ಡಾ.ರಾಜ್ ಕುಮಾರ್ ಮೂವಿ ಸೇರಿ ಕನ್ನಡ ಸಿನಿಮಾಗಳಲ್ಲಿ ಹಾಡಿದ ಆಶಾ ಭೋಸ್ಲೆ, ಇಲ್ಲಿದೆ ಲಿಸ್ಟ್

Published : Apr 12, 2026, 03:16 PM IST

ಡಾ.ರಾಜ್ ಕುಮಾರ್ ಮೂವಿ ಸೇರಿ ಕನ್ನಡ ಸಿನಿಮಾಗಳಲ್ಲಿ ಹಾಡಿದ ಆಶಾ ಭೋಸ್ಲೆ, ಇಲ್ಲಿದೆ ಲಿಸ್ಟ್, ಸ್ಯಾಂಡಲ್‌ವುಡ್‌ನಲ್ಲಿ ಆಶಾ ಭೋಸ್ಲೆ ಮೋಡಿ ಮಾಡಿದ್ದಾರೆ. ಕನ್ನಡಿಗರ ಮನಗೆದ್ದ ಹಾಡುಗಳು ಯಾವುದು 

PREV
15
ಕನ್ನಡಿಗರ ಮನ ಗೆದ್ದ ಆಶಾ ಭೋಸ್ಲೆ

ಬಾಲಿವುಡ್ ಪ್ಲೇಬ್ಯಾಕ್ ಸಿಂಗರ್ ಆಶಾ ಭೋಸ್ಲೆ ತಮ್ಮ 92ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ದಾದಾ ಸಾಹೇಪ್ ಪಾಲ್ಕೆ ಪ್ರಶಸ್ತಿ ವಿಜೇತ ಆಶಾ ಭೋಸ್ಲೆ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಕಂಬನಿ ಮಿಡಿದಿದ್ದಾರೆ. ಬಾಲಿವುಡ್ ಸೇರಿ ಬರೋಬ್ಬರಿ 20 ಪ್ರಾದೇಶಿಕ ಭಾಷೆಗಳಲ್ಲಿ ಆಶಾ ಭೋಸ್ಲೆ ಹಾಡಿದ್ದಾರೆ. ವಿಶೇಷ ಅಂದರೆ ಸ್ಯಾಂಡಲ್‌ವುಡ್‌ನಲ್ಲೂ ಆಶಾ ಭೋಸ್ಲೆ ಹಾಡಿ ಕನ್ನಡಿಗ ಮನ ಗೆದಿದ್ದಾರೆ.

25
ಕನ್ನಡದಲ್ಲಿ ಮೂರು ಹಾಡು ಹಾಡಿರುವ ಆಶಾ ಭೋಸ್ಲೆ

ಡಾ.ರಾಜ್ ಕುಮಾರ್ ಅಭಿನಯದ ದೂರದ ಬೆಟ್ಟ ಸಿನಿಮಾ ಸೇರಿದಂತೆ ಮೂರು ಕನ್ನಡ ಸಿನಿಮಾಗಳಲ್ಲಿ ಆಶಾ ಭೋಸ್ಲೆ ಹಾಡಿದ್ದಾರೆ. ಈ ಹಾಡುಗಳು ಇಂದಿಗೂ ಅಭಿಮಾನಿಗಳು ಗುನುಗುತ್ತಾರೆ. 2010ರಲ್ಲಿ ಬಿಡುಗಡೆಯಾದ ಮತ್ತೆ ಮುಂಗಾರು ಸಿನಿಮಾದಲ್ಲೂ ಅಶಾ ಭೋಸ್ಲೆ ಹಾಡಿದ್ದಾರೆ.

35
ಆಶಾ ಭೋಸ್ಲೆ ಕನ್ನಡದ ಹಾಡುಗಳು
  • ಸವಾಲು ಹಾಕಿ ಸೋಲಿಸಿ ಎಲ್ಲ; ದೂರದ ಬೆಟ್ಟ ಸಿನಿಮಾ (ಡಾ.ರಾಜ್ ಕುಮಾರ್) 1973ರಲ್ಲಿ ಈ ಸಿನಿಮಾ ಬಿಡುಗಡೆ
  • ಏನೋ ಏನೋ; ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಿನಿಮಾ ( 1967ರಲ್ಲಿ ಬಿಡುಗಡೆಯಾಗಿ ಯಶಸ್ವಿ ಸಿನಿಮಾ)
  • ಹೇಳದೆ ಕಾರಣ; ಮತ್ತೆ ಮುಂಗಾರು ಸಿನಿಮಾ (2010ರಲ್ಲಿ ಬಿಡುಗಡೆಯಾದ ಸಿನಿಮಾ)
45
ಬೆಂಗಳೂರು ಸೇರಿ ಹಲೆವೆಡೆ ಮ್ಯೂಸಿಕ್ ಕಾನ್ಸರ್ಟ್

ಆಶಾ ಭೋಸ್ಲೆ ಕೇವಲ ಸ್ಯಾಂಡಲ್‌ವುಡ್ ಮೂಲಕ ಮಾತ್ರ ಕನ್ನಡಿಗರ ಮನಗೆದ್ದಿಲ್ಲ. ಇದರ ಜೊತೆ ಬೆಂಗಳೂರು ಸೇರಿದಂತೆ ಕರ್ನಾಟಕದ ಕೆಲೆವೆಡೆ ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಲೈವ್ ಮ್ಯೂಸಿಕ್ ಶೋ ಕಾರ್ಯಕ್ರಮಗಳಲ್ಲಿ ಆಶಾ ಭೋಸ್ಲೆ ಹಾಡಿನ ಮೂಲಕ ರಂಜಿಸಿದ್ದಾರೆ. ಈ ಮೂಲಕ ಕನ್ನಡಿಗರ ಜೊತೆ ಅವಿನಾಭಾವ ಸಂಬಂಧ ಹೊಂದಿದ್ದರು.

55
ಮುಂಬೈ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನ

ಕಳೆದ ಕೆಲ ತಿಂಗಳುಗಳಿಂದ ಆಶಾ ಭೋಸ್ಲೆ ಆರೋಗ್ಯ ಕ್ಷೀಣಿಸಿತ್ತು. ಬಹು ಅಂಗಾಂಗ ವೈಫಲ್ಯಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ನಿನ್ನೆ (ಏ.11) ಆಶಾ ಭೋಸ್ಲೆ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆ ದಾಖಲಾಗಿದ್ದರು. ಆಶಾ ಭೋಸ್ಲೆ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಮುಂಬೈ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories