ಇವರೇ ನೋಡಿ ಚಂದನವನದ ಸ್ಟಾರ್ ನಟಿಯರಿಗೆ ಜನ್ಮ ನೀಡಿದ ಮುದ್ದಿನ ತಾಯಂದಿರು

First Published | Nov 20, 2024, 10:08 AM IST

ಚಂದನವನದಲ್ಲಿ ಮಿಂಚಿದ, ಮಿಂಚುತ್ತಿರುವ, ಚಂದನವನದ ಮೂಲಕ ರಾಷ್ಟ್ರಮಟ್ಟದಲ್ಲಿ ಹೆಸರು, ಜನಪ್ರಿಯತೆ ಪಡೆದ ಸ್ಟಾರ್ ನಟಿಯರಿಗೆ ಜನ್ಮ ನೀಡಿದ ಮುದ್ದಿನ ತಾಯಂದಿರ ಫೋಟೊಗಳು ಇಲ್ಲಿವೆ… 
 

Sandalwood actresses beautiful mothers photos pav

ರಕ್ಷಿತಾ 
ನಟಿಯಾಗಿ ಮೋಡಿ ಮಾಡಿ, ಸದ್ಯ ನಿರ್ಮಾಪಕಿಯಾಗಿರುವ ಚಂದನವನದ ಕ್ರೇಜಿ ಕ್ವೀನ್ ರಕ್ಷಿತಾ (Rakshitha Prem) ಅವರ ತಾಯಿ ಮಮತಾ ರಾವ್. ಇವರು ಕೂಡ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದರು. 
 

ರಾಧಿಕಾ ಪಂಡಿತ್
ಸ್ಯಾಂಡಲ್’ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ (Radhika Pandit), ಹೆಚ್ಚಿನ ಸಮಯವನ್ನು ಕಳೆಯೋದು ತಮ್ಮ ತಂದೆ, ತಾಯಿ ಜೊತೆಗೆನೆ. ರಾಧಿಕಾ ತಾಯಿ ಮಂಗಳಾ ಪಂಡಿತ್. ರಾಧಿಕಾ ಅವರ ಬೆಸ್ಟ್ ಫ್ರೆಂಡ್ ಕೂಡ ಅಮ್ಮನೇ. 
 

Tap to resize

ರಮ್ಯಾ
ನಟಿ ರಮ್ಯಾ ಕನ್ನಡ ಸಿನಿಮಾದಿಂದ ದೂರ ಉಳಿದು, ರಾಜಕೀಯದಲ್ಲಿ ಬ್ಯುಸಿಯಾಗಿದ್ದರೂ ಸಹ, ಇಂದಿಗೂ ಸಹ ಸಾಕಷ್ಟು ಅಭಿಮಾನಿಗಳನ್ನು ಪಡೆದಿದ್ದಾರೆ ರಮ್ಯಾ. ಇವರ ತಾಯಿ ರಂಜಿತಾ ಕಾಂಗ್ರೆಸ್ ನಾಯಕಿಯಾಗಿ ಪಕ್ಷಕ್ಕಾಗಿ ದುಡಿದ ಸದಸ್ಯೆ. 

ಅಮೂಲ್ಯ 
ಬಾಲನಟಿಯಿಂದ ಹಿಡಿದು ನಾಯಕನಟಿಯಾಗುವವರೆಗೆ ತಮ್ಮ ಮುದ್ದು ಮುದ್ದು ಅಭಿನಯದ ಮೂಲಕವೆ ಮೋಡಿ ಮಾಡಿದ ನಟಿ ಅಮೂಲ್ಯ ತಾಯಿ ಜಯಲಕ್ಷ್ಮೀ. 

ಐಂದ್ರಿತಾ ರೇ
ನಾ ನಗುವ ಮೊದಲೇನೆ ಎನ್ನುತ್ತಾ ಕನ್ನಡಿಗರ ಎದೆಯಲ್ಲಿ ಕಚಗುಳಿ ಇಟ್ಟವರು ಐದ್ರಿಂತಾ ರೇ (Aindrita Ray). ಈ ಬೆಂಗಾಳಿ ಬೆಡಗಿಯ ತಾಯಿ ಸುನೀತಾ ರೇ.

ಮೇಘನಾ ರಾಜ್ 
ಕನ್ನಡ ಹಾಗೂ ಮಲಯಾಳಂ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡ ನಟಿ ಮೇಘನಾ ರಾಜ್ (Meghana Raj), ತಾಯಿ ಪ್ರಮೀಳಾ ಜೋಶೈ ಕೂಡ ನಟಿ ಅನ್ನೋದು ಗೊತ್ತೇ ಇದೆ. ಮೇಘನಾ ನೋಡೋದಕ್ಕೂ ಥೇಟ್ ಅಮ್ಮನಂತೆಯೇ ಇದ್ದಾರೆ. 

ಹರಿಪ್ರಿಯಾ
ಸ್ಯಾಂಡಲ್’ವುಡ್ ನ ಜನಪ್ರಿಯ ನಟಿಯರಲ್ಲಿ ಒಬ್ಬರು ಅಂದ್ರೆ ಅದು ಹರಿಪ್ರಿಯಾ (Haripriya). ಸದ್ಯ ತಾಯಿಯಾಗುವ ಸಂಭ್ರಮದಲ್ಲಿರುವ ಹರಿಪ್ರಿಯಾ ಅವರ ಮುದ್ದಿನ ತಾಯಿ ವಿಜಯಲಕ್ಷ್ಮೀ. 

