ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿರುವ ಹರ್ಷಿಕಾ ಪೂಣಚ್ಚಗೆ ಸರ್ಪ್ರೈಸ್ ನೀಡಿದ ಗೋಲ್ಡನ್ ಸ್ಟಾರ್ ಜೋಡಿ…

Published : Sep 22, 2024, 01:56 PM ISTUpdated : Sep 23, 2024, 09:02 AM IST

ತುಂಬು ಗರ್ಭಿಣಿಯಾಗಿರುವ ಹರ್ಷಿಕಾ ಪೂಣಚ್ಚ ಅವರಿಗೆ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಶಿಲ್ಪಾ ದಂಪತಿಗಳು ಸರ್ಪ್ರೈಸ್ ಬೇಬಿ ಶವರ್ ಪಾರ್ಟಿ ಆಯೋಜಿಸಿದ್ದು, ಸ್ಯಾಂಡಲ್ ವುಡ್ ತಾರೆಯರು ಭಾಗಿಯಾಗಿ ಸಂಭ್ರಮಿಸಿದ್ದಾರೆ.   

PREV
112
ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿರುವ ಹರ್ಷಿಕಾ ಪೂಣಚ್ಚಗೆ ಸರ್ಪ್ರೈಸ್ ನೀಡಿದ ಗೋಲ್ಡನ್ ಸ್ಟಾರ್ ಜೋಡಿ…

ಚೊಚ್ಚಲ ಮಗುವಿನ ಆಗಮನ ನಿರೀಕ್ಷೆಯಲ್ಲಿರುವ ಸ್ಯಾಂಡಲ್ ವುಡ್ ನಟಿ ಹಾಗೂ ತುಂಬು ಗರ್ಭಿಣಿಯಾಗಿರುವ ಹರ್ಷಿಕಾ ಪೂಣಚ್ಚ (Harshika Poonacha) ಅವರಿಗೆ ಗೋಲ್ಡನ್ ಸ್ಟಾರ್ ಗಣೇಶ್ ದಂಪತಿಗಳು ಬೇಬಿ ಶವರ್ ಪಾರ್ಟಿ ಆಯೋಜಿಸುವ ಮೂಲಕ ಸರ್ಪ್ರೈಸ್ ನೀಡಿದ್ದಾರೆ. 
 

212

ಎಂಟು ತಿಂಗಳ ಗರ್ಭಿಣಿಯಾಗಿರುವ ಹರ್ಷಿಕಾ ಪೂಣಚ್ಚಾಗೆ ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಹಾಗೂ ಶಿಲ್ಪಾ ದಂಪತಿಗಳು ಅದ್ಧೂರಿಯಾಗಿ ಬೇಬಿ ಶವರ್ ಪಾರ್ಟಿ ಮಾಡಿದ್ದಾರೆ. ಈ ಕಾರ್ಯಕ್ರಮ ಗಣೇಶ್ ಅವರ ಮನೆಯಲ್ಲಿ ನಡೆದಿದೆ. 
 

312

ಗಣೇಶ್ ಮನೆಯನ್ನು ಅದ್ಧೂರಿಯಾಗಿ ಬಲೂನ್ ಗಳಿಂದ ಸಿಂಗರಿಸಿದ್ದು, ಬೇಬಿ ಶವರ್ ಗೆ ಸರಿ ಹೊಂದುವಂತಹ ನೀಲಿ ಮತ್ತು ಪಿಂಕ್ ಬಣ್ಣದ ಬಲೂನ್ ನಿಂದ ಸಿಂಗರಿಸಿದ್ದು, ಮರದ ಕೊಂಬೆಗೆ ಹಾಕಿದ ಜೋಕಾಲಿ ಮೇಲೆ ಮಗು ಮಲಗಿರುವ ಥೀಮ್ ನಲ್ಲಿ ಕೇಕ್ ರೆಡಿ ಮಾಡಿಸಿ, ಕತ್ತರಿಸಿ ಸಂಭ್ರಮಿಸಿದ್ದಾರೆ. 
 

