ಜೈಪುರದಲ್ಲಿ ಹಸೆಮಣೆ ಏರಲಿದ್ದಾರೆ ದರ್ಶನ್‌ ನಟನೆಯ 'ಅರ್ಜುನ್‌' ಚಿತ್ರದ ಹೀರೋಯಿನ್‌!

First Published | Feb 29, 2024, 10:04 PM IST

Meera Chopra Wedding ನಟಿ ಮೀರಾ ಚೋಪ್ರಾ ವಿವಾಹವಾಗುತ್ತಿದ್ದಾರೆ. ಬರೀ ಮೀರಾ ಚೋಪ್ರಾ ಅಂದರೆ ಯಾರಿಗೂ ಗೊತ್ತಾಗೋದಿಲ್ಲ. ಕನ್ನಡದಲ್ಲಿ ದರ್ಶನ್‌ ಜೊತೆ ಅರ್ಜುನ್‌ ಚಿತ್ರದಲ್ಲಿ ನಟಿಸಿದ್ದ ಮೀರಾ ಚೋಪ್ರಾ ಅಂದಾಗ ಈಕೆಯ ಮುಖ ನೆನಪಾಗುತ್ತದೆ.

ಬಹುಭಾಷಾ ನಟಿ ಮೀರಾ ಚೋಪ್ರಾ ವಿವಾಹವಾಗುತ್ತಿದ್ದಾರೆ. ತಮ್ಮ ದೀರ್ಘ ಕಾಲದ ಗೆಳೆಯನನ್ನು ಜೈಪುರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಇವರು ವಿವಾಹವಾಗಲಿದ್ದಾರೆ.

ದರ್ಶನ್‌ ಅಭಿನಯದ ಅರ್ಜುನ್‌ ಚಿತ್ರದ ಮೂಲಕ ನಟಿ ಮೀರಾ ಚೋಪ್ರಾ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದರು. ಅದಾದ ಬಳಿಕ ಅವರು ಕನ್ನಡ ಚಿತ್ರದಲ್ಲಿ ನಟಿಸಿರಲಿಲ್ಲ.

Tap to resize

ಕಳೆದ ಮೂರು ವರ್ಷಗಳಿಂದ ಮೀರಾ ಚೋಪ್ರಾ ತಮ್ಮ ಗೆಳೆಯು ಜೊತೆ ಡೇಟಿಂಗ್‌ನಲ್ಲಿದ್ದರು. ಕೊನೆಗೂ ಅವರು ಮದುವೆಯಾಗುವ ನಿರ್ಧಾರ ಮಾಡಿದ್ದು, ಮಾರ್ಚ್‌ನಲ್ಲಿ ಕಾರ್ಯಕ್ರಮ ನಡೆಯಲಿದೆ.

ಮದುವೆ ಸಮಾರಂಭ ಜೈಪುರದಲ್ಲಿ ನಡೆಯಲಿರುವ ಎನ್ನುವ ಮಾಹಿತಿ ಸಿಕ್ಕಿದೆ. ಮೂಲಗಳ ಪ್ರಕಾರ ಮೀರಾ ಚೋಪ್ರಾ ಅವರ ಭಾವಿ ಪತಿ ಉದ್ಯಮಿಯಾಗಿದ್ದಾರೆ.

38 ವರ್ಷದ ಮೀರಾ ಚೋಪ್ರಾ ಕನ್ನಡ ಮಾತ್ರವಲ್ಲದೆ ವಿವಿಧ ಭಾಷೆಗಳಲ್ಲಿ ನಟಿಸಿದ್ದಾರೆ. 1920 ಲಂಡನ್‌, ಗ್ಯಾಂಗ್ಸ್‌ ಆಫ್‌ ಘೋಸ್ಟ್ಸ್‌ ಮತ್ತು ಸೆಕ್ಷನ್‌ 375 ಸಿನಿಮಾಗಳಲ್ಲಿ ನಟಿಸಿದ್ದಾರೆ.

ಈಗ ಮೀರಾ ಚೋಪ್ರಾ ತಮ್ಮ ಜೀವನದ ಪ್ರಮುಖ ಅಧ್ಯಾಯವನ್ನು ಎದುರು ನೋಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹಾಗಾಗಿ ಅವರ ಮದುವೆ ಸುದ್ದಿ ವೈರಲ್‌ ಆಗಿದೆ.

ಮಾರ್ಚ್‌ 11 ಮತ್ತು 12 ರಂದು ರಾಜಸ್ಥಾನದ ಜೈಪುರದಲ್ಲಿ ಮದುವೆ ಸಮಾರಂಭ ನಡೆಯಲಿದೆ ಎಂದು ಮೂಲಗಳು ದಿನಾಂಕವನ್ನೂ ಖಚಿತಪಡಿಸಿವೆ. 