ಮಿಲನಾ ನಾಗರಾಜ್
ತಾಯ್ತನವನ್ನು ಎಂಜಾಯ್ ಮಾಡುತ್ತಿರುವ ಕನ್ನಡ ಸಿನಿಮಾದ ನೀಳ ಸುಂದರಿ ಮಿಲನಾ ನಾಗರಾಜ್ (Milana Nagraj) ತಾಯಿ ಚಂದ್ರಕಲಾ, ಮಿಲನಾ ತಮ್ಮ ಅಮ್ಮನಂತೆಯಂತೆ ಸುಂದರಿ ಅನ್ನೋದು ನೋಡಿದ್ರೇನೆ ತಿಳಿಯುತ್ತೆ. 

ಅದಿತಿ ಪ್ರಭುದೇವ
ಕನ್ನಡ ಕಿರುತೆರೆ ಮೂಲಕ ಪರಿಚಿತರಾಗಿ, ಸಿನಿಮಾಗಳ ಮೂಲಕ ಜನಪ್ರಿಯತೆ ಪಡೆದ, ಅಪ್ಪಟ ಕನ್ನಡತಿ ಅದಿತಿ ಪ್ರಭುದೇವ ಅವರ ತಾಯಿ ನೇತ್ರಾ ಪ್ರಭುದೇವ ಎಷ್ಟು ಮುದ್ದಾಗಿದ್ದಾರೆ ಅಲ್ವಾ? 
 

ಆಶಿಕಾ ರಂಗನಾಥ್ 
ಚುಟು ಚುಟು ಬೆಡಗಿ ಆಶಿಕಾ ರಂಗನಾಥ್ (Ashika Ranganath) ಕನ್ನಡದ ಮಿಲ್ಕಿ ಬ್ಯೂಟಿ, ಇವರಿಗೆ ಅಂದ ಬಣ್ಣ ಎಲ್ಲಾನೂ ಬಂದಿದ್ದು, ಅಮ್ಮ ಸುಧಾ ರಂಗನಾಥ್ ಅವರಿಂದ ಅನ್ನೋದನ್ನ ನೋಡಿದ್ರೆನೆ ಹೇಳಬಹುದು. 
 

ಶ್ರೀಲೀಲಾ
ಡ್ಯಾನ್ಸಿಂಗ್ ಸ್ಟಾರ್, ಕನ್ನಡ ಮತ್ತು ತೆಲುಗು ಸಿನಿಮಾಗಳಲ್ಲಿ ಮಿಂಚುತ್ತಿರುವ ಬೆಡಗಿ ಶ್ರೀಲೀಲಾ ಅವರ ತಾಯಿ ಸ್ವರ್ಣಲತಾ ಬಗ್ಗೆ ನಿಮಗೆ ಗೊತ್ತಿರಲೇಬೇಕು. ಇವರು ವೈದ್ಯೆಯಾಗಿತ್ತು, ತಾಯಿಯಂತೆ ಮಗಳು ಕೂಡ ಎಂಬಿಬಿಎಸ್ ಮಾಡ್ತಿದ್ದಾರೆ.

ಸಾನ್ವಿ ಶ್ರೀವಾತ್ಸವ್
ಹುಟ್ಟಿದ್ದು ಉತ್ತರ ಭಾರತದಲ್ಲಾದರೂ ಕನ್ನಡ ಸಿನಿಮಾಗಳಲ್ಲಿ ನಟಿಸುವ ಮೂಲಕ, ಸದ್ಯ ಕನ್ನಡತಿಯೇ ಆಗಿರುವ ಸಾನ್ವಿ ಶ್ರೀನಿವಾತ್ಸವ್ ಅವರ ಮುದ್ದಿನ ಅಮ್ಮ ಮೀನಾ ಶ್ರೀವಾತ್ಸವ್.

ರಶ್ಮಿಕಾ ಮಂದಣ್ಣ
ಕರ್ನಾಟಕ ಕ್ರಶ್ ನಿಂದ ಸದ್ಯ ನ್ಯಾಷನಲ್ ಕ್ರಶ್ ಆಗಿ ತೆಲುಗು, ತಮಿಳು, ಬಾಲಿವುಡ್ ಸಿನಿಮಾಗಳಲ್ಲಿ ಮಿಂಚುತ್ತಿರುವ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ತಾಯಿ ಸುಮನ್ ಮಂದಣ್ಣ.

ಸಪ್ತಮಿ ಗೌಡ
ಕಾಂತಾರ ಚೆಲುವೆ ಸಪ್ತಮಿ ಗೌಡ (Sapthami Gowda) ತಾಯಿ ಹಾಗೂ ದಕ್ಷ ಪೊಲೀಸ್ ಆಫೀಸರ್ ಕೆ ಉಮೇಶ್ ಗೌಡ ಪತ್ನಿ ಶಾಂತಾ ಗೌಡ. ಸಪ್ತಮಿ ನೋಡೋದಕ್ಕೆ ಅಮ್ಮನ ಥರಾನೆ ಸುಂದರಿ. 
 

ಮಾನ್ವಿತಾ ಕಾಮತ್
ಟಗರು ಪುಟ್ಟಿ ಅಂತಾನೆ ಜನಪ್ರಿಯತೆ ಪಡೆದಿರುವ ನಟಿ ಮಾನ್ವಿತಾ ಕಾಮತ್ ಅವರ ಮುದ್ದಿನ ಅಮ್ಮ ಸುಜಾತಾ ಕಾಮತ್, ಇವರು ಮಾನ್ವಿತಾರಷ್ಟೇ ಮುದ್ದಾಗಿದ್ದಾರೆ. 
 

Latest Videos

click me!