ಕನ್ನಡಿಯೇ ನಾಚುವಂತೆ ಸಿಂಗಾರ ಮಾಡಿಕೊಂಡ ಡಿಂಪಲ್ ಕ್ವೀನ್… ಬೇಗ ಮದ್ವೆ ಆಗಮ್ಮ ಅಂತಿದ್ದಾರೆ ಫ್ಯಾನ್ಸ್!

First Published | Nov 19, 2024, 8:39 PM IST

ಸ್ಯಾಂಡಲ್ ವುಡ್ ನ ಡಿಂಪಲ್ ಕ್ವೀನ್ ರಚಿತಾ ರಾಮ್ ತುಂಬಾನೆ ಮುದ್ದಾದ ವಿಡಿಯೋ ಒಂದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ಜನ ಸಿಕ್ಕಾಪಟ್ಟೆ ಇಷ್ಟ ಪಟ್ಟಿದ್ದಾರೆ. 
 

ಚಂದನವನದ ಅಂದದ ಬೆಡಗಿ ಡಿಂಪಲ್ ಕ್ವೀನ್ ರಚಿತಾ ರಾಮ್ (Rachita Ram) ಸೋಶಿಯಲ್ ಮೀಡಿಯಾದಲ್ಲಿ ಮುದ್ದಾದ ವಿಡಿಯೋ ಹಂಚಿಕೊಂಡಿದ್ದು, ಅಭಿಮಾನಿಗಳು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದಾರೆ ಈ ವಿಡಿಯೋವನ್ನ. ಅಷ್ಟಕ್ಕೂ ವಿಡಿಯೋದಲ್ಲಿ ಏನಿದೆ. 
 

ಗುಳಿಕೆನ್ನೆ ಚೆಲುವೆ ರಚಿತಾ ರಾಮ್ ಕನ್ನಡಿ ಮುಂದೆ ನಿಂತು ಮೇಕಪ್ ಮಾಡುತ್ತಾ, ತನ್ನನ್ನು ತಾನು ಸಿಂಗರಿಸಿಕೊಳ್ಳುವ ಮುದ್ದಾದ ವಿಡಿಯೋ ಇದಾಗಿದೆ. ವಿಡಿಯೋದಲ್ಲಿ ರಚಿತಾ ರಾಮ್ ಮುದ್ದು ದೇವತೆಯಂತೆ ಕಾಣಿಸ್ತಿದ್ದಾರೆ. 
 

Tap to resize

ಕೆಂಪು ಬಣ್ಣದ ಜರತಾರಿ ಸೀರೆಯುಟ್ಟಿರುವ ರಚಿತಾ ರಾಮ್, ಅದರ ಜೊತೆಗೆ ಬನ್ ಹೇರ್ ಸ್ಟೈಲ್ ಮಾಡಿ, ಮುಡಿತುಂಬಾ, ದುಂಡು ಮಲ್ಲಿಗೆ ಹೂವು ಮುಡಿದಿದ್ದಾರೆ. ತುಟಿಗೆ ಕೆಂಪು ಲಿಪ್ ಸ್ಟಿಕ್, ಕಣ್ಣಿಗೆ ಕಾಡಿಗೆ ಹಾಕಿ, ತನ್ನ ಅಂದವನ್ನ ಮತ್ತಷ್ಟು ಚೆಂದಗೊಳಿಸುತ್ತಿದ್ದಾರೆ ರಚಿತಾ. 
 

ಜೊತೆಗೆ ತಮಗೆ ತಾವೇ ಟಚಪ್ ಮಾಡುತ್ತಾ, ಕನ್ನಡಿಗೆ ಮುಂದೆ ತನ್ನ ಅಂದವನ್ನು ನೋಡಿಕೊಳ್ಳುತ್ತಾ, ಕನ್ನಡಿಯೇ ನಾಚುವಂತೆ ಪೋಸ್ ಕೊಟ್ಟಿದ್ದಾರೆ ರಚಿತಾ ರಾಮ್.. ಈ ವಿಡಿಯೋವನ್ನು 1,19,966 ಜನ ಲೈಕ್ ಮಾಡಿದ್ದು, ಇದು ಬರೋಬ್ಬರಿ 120K ಜನರನ್ನ ತಲುಪಿದೆ. 
 

ಅಭಿಮಾನಿಗಳು ಕಾಮೆಂಟ್ ಮಾಡಿ ಬ್ಯೂಟಿ, ರಚ್ಚು ಡಾರ್ಲಿಂಗ್, ಗೊಂಬೆ, ಲವ್, ಗಾರ್ಜಿಯಸ್, ತುಂಬಾನೆ ಚೆನ್ನಾಗಿ ಕಾಣಿಸುತ್ತಿದ್ದೀರಿ, ಅಪ್ಸರೆ, ದೇವತೆ, ನಿಮ್ಮ ನಗುವೇ ನಿಮ್ಮ ಅಂದಕ್ಕೆ ಕಾರಣ ಅಂತನೂ ಹೇಳಿದ್ದಾರೆ. 
 

ಅಷ್ಟೇ ಅಲ್ಲ ಸೀರೆಯುಟ್ಟಿರುವ ರಚಿತಾಗೆ ಅಪ್ಪಟ ಕನ್ನಡದ ಹುಡುಗಿ ಅಂತಾನೂ ಒಬ್ಬರು ಹೇಳಿದ್ರೆ, ಮತ್ತೊಬ್ಬರು, ಯಾವಾಗಮ್ಮ ನಿನ್ನ ಮದ್ವೆ? ಬೇಗನೆ ಮದ್ವೆ ಆಗಮ್ಮ ಅಂತಾನೂ ಕಾಮೆಂಟ್ ನಲ್ಲಿ ಪ್ರಶ್ನಿಸಿದ್ದಾರೆ. 
 

ಇನ್ನೂ ಸಿನಿಮಾದ ಬಗ್ಗೆ ಹೇಳೋದಾದರೆ ರಚಿತಾ ಕೈಯಲ್ಲಿ ಸದ್ಯ 6 ಸಿನಿಮಾಗಳಿವೆ. ಶಬರಿ ಸರ್ಚಿಂಗ್ ಫಾರ್ ರಾವಣ, ಲವ್ ಮಿ ಆರ್ ಹೇಟ್ ಮಿ (Love Me or hate me), ಸಂಜು ವೆಡ್ಸ್ ಗೀತಾ 2, ಕಲ್ಟ್, ರಾಚಯ್ಯ, ಹಾಗೂ ಕೂಲಿ ಸಿನಿಮಾದಲ್ಲೂ ರಚಿತಾ ರಾಮ್ ನಟಿಸುತ್ತಿರೋದಾಗಿ ಸುದ್ದಿ ಇದೆ. 
 

Latest Videos

click me!