412

ಹರ್ಷಿಕಾ ಪೂಣಚ್ಚ ಈ ಅದ್ಧೂರಿ ಸಮಾರಂಭದಲ್ಲಿ ಗಣೇಶ್, ಶಿಲ್ಪಾ ಸ್ಯಾಂಡಲ್ ವುಡ್ ನ ಸೆಲೆಬ್ರಿಟಿಗಳನ್ನು ಆಮಂತ್ರಿಸಿದ್ದು, ತಾರೆಯರು ಭಾಗಿಯಾಗಿ ಸಂಭ್ರಮಿಸುವ ಮೂಲಕ ಕಾರ್ಯಕ್ರಮದ ಶೋಭೆಯನ್ನು ಹೆಚ್ಚಿಸಿದ್ದಾರೆ. 
 

512

ಈ ಸಂಭ್ರಮದಲ್ಲಿ  ನಟಿ ಅಮೂಲ್ಯ ಜಗದೀಶ್ ದಂಪತಿ, ಮಾಲಾಶ್ರೀ (Malashree), ಆರಾಧನಾ, ಪ್ರಿಯಾಂಕಾ ಉಪೇಂದ್ರ, ಅನುಪ್ರಭಾಕರ್, ರಘು ಮುಖರ್ಜಿ, ಹಿರಿಯ ನಟಿ ಶ್ರುತಿ ಮತ್ತು ಅವರ ಪುತ್ರಿ ಗೌರಿ, ಶರಣ್ಯ ಶೆಟ್ಟಿ (Sharanya Shetty), ಸಂಗೀತಾ ಗುರುರಾಜ್, ನಿಖಿತಾ ನಾರಾಯಣ ಸೇರಿದಂತೆ ಅನೇಕರು ಭಾಗಿಯಾಗಿ ಹರ್ಷಿಕಾಗೆ ವಿಶ್ ಮಾಡಿದ್ದಾರೆ.
 

612

ಅಕ್ಟೋಬರ್ ತಿಂಗಳಲ್ಲಿ ಮಗುವಿನ ನಿರೀಕ್ಷೆಯಲ್ಲಿರುವ ಹರ್ಷಿಕಾ ಹಾಗೂ ಭುವನ್ ತಮ್ಮ ಸೋಶಿಯಲ್ ಮೀಡೀಯಾದಲ್ಲಿ ಬೇಬಿ ಶವರ್ ಫೋಟೊಗಳನ್ನು ಹಂಚಿಕೊಳ್ಳುವ ಮೂಲಕ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಶಿಲ್ಪಾ ದಂಪತಿಗಳಿಗೆ ಕೃತಜ್ಞತೆಯ ದೊಡ್ಡದಾದ ಸಾಲುಗಳನ್ನೇ ಬರೆದಿದ್ದಾರೆ. 
 

712

ಇದು ಜೀವಮಾನವಿಡೀ ನೆನಪಿನಲ್ಲಿಟ್ಟುಕೊಳ್ಳಬೇಕಾದ ಒಂದು ಬೇಬಿ ಶವರ್ !! ವಿನೋದ, ನಗು, ನಾನು ಹೆಚ್ಚು ಪ್ರೀತಿಸುವ ಜನರಿಂದ ನಿಜವಾದ ಆಶೀರ್ವಾದ ಸಿಕ್ಕಿದೆ ನನಗೆ. ನನಗಾಗಿ ಈ ಅದ್ಭುತವಾದ ಬೇಬಿ ಶವರ್ ಅನ್ನು ಆಯೋಜಿಸಿದ ಎಲ್ಲಾ ಕ್ರೆಡಿಟ್ ಗಣೇಶ್ ಸರ್ ಮತ್ತು ಅವರ ಪತ್ನಿ ಶಿಲ್ಪಾ ಮಾಮ್ ಗೆ ಸಲ್ಲುತ್ತವೆ. 
 

812

ಶಿಲ್ಪಾ (Shilpa Ganesh) ಮೇಡಂ ನೀವು ಸ್ನೇಹಿತೆ, ಮಾರ್ಗದರ್ಶಿ, ಹಿರಿಯ ಸಹೋದರಿ ಮತ್ತು ಕೆಲವೊಮ್ಮೆ ಹೆಚ್ಚು ಅಗತ್ಯವಿದ್ದಾಗಲೆಲ್ಲಾ ತಾಯಿಯಾಗಿದ್ದೀರಿ. ನಿಮಗೆ ಹೇಗೆ ಧನ್ಯವಾದ ಹೇಳಬೇಕೆಂದು ನನಗೆ ನಿಜವಾಗಿಯೂ ತಿಳಿದಿಲ್ಲ ಎಂದು ಹರ್ಷಿಕಾ ಭಾವುಕಾರಾಗಿದ್ದಾರೆ. 
 

