ಸಿನಿಮಾ ತಂಡಗಳು ತಮ್ಮ ಸಿನಿಮಾವನ್ನು ಪ್ರೇಕ್ಷಕರು ತಲುಪಿಸಲು ವಿಭಿನ್ನ ದಾರಿಗಳನ್ನು ಕಂಡುಕೊಳ್ಳುತ್ತಲೇ ಇರುತ್ತವೆ. ಅದರ ಭಾಗವಾಗಿ ‘ಮಾರಕಾಸ್ತ್ರ’ ಚಿತ್ರತಂಡ ಓಟಿಟಿ ಪ್ಲೇಯರ್ ವೆಬ್‌ಸೈಟ್ www.ottplayer.in ನಲ್ಲಿ ಬಿಡುಗಡೆ ಮಾಡಿದೆ.
ಮಾಲಾಶ್ರೀ ಬಹುದಿನಗಳ ನಂತರ ನಟಿಸಿದ್ದ ‘ಮಾರಕಾಸ್ತ್ರ’ ಸಿನಿಮಾ ಇದೀಗ ಓಟಿಟಿ ಪ್ಲೇಯರ್ ಎಂಬ ಓಟಿಟಿಯಲ್ಲಿ ಪ್ರಸಾರವಾಗುತ್ತಿದೆ. ಈ ಸಿನಿಮಾ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ತೆರೆಕಂಡು ಮೆಚ್ಚುಗೆ ಗಳಿಸಿತ್ತು.
26
ಸಿನಿಮಾ ತಂಡಗಳು ತಮ್ಮ ಸಿನಿಮಾವನ್ನು ಪ್ರೇಕ್ಷಕರು ತಲುಪಿಸಲು ವಿಭಿನ್ನ ದಾರಿಗಳನ್ನು ಕಂಡುಕೊಳ್ಳುತ್ತಲೇ ಇರುತ್ತವೆ. ಅದರ ಭಾಗವಾಗಿ ‘ಮಾರಕಾಸ್ತ್ರ’ ಚಿತ್ರತಂಡ ಓಟಿಟಿ ಪ್ಲೇಯರ್ ವೆಬ್‌ಸೈಟ್ www.ottplayer.in ನಲ್ಲಿ ಬಿಡುಗಡೆ ಮಾಡಿದ್ದು, ರೂ.99 ಪಾವತಿಸಿ ಸಿನಿಮಾ ನೋಡಬಹುದಾಗಿದೆ.
36
ಗುರುಮೂರ್ತಿ ಸುನಾಮಿ ನಿರ್ದೇಶನದ, ಕೋಮಲ ನಟರಾಜ್ ನಿರ್ಮಾಣದ ಈ ಚಿತ್ರದ ಮತ್ತೊಂದು ಪ್ರಮುಖ ಪಾತ್ರದಲ್ಲಿ ಹರ್ಷಿಕಾ ಪೂಣಚ್ಚ ನಟಿಸಿದ್ದಾರೆ. ಆನಂದ್ ಆರ್ಯ, ಮಾಧುರ್ಯ, ಅಯ್ಯಪ್ಪ ಶರ್ಮ, ಉಗ್ರಂ ಮಂಜು ತಾರಾಬಳಗದಲ್ಲಿದ್ದಾರೆ.
46
ಕೋಮಲ ನಟರಾಜ್ ಅವರು ಶ್ರಾವ್ಯ ಕಂಬೈನ್ಸ್ ಮೂಲಕ ಮಾರಕಾಸ್ತ್ರ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಗುರುಮೂರ್ತಿ ಸುನಾಮಿ ಅವರು ಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
56
ಹೀರೋ ಆಗಿ ಆನಂದ್ ಆರ್ಯ ನಟಿಸಿದ್ದಾರೆ. ಅವರಿಗೆ ಮಾಧುರ್ಯ ಜೋಡಿಯಾಗಿದ್ದಾರೆ. ಇನ್ನೊಂದು ಪ್ರಮುಖ ಪಾತ್ರವನ್ನು ಮಾಲಾಶ್ರೀ ನಿಭಾಯಿಸಿದ್ದಾರೆ. ಹರ್ಷಿಕಾ ಪೂರ್ಣಚ್ಚ, ಅಯ್ಯಪ್ಪ ಶರ್ಮ, ಮೈಕೋ ನಾಗರಾಜ್, ಭರತ್ ಸಿಂಗ್, ಉಗ್ರಂ ಮಂಜು ಮುಂತಾದ ಕಲಾವಿದರು ಈ ಸಿನಿಮಾದ ತಾರಾಬಳಗದಲ್ಲಿದ್ದಾರೆ.
66
ದುಷ್ಟ ಶಕ್ತಿಗಳನ್ನು ಮಟ್ಟಹಾಕುವ ಶಕ್ತಿ ಪತ್ರಕರ್ತರ ಲೇಖನಿಗೆ ಇರುತ್ತದೆ. ಈ ವಿಷಯದ ಕುರಿತು ಸಿನಿಮಾ ಮೂಡಿಬಂದಿದೆ. ಮಿರಾಕಲ್ ಮಂಜು ಸಾಹಿತ್ಯ ಹಾಗೂ ಸಂಗೀತದ ಜವಾಬ್ದಾರಿ ನಿಭಾಯಿಸಿದ್ದಾರೆ. ಆರ್.ಕೆ. ಶಿವಕುಮಾರ್ ಅವರು ಛಾಯಾಗ್ರಹಣ ಮಾಡಿದ್ದಾರೆ.