ಖ್ಯಾತಿಯ ಮೇಘಾ ಶೆಟ್ಟಿ ಹೊಸ ಫೋಟೋ‌ಗಳನ್ನು ತಮ್ಮ ಇನ್ಸ್ಟಾ ಖಾತೆಯಲ್ಲಿ ಹರಿ ಬಿಟ್ಟಿದ್ದಾರೆ. ಮೇಘಾ ಈ ಫೋಟೋ ನೋಡಿದ ಫ್ಯಾನ್‌ಗಳು ಫುಲ್ ಫಿದಾ ಆಗಿದ್ದಾರೆ.

ಮೇಘಾ ಕೊಟ್ಟಿರುವ ವಿವಿಧ ಎಕ್ಸ್‌ಪ್ರೆಶನ್‌ಗಳಿಂದ ಕಣ್ಣು ಕೀಳೋಕಾಗ್ತಿಲ್ಲ ಎನ್ನುತ್ತಿರುವ ನೆಟ್ಟಿಗರು, ಇಷ್ಟೊಂದು ಕ್ಯೂಟ್ ಆಗಿರೋದು ಕ್ರೈಂ ಅಲ್ವೇನ್ರೀ  ಎಂದು ಪ್ರಶ್ನಿಸುತ್ತಿದ್ದಾರೆ.

ಹೆಚ್ಚೇನೂ ಅಲಂಕಾರವಿಲ್ಲದಿದ್ದರೂ ತೆಳುವಾದ ಗೋಲ್ಡ್ ಬಾರ್ಡರ್ ಹೊಂದಿರುವ ಕಪ್ಪು ಸೀರೆ, ಸ್ಲೀವ್‌ಲೆಸ್ ಬ್ಲೌಸ್ ಹಾಗೂ ಪುಟ್ಟದಾದ ಬಿಂದಿಯಷ್ಟೇ ಮೇಘಾ ಸೌಂದರ್ಯ ಇಮ್ಮಡಿಸುವಂತೆ ಮಾಡಿವೆ. 

ಇತ್ತೀಚೆಗೆ ತೆರೆಕಂಡ ಕನ್ನಡದ 'ಕೈವಾ' ನಟಿ ಬ್ಲ್ಯಾಕ್ ಈಸ್ ಬ್ಯೂಟಿಫುಲ್ ಎಂಬ ಮಾತನ್ನು ಮತ್ತೆ ಸಾಬೀತು ಮಾಡಿದ್ದಾರೆ. ಮೇಘ ಶೆಟ್ಟಿ ಲುಕ್ ನೋಡಿದವರು, ' ಕಣ್ಣಿನಲ್ಲೇ ಕಣ್ಣಿನಲ್ಲೇ ಕೊಲ್ತಾಳಲ್ಲಪ್ಪೋ ಕೊಲ್ತಾಳಲ್ಲಪ್ಪೋ' ಎನ್ನುತ್ತಿದ್ದಾರೆ.

ಈ ಹಿಂದೆ, 'ತ್ರಿಬಲ್ ರೈಡಿಂಗ್', 'ದಿಲ್ ಪಸಂದ್', 'ಲಂಡನ್ ಕೆಫೆ' ಸಿನಿಮಾಗಳಲ್ಲಿ ನಟಿಸಿರುವ ನಟಿಯ ಕೈಯ್ಯಲ್ಲಿ ಇನ್ನೂ ಒಂದೆರಡು ಸಿನಿಮಾಗಳು ಇವೆ.

ಇದರಲ್ಲಿ ವಿನಯ್ ರಾಜಕುಮಾರ್ ಅಭಿನಯದ 'ಗ್ರಾಮಾಯಣ'ವೂ ಒಂದು. ಜೊತೆಗೆ, ಮರಾಠಿಗೂ ಪದಾರ್ಪಣೆ ಮಾಡುತ್ತಿದ್ದು, ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ.

12 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿರುವ ಮೇಘಾ, ಈ ಬಾರಿ ಫೋಟೋ ಸರಣಿಗೆ ಅಭಿಮಾನಿಗಳು 'ಎಲ್ಲ ಓಕೆ, ದೃಷ್ಟಿಬೊಟ್ಟೊಂದು ಇದ್ದಿದ್ದರೆ ಸರಿಯಾಗುತ್ತಿತ್ತು' ಎಂದಿದ್ದಾರೆ.

ಕುಳಿತಲ್ಲೇ 10 ರೀತಿಯ ಪೋಸ್ ನೀಡಿರುವ ಮೇಘಾಗೆ ಕೆಲವರು 'ಸೀರೆಲಿ ಹುಡುಗಿರ ನೋಡಲೇಬಾರದು ನಿಲ್ಲಲ್ಲ ಟೆಂಪರೇಚರೂ' ಎನ್ನೋದು ನಿಮ್ ನೋಡಿ ಪಕ್ಕಾ ಆಯ್ತು ಎಂದಿದ್ದಾರೆ.

ಮತ್ತೊಬ್ಬ ಅಭಿಮಾನಿ ಮೇಘಾ ಹೇರ್ ಸ್ಟೈಲ್ ಕಡೆ ಗಮನ ಹರಿಸಿದ್ದು, 'ಇತರ ಕೂದಲು ಮುಂದೆ ಬಿಡಬೇಡಿ ಹೊಟ್ಟೆಯೊಳಗೆ ಚಿಟ್ಟೆ ಬಿಟ್ಟಂಗಾಗುತ್ತೆ' ಎಂದು ತಮ್ಮ ಪಾಡನ್ನು ಹೇಳಿಕೊಂಡಿದ್ದಾರೆ.

click me!