912

ಐ ರಿಯಲೀ ಲವ್ ಯೂ ಮ್ಯಾಮ್. ಇವತ್ತಿನ ಆಹಾರ, ಅಲಂಕಾರ, ವ್ಯವಸ್ಥೆಗಳು, ಆಹ್ವಾನಿತರು ಎಲ್ಲವೂ ಪರ್ಫೆಕ್ಟ್ ಆಗಿತ್ತು.   ಮತ್ತೊಮ್ಮೆ ಧನ್ಯವಾದಗಳು. ಗಣೇಶ್ ಸರ್ ಅತ್ಯುತ್ತಮ ಹೋಸ್ಟ್ ಆಗಿದ್ದಕ್ಕಾಗಿ ಧನ್ಯವಾದಗಳು. ನಿಮ್ಮಿಂದಾಗಿ ನಾವು ತುಂಬಾ ನಕ್ಕೆವು ಎಂದಿದ್ದಾರೆ. 
 

1012

ಅಷ್ಟೇ ಅಲ್ಲ ನಾನು ನಿಮ್ಮನ್ನು ಯಾವಾಗಿನಿಂದ ತಿಳಿದಿರುವೆನೋ ಆವಾಗಿನಿಂದ ನಿಮ್ಮ ಸಿಂಪ್ಲಿಸಿಟಿಯಿಂದ ನಾನು ಪ್ರೇರಣೆ ಪಡೆದಿದ್ದೇನೆ ಗಣೇಶ್ ಸರ್.  ಲವ್ ಯು ಟೂ. ನನಗೆ ಮತ್ತು ಮಗುವಿಗೆ ಶುಭ ಹಾರೈಸಲು ಬಂದ ಎಲ್ಲರಿಗೂ ಧನ್ಯವಾದಗಳು. ನಾನು ಇದನ್ನು ಎಂದೆಂದಿಗೂ ನೆನಪಿಸಿಕೊಳ್ಳುತ್ತೇನೆ. ನನ್ನ ಜೀವನದಲ್ಲಿ ಇಂತಹ ಜನರನ್ನ ಕೊಟ್ಟಿದ್ದಕ್ಕಾಗಿ, ಆ ದೇವರಿಗೆ ಥ್ಯಾಂಕ್ಸ್ ಎಂದು ಬರೆದುಕೊಂಡಿದ್ದಾರೆ ಹರ್ಷಿಕಾ ಪೂಣಚ್ಚ. 
 

1112

ಹಲವು ವರ್ಷಗಳಿಂದ ಲವ್ ಮಾಡುತ್ತಿದ್ದ ಭುವನ್ ಪೊನ್ನಣ್ಣ (Bhuvan Ponnanna) ಮತ್ತು ಹರ್ಷಿಕಾ ಪೂಣಚ್ಚಾ ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಮಡಿಕೇರಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈ ಮದುವೆಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ಪೂಜಾ ಗಾಂಧಿ, ಮಾಜಿ ಸಿಎಂ ಯಡಿಯೂರಪ್ಪ ಸೇರಿದಂತೆ ಅನೇಕರು ಭಾಗಿಯಾಗಿದ್ದರು. 
 

1212

ಇದೀಗ ಮಗುವಿನ ನಿರೀಕ್ಷೆಯಲ್ಲಿರುವ ಹರ್ಷಿಕಾ ಪೂಣಚ್ಚ ಕನ್ನಡದಲ್ಲಿ ಹಲವು ಸಿನಿಮಾಗಳಲ್ಲಿ ನಟಿಸುವುದರ ಜೊತೆಗೆ ಮಲಯಾಲಂ, ತೆಲುಗು, ಭೋಜ್ ಪುರಿ, ಕೊಂಕಣಿ, ಕೊಡವ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಪತಿ ಭುವನ್ ಪೊನ್ನಣ್ಣ ಸಿನಿಮಾಗೆ ನಿರ್ಮಾಣದ ಹೊಣೆ ಹೊತ್ತಿದ್ದಾರೆ. 
 

Read more Photos on
click me!

Recommended Stories