ಸುದೀಪ್​ ಮಾಮಾನ್ನ ಪ್ರಿಯಾ ಅತ್ತೆ ಜೊತೆ ಮದ್ವೆ ಮಾಡಿಸೋಕೆ ಇಷ್ಟನೇ ಇರ್ಲಿಲ್ಲ: ನಟ ಸಂಚಿತ್​ ಸಂಜೀವ್ ರಿವೀಲ್​

Published : Jun 14, 2026, 01:31 PM IST

ಮ್ಯಾಂಗೋ ಪಚ್ಚ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಡುತ್ತಿರುವ ಕಿಚ್ಚ ಸುದೀಪ್ ಅಳಿಯ ಸಂಚಿತ್ ಸಂಜೀವ್, ತಮ್ಮ ಬಾಲ್ಯದ ನೆನಪೊಂದನ್ನು ಹಂಚಿಕೊಂಡಿದ್ದಾರೆ. ತಮ್ಮ ದೀಪು ಮಾಮಾ (ಸುದೀಪ್) ಪ್ರಿಯಾ ಅವರನ್ನು ಮದುವೆಯಾಗುವಾಗ, ಯಾರೋ ಅವರನ್ನು ಕರೆದುಕೊಂಡು ಹೋಗುತ್ತಾರೆ ಎಂದು ಭಯಪಟ್ಟು ಮದುವೆಯೇ ಬೇಡ ಎಂದಿದ್ದರಂತೆ

PREV
16
ಮ್ಯಾಂಗೋ ಪಚ್ಚ ಸಂಚಿತ್ ಹವಾ

ಮ್ಯಾಂಗೋ ಪಚ್ಚ (Mango Pachcha Movie) ಮೂಲಕ ಕಿಚ್ಚ ಸುದೀಪ್​ ಅವರ ಅಕ್ಕನ ಮಗ ಅರ್ಥಾತ್​ ಅಳಿಯ ಸಂಚಿತ್​ ಸಂಜೀವ್ ಚಿತ್ರರಂಗಕ್ಕೆ ಕಾಲಿಟಿದ್ದಾರೆ. ನಾನು ಇಷ್ಟು ವರ್ಷ ಒಳಗಿಟ್ಟಿದ್ದನ್ನು ಈ ಪಾತ್ರದ ಮೂಲಕ ಹೊರಹಾಕಿದೆ ಅನ್ನಿಸುತ್ತದೆ. ಪಚ್ಚ ನನಗೆ ನನ್ನೆಲ್ಲಾ ಭಾವವನ್ನು ಹೊರಹಾಕುವ ಬಾಗಿಲಾಗಿದೆ ಎನ್ನುವ ಮೂಲಕ ಮೊದಲ ಚಿತ್ರದ ಅದ್ಭುತ ಪಯಣವನ್ನು ಇದಾಗಲೇ ಸಂಚಿತ್​ ಮಾಧ್ಯಮದ ಮುಂದೆ ಇಟ್ಟಿದ್ದಾರೆ.

26
ಮನಸ್ಸು ಗೆಲ್ತಾರಾ?

ಸಹಜವಾಗಿ ಸುದೀಪ್​ ಅವರ ಅಕ್ಕನ ಮಗ ಎನ್ನುವುದಕ್ಕೆ ಸಂಚಿತ್​ ಸಂಜೀವ್ ಮೇಲೆ ಜನರ ಅಟೆನ್ಷನ್​ ಸ್ವಲ್ಪ ಹೆಚ್ಚಾಗಿಯೇ ಇರುತ್ತದೆ. ಅದನ್ನು ಸಿನಿಮಾ ರಂಗದಲ್ಲಿ ಹೇಗೆ ಬಳಸಿಕೊಳ್ತಾರೆ, ಜನರ ಮನಸ್ಸನ್ನು ಗೆಲ್ಲೋವಲ್ಲಿ ಎಷ್ಟು ಸಕ್ಸಸ್​ ಆಗ್ತಾರೆ ಎನ್ನುವುದು ಇನ್ನಷ್ಟೇ ನಿರ್ಧಾರ ಆಗಬೇಕಿದೆ.

