8 ರಾಜ್ಯಗಳನ್ನು ಕಾರಲ್ಲಿಯೇ ಸುತ್ತಿದ ದೀಪಿಕಾ ದಾಸ್‌: ಪಾರು ಪಾರ್ವತಿ ಬಗ್ಗೆ ಏನ್ ಹೇಳಿದ್ರು?

Published : Jan 17, 2025, 05:14 PM IST

ಇವರೊಟ್ಟಿಗೆ ಮತ್ತೊಂದು ‌ಮಹತ್ವದ ಪಾತ್ರ ವಹಿಸಿದ್ದು ಕಾರು. ಇದು ಪ್ರಯಾಣದ ಕಥಾಹಂದರ ಹೊಂದಿರುವ ಚಿತ್ರ. ಈಗ ಈ ಕಾರು ಪ್ರಚಾರದ ಸಲುವಾಗಿ ಕರ್ನಾಟಕಾದ್ಯಂತ ಚಲಿಸಲಿದೆ ಎಂದರು.

PREV
17
8 ರಾಜ್ಯಗಳನ್ನು ಕಾರಲ್ಲಿಯೇ ಸುತ್ತಿದ ದೀಪಿಕಾ ದಾಸ್‌: ಪಾರು ಪಾರ್ವತಿ ಬಗ್ಗೆ ಏನ್ ಹೇಳಿದ್ರು?

ಬಿಗ್ ಬಾಸ್ ಖ್ಯಾತಿಯ ದೀಪಿಕಾ ದಾಸ್, ಪೂನಂ ಸಿರ್ ನಾಯಕ್ ಹಾಗೂ ಫವಾಜ್ ಅಶ್ರಫ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಪಾರು ಪಾರ್ವತಿ’ ಸಿನಿಮಾ ಜ.31ಕ್ಕೆ ರಿಲೀಸ್‌ ಆಗಲಿದೆ.

27

ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಈ ಚಿತ್ರದ ಭಾಗದಂತಿದ್ದು, ಬೆಂಗಳೂರಿನ ಉತ್ತರಹಳ್ಳಿಯಿಂದ ಉತ್ತರಾಖಂಡ್‌ವರೆಗೆ ಸಂಚರಿಸಿದ ಕಾರನ್ನು ಚಿತ್ರತಂಡ ಪರಿಚಯಿಸಿತು.

37

ನಾಯಕಿ ದೀಪಿಕಾ ದಾಸ್‌, ಇದೊಂದು ಪ್ರಯಾಣ ಹಾಗೂ ಅಡ್ವೆಂಚರ್‌ ಕಥನ ಹೊಂದಿರುವ ಚಿತ್ರ. ಕಾರಿನ ಜೊತೆಗೆ ಕರ್ನಾಟಕದಿಂದ ಉತ್ತರ ಖಂಡದವರೆಗೂ ಎಂಟು ರಾಜ್ಯಗಳನ್ನು ಸಂಚರಿಸಿದ ಅನುಭವ ಎಂದಿಗೂ ಮರೆಯಲು ಸಾಧ್ಯವಿಲ್ಲ. ನನ್ನ ಪಾತ್ರದ ಹೆಸರು ಪಾಯಲ್  ಎಂದರು. 

47

ನನಗೆ ಪ್ರವಾಸ ಎಂದರೆ ಇಷ್ಟ. ಈಗ ಅದೇ ರೀತಿಯ ಕತೆಯಲ್ಲಿ ನಟಿಸುತ್ತಿರುವುದು ಖುಷಿ ಕೊಟ್ಟಿದೆ. ಏಕಾಂಗಿ ಸಂಚಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಈ ಚಿತ್ರಕ್ಕಾಗಿ ನಾನು ಒಂದು ತಿಂಗಳಲ್ಲಿ ಹತ್ತು ಕೆಜಿ ತೂಕ ಇಳಿಸಿಕೊಂಡಿದ್ದೇನೆ‌ ಹಾಗೂ ಉದ್ದವಾದ ಕೂದಲನ್ನು ಗಿಡ್ಡ ಕೂದಲು ಮಾಡಿಕೊಂಡಿದ್ದೇನೆ’ ಎಂದರು.

57

ಈ ಬಗ್ಗೆ ವಿವರ ನೀಡಿದ ನಿರ್ದೇಶಕ ರೋಹಿತ್ ಕೀರ್ತಿ, ನಮ್ಮ ಸಿನಿಮಾದ ಪ್ರಮುಖ ಪಾತ್ರಧಾರಿಗಳು ದೀಪಿಕಾ ದಾಸ್, ಪೂನಂ ಸಿರ್‌‌ ನಾಯಕ್‌ ಹಾಗೂ ಫವಾಜ್ ಆಶ್ರಫ್. ಪಿ.ಬಿ.ಪ್ರೇಮನಾಥ್‌ ಈ ಸಿನಿಮಾ ನಿರ್ಮಿಸಿದ್ದಾರೆ.

67

ಇವರೊಟ್ಟಿಗೆ ಮತ್ತೊಂದು ‌ಮಹತ್ವದ ಪಾತ್ರ ವಹಿಸಿದ್ದು ಕಾರು. ಇದು ಪ್ರಯಾಣದ ಕಥಾಹಂದರ ಹೊಂದಿರುವ ಚಿತ್ರ. ಈಗ ಈ ಕಾರು ಪ್ರಚಾರದ ಸಲುವಾಗಿ ಕರ್ನಾಟಕಾದ್ಯಂತ ಚಲಿಸಲಿದೆ ಎಂದರು.

77

ರೋಹಿತ್‌ ಕೀರ್ತಿ, ‘ಕಳೆದ ಹತ್ತು ವರ್ಷಗಳಿಂದ ಚಿತ್ರರಂಗದಲ್ಲಿದ್ದೇನೆ. ‘ಪಾರು ಪಾರ್ವತಿ’ ಚಿತ್ರದ್ದು ಅಡ್ವೆಂಚರ್‌ ಹಾಗೂ ಪ್ರವಾಸ ಒಳಗೊಂಡ ಕತೆ. ಮೂರು ಮುಖ್ಯ ಪಾತ್ರಗಳ ಸುತ್ತ ಸಿನಿಮಾ ಸಾಗುತ್ತದೆ’ ಎಂದರು.

Read more Photos on
click me!

Recommended Stories