ಗೋಲ್ಡನ್ ಬಾರ್ಡರ್ ಇರುವಂತಹ ಬಿಳಿ ಬಣ್ಣದ ಕಸುವು ಸೀರೆಯುಟ್ಟು, ಅದಕ್ಕೆ ಬಿಳಿ ಬಣ್ಣದ ಬ್ಲೌಸ್ ಧರಿಸಿ, ತಲೆಗೆ ಮಲ್ಲಿಗೆ ಹೂವು ಮುಡಿದು, ಕೈಯಲ್ಲಿ ಹೂವಿನ ಬುಟ್ಟಿ ಹಿಡಿದು, ಹಣೆಗೆ ಅಡ್ಡ ನಾಮ ಹಾಕಿ ಥೇಟ್ ಮಲಯಾಳ ಕುಟ್ಟಿ ತರ ಕಾಣಿಸ್ತಿದ್ದಾರೆ. ಮೇಘಾ ಶೆಟ್ಟಿಯ ಈ ಹೊಸ ಟ್ರೆಡಿಶನಲ್ ಲುಕ್ ನೋಡಿ, ಯುವಕರ ಹೃದಯದ ತಾಳ ತಪ್ಪಿದ್ದು, ಕವಿಗಳಾಗಿ ಕಾಮೆಂಟ್ ಸೆಕ್ಷನ್ ನಲ್ಲಿ ಕವನ ಗೀಚಿದ್ದಾರೆ.