36
ಆರು ವರ್ಷಗಳ ಬಾಲಕ

1995ರಲ್ಲಿ ಹುಟ್ಟಿರೋ ಸಂಚಿತ್​ ಅವರ ವಯಸ್ಸು ಈಗ 31. ಸುದೀಪ್ ಮತ್ತು ಪ್ರಿಯಾ ಮದುವೆಯಾಗಿ 25 ವರ್ಷಗಳಾಗಿವೆ. ಇದರ ಅರ್ಥ, ಆ ಸಮಯದಲ್ಲಿ ಸಂಚಿತ್​ ಅವರಿಗೆ ಆರು ವರ್ಷ ವಯಸ್ಸಷ್ಟೇ. ಆ ಸಮಯದಲ್ಲಿ ತಮ್ಮ ದೀಪು ಮಾಮಾ (ಕಿಚ್ಚ ಸುದೀಪ್) ಅವರನ್ನು ಯಾರೋ ಮದುವೆಯಾಗಿ ಕರ್ಕೊಂಡು ಹೋಗ್ತಾರೆ ಎಂದು ಗೊತ್ತಾದಾಗ ತಮ್ಮ ಸ್ಥಿತಿ ಹೇಗಿತ್ತು ಎನ್ನೋದನ್ನು ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ನಟ ತಿಳಿಸಿದ್ದಾರೆ. ​

46
ಯಾರೋ ಕರ್ಕೊಂಡು ಹೋಗ್ತಾರೆ

ಸುದೀಪ್​ ಮತ್ತು ಪ್ರಿಯಾ ಅವರದ್ದು ಲವ್​ ಮ್ಯಾರೇಜ್​. ಈ ವಿಷಯವನ್ನು ಸುದೀಪ್​ ಅವರು ತಮ್ಮ ಮನೆಯಲ್ಲಿ ಹೇಳಿದಾಗ, ಯಾರೋ ಮೂರನೆಯವರು ಬಂದು ತಮ್ಮ ದೀಪು ಮಾಮಾನ್ನ ಕರೆದುಕೊಂಡು ಹೋಗ್ತಾರೆ ಎಂದು ಗೊತ್ತಾದಾಗ ಭಯ ಆಗೋಗಿತ್ತು. ಅವ್ರ ಜೊತೆ ಅತ್ತೆ ಹೋದ್ರೆ ನಾನೇನು ಮಾಡಲಿ ಎನ್ನೋ ಟೆನ್ಷನ್​ ಆಗಿತ್ತು ಎಂದಿದ್ದಾರೆ ನಟ.

56
ಮದ್ವೆ ಬೇಡ ಅಂದೆ

ಆಗ ಪ್ರಿಯಾ ಅತ್ತೆ ಬ್ಯಾಂಕ್​ನಲ್ಲಿ ವರ್ಕ್​ ಮಾಡುತ್ತಿದ್ದಾರೆ. ಅದೊಂದು ದಿನ ದೀಪು ಮಾಮಾ ನನ್ನನ್ನು ಭೇಟಿ ಮಾಡಿಸಲು ಕರೆದುಕೊಂಡು ಹೋಗಿ, ಇವ್ರನ್ನು ಮದುವೆಯಾಗ್ಲಾ ಕೇಳಿದ್ರು. ನನಗಂತೂ ಭಯ ಆಗೋಯ್ತು. ಅದಕ್ಕೆ ಮದ್ವೆ ಆಗೋದೆ ಬೇಡ ಅಂದುಬಿಟ್ಟಿದ್ದೆ ಎಂದು ನೆನಪಿಸಿಕೊಂಡಿದ್ದಾರೆ.

66
ಪ್ರತಿ ಮನೆ ಘಟನೆ

ಬಹುಶಃ ಇದು ಪ್ರತಿ ಮನೆಯಲ್ಲಿಯೂ ಆಗುವ ಘಟನೆಯೇ. ಚಿಕ್ಕ ಮಕ್ಕಳು ತುಂಬಾ ಯಾರನ್ನಾದರೂ ಹಚ್ಚಿಕೊಂಡಾಗ ಅವರನ್ನು ಸುಲಭದಲ್ಲಿ ಬಿಟ್ಟುಕೊಡುವುದಿಲ್ಲ. ಅದೇ ರೀತಿ ಸಂಚಿತ್​ ಅವರಿಗೂ ಆಗಿತ್ತು. ಇದಾಗಲೇ ಸುದೀಪ್​ ಕೂಡ ತಮ್ಮ ಅಕ್ಕನ ಮಗನ ಬಗ್ಗೆ ಮಾತನಾಡಿದ್ದರು. ಅವನು ನನ್ನನ್ನ ಹಚ್ಚಿಕೊಳ್ಳೋದಕ್ಕೆ ತುಂಬಾ ಟೈಮ್‌ ತಗೊಂಡಿದ್ದ. ಆದ್ದರಿಂದ ನನ್ನನ್ನು ಸುಲಭದಲ್ಲಿ ಬಿಟ್ಕೋಡೋದು ಅವನಿಗೆ ಇಷ್ಟ ಇರಲಿಲ್ಲ ಎಂದಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories