Rashmika Mandanna: ನಟಿ ರಶ್ಮಿಕಾ ಮಂದಣ್ಣ ಬಹಳ ಅಪರೂಪಕ್ಕೆ ಎನ್ನುವಂತೆ ಸಿಬ್ಲಿಂಗ್ಸ್ ಡೇ, ಅಂದರೆ ಸಹೋದರ-ಸಹೋದರಿಯರ ದಿನದ ಅಂಗವಾಗಿ ತಮ್ಮ ಮುದ್ದು ತಂಗಿ ಶಿಮನ್ ಮಂದಣ್ಣ ಫೋಟೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಟಾಲಿವುಡ್ ನಟ ವಿಜಯ್ ದೇವರಕೊಂಡ ಅವರ ಜೊತೆ ಮದುವೆಯಾದ ಬಳಿಕ ಸದಾ ಸುದ್ದಿಯಲ್ಲಿದ್ದಾರೆ. ರಶ್ಮಿಕಾ ಜೊತೆಗೆ ತಂಗಿ ಶಿಮನ್ ಮಂದಣ್ಣ ಕೂಡ ಮದುವೆ ದಿನದಿಂದ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಇದೀಗ ರಶ್ಮಿಕಾ ತಂಗಿಯ ಮುದ್ದಾದ ಫೋಟೊ ಹಂಚಿಕೊಂಡಿದ್ದಾರೆ.
26
ರಶ್ಮಿಕಾ ಸಹೋದರಿ ಶಿಮನ್
ರಶ್ಮಿಕಾ ಮಂದಣ್ಣ ಸಹೋದರಿ ಶಿಮನ್ ಮಂದಣ್ಣ ಜೊತೆಗಿನ ಫೋಟೊಗಳನ್ನು ಹಂಚಿಕೊಳ್ಳುವುದು ತುಂಬಾನೆ ಕಡಿಮೆ. ಅವರ ಖಾಸಗಿತನಕ್ಕೆ ತೊಂದರೆಯಾಗಬಾರದು ಎಂದು ನಟಿ ಹಾಗೂ ಅವರ ಮನೆಯವರೂ ಸಹ ಮಿಡಿಯಾದ ಮುಂದೆ ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ. ಇದೀಗ ರಶ್ಮಿಕಾ ಸ್ಪೆಷಲ್ ಡೇ ದಿನ ತಂಗಿ ಜೊತೆಗಿನ ಫೋಟೊ ಹಂಚಿಕೊಂಡಿದ್ದಾರೆ.
36
ಸಿಂಬ್ಲಿಂಗ್ಸ್ ಡೇ
ಏಪ್ರಿಲ್ 10ರಂದು ವರ್ಲ್ಡ್ ಸಿಬ್ಲಿಂಗ್ಸ್ ಡೇ ಆಚರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ರಶ್ಮಿಕಾ ಮಂದಣ್ಣ, ತಂಗಿ ಶಿಮನ್ ಜೊತೆಗೆ ಇರುವಂತಹ ಕ್ಯಾಂಡೀಡ್ ಫೋಟೊವನ್ನು ಹಂಚಿಕೊಂಡು, ಇಂದು ಸಿಬ್ಲಿಂಗ್ಸ್ ಡೇ, ಅದಕ್ಕಾಗಿ ಈ ಫೋಟೋ..” ಎಂದು ಕ್ಯಾಪ್ಶನ್ ನೀಡಿದ್ದಾರೆ. ಈ ಮುದ್ದಾದ ಬ್ಲ್ಯಾಕ್ ಆಂಡ್ ವೈಟ್ ಫೋಟೊ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ರಶ್ಮಿಕಾ ಮಂದಣ್ಣ ಸಹೋದರಿ ಶಿಮನ್ ವಯಸ್ಸು 13. ರಶ್ಮಿಕಾ ಮತ್ತು ಶಿಮನ್ ನಡುವೆ ಸುಮಾರು 16-17 ವರ್ಷಗಳ ವಯಸ್ಸಿನ ಅಂತರವಿದೆ. ಹಾಗಾಗಿ ತಂಗಿ ಅಂದರೆ ಮುದ್ದು ಜಾಸ್ತಿಗೆ, ತಂಗಿಗೆ ರಶ್ಮಿಕಾ ಎರಡನೇ ಅಮ್ಮ ಆಗಿದ್ದಾರೆ ಅಂದ್ರೆ ತಪ್ಪಾಗಲ್ಲ. ಮದುವೆ ದಿನ ಕೂಡ ತಂಗಿಯನ್ನು ಅಪ್ಪಿಕೊಂಡು ಮುದ್ದಾದ ಫೋಟೊ ಹಂಚಿಕೊಂಡಿದ್ದರು.
56
ಸಂದರ್ಶನದಲ್ಲಿ ತಂಗಿ ಕುರಿತು ಮಾತು
ಈ ಹಿಂದೆ ಒಂದು ಸಂದರ್ಶನದಲ್ಲಿ ಮಾತನಾಡಿದ್ದ ರಶ್ಮಿಕಾ ಮಂದಣ್ಣ 'ನನಗೆ 10 ವರ್ಷದ ತಂಗಿ ಇದ್ದಾಳೆ.. ನನಗೂ ಅವಳಿಗೂ ವಯಸ್ಸಿನಲ್ಲಿ 16-17 ವರ್ಷಗಳ ಅಂತರವಿದೆ. ನನಗೆ ನನ್ನ ತಂಗಿ ಅಂದ್ರೆ ತುಂಬಾ ಇಷ್ಟ. ಆದರೆ ನನ್ನ ತಂಗಿಗೆ ಯಾವುದೇ ಸೌಲಭ್ಯಗಳನ್ನು ಸುಲಭವಾಗಿ ಕೊಡಬಾರದು.. ಏಕೆಂದರೆ ನನ್ನ ತಂದೆ ತಾಯಿ ನನ್ನನ್ನು ತುಂಬಾ ಸ್ಟ್ರಿಕ್ಟ್ ಆಗಿ ಬೆಳೆಸಿದ್ದರು, ಹಾಗೆ ಕಷ್ಟ ಪಟ್ಟು ಬೆಳೆದಿದಕ್ಕೆ ನಾನು ಈ ಸ್ಥಾನದಲ್ಲಿ ಬೆಳೆಯಲು ಸಾಧ್ಯವಾಗಿದ್ದು.. ಅವಳಿಗೆ ಈಗ ಎಲ್ಲವೂ ಸುಲಭವಾಗಿಯೇ ಸಿಗುವಂತಿದೆ. ಆದರೆ, ಅವಳಿಗೆ ಹಾಗೆ ಬೇಸಿಕ್ ಬಿಟ್ಟು ಎಲ್ಲವೂ ಸಿಗಬಾರದು. ಅವಳೂ ಕೂಡ ದೊಡ್ಡ ಸಾಧನೆ ಮಾಡಬೇಕಲು' ಎಂದು ಹೇಳಿದ್ದರು.
66
ಅಕ್ಕನ ಗಂಡ ಬಾವನಾಗಿರೋದಕ್ಕಿಂತ ಅಣ್ಣನಾಗಿದ್ದಾರೆ
ಇನ್ನು ಸೋಶಿಯಲ್ ಮೀಡಿಯಾದಲ್