ಉದ್ಯಮಿಯಾಗಿರುವ ಬಾಯ್‌ಫ್ರೆಂಡ್‌ ಬಗ್ಗೆ ಮೀರಾ ಚೋಪ್ರಾ ಆಗಲಿ, ಅವರ ಮೂಲವಾಗಲಿ ಎಲ್ಲೂ ಬಹಿರಂಗಪಡಿಸಿಲ್ಲ. ಆದರೆ, ಮದುವೆಯ ಸಿದ್ಧತೆಗಳು ಆರಂಭವಾಗಿದೆ ಎನ್ನುವ ಮಾಹಿತಿ ಸಿಕ್ಕಿದೆ.

ಮದುವೆಯ ಇತರ ಯಾವುದೇ ಮಾಹಿತಿಗಳನ್ನು ಕೂಡ ಹಂಚಿಕೊಳ್ಳಲಾಗಿಲ್ಲ. ಜೈಪುರದ ಯಾವ ಸ್ಥಳದಲ್ಲಿ ಮದುವೆ ನಡೆಯಲಿದೆ ಎನ್ನುವ ಮಾಹಿತಿಯೂ ಸಿಕ್ಕಿಲ್ಲ.

ಜೈಪುರ ಮಾತ್ರವಲ್ಲದೆ ದೆಹಲಿಯಲ್ಲೂ ಮದುವೆಯ ಕಾರ್ಯಕ್ರಮ ನಡೆಯಲಿದೆ. ಐಷಾರಾಮಿ ರೆಸಾರ್ಟ್‌ನಲ್ಲಿ ಇದರ ಕಾರ್ಯಕ್ರಮ ನಡೆಯಲಿದೆ ಎನ್ನಲಾಗಿದೆ.


ಎರಡು ದಿನಗಳ ಜೈಪುರದ ಮದುವೆ ಸಮಾರಂಭದಲ್ಲಿ ಅಂದಾಜು 150 ಮಂದಿ ಅತಿಥಿಗಳು ಭಾಗವಹಿಸುವ ನಿರೀಕ್ಷೆ ಇದ್ದು, ಹಿಂದೂ ಸಂಪ್ರದಾಯದ ಪ್ರಕಾರ ಕಾರ್ಯಕ್ರಮ ನಡೆಯಲಿದೆ.

ಮೀರಾ ಚೋಪ್ರಾ ಮೂಲ ಮುಂಬೈ ಆದರೂ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಹೆಚ್ಚಿನ ನಂಟು ಇರಿಸಿಕೊಂಡಿದ್ದರು. ಆರಂಭಿಕ ಸಿನಿಮಾ ಜೀವನದಲ್ಲಿ ದಕ್ಷಿಣ ಭಾರತದ ಸಿನಿಮಾಗಳಲ್ಲೇ ಹೆಚ್ಚಾಗಿ ನಟಿಸಿದ್ದರು.


2023ರಲ್ಲಿ ಒಟಿಟಿ ಸಿನಿಮಾ ಸಫೇದ್‌ನಲ್ಲಿ ಮೀರಾ ಚೋಪ್ರಾ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಆ ಬಳಿಕ ಅವರ ಸಿನಿಮಾ ವಿಚಾರಗಳು ಸುದ್ದಿಯಲ್ಲಿರಲಿಲ್ಲ.


ಮದುವೆಯ ಸ್ಥಳದ ಬಗ್ಗೆ, ಮದುವೆಯಲ್ಲಿ ಮೀರಾ ಚೋಪ್ರಾ ಅವರ ಡಿಸೈನೆರ್‌ ಯಾರು? ಕಾರ್ಯಕ್ರಮದಲ್ಲಿ ಏನೆಲ್ಲಾ ಇರಲಿದೆ ಎನ್ನುವ ಮಾಹಿತಿ ಇನ್ನಷ್ಟೇ ಸಿಗಬೇಕಿದೆ.

ಕೆಲ ವರ್ಷಗಳ ಹಿಂದೆ ದಕ್ಷಿಣ ಭಾರತದ ಸಿನಿಮಾಗಳ ಬಗ್ಗೆ ಮಾತನಾಡಿದ್ದ ಆಕೆ, ಸೂಪರ್‌ಸ್ಟಾರ್‌ಗಳಾಗಿ ತುಂಬಾ ವರ್ಷ ಇರುವುದು ಬಹಳ ಕಷ್ಟ ಎಂದಿದ್ದರು.

Latest Videos

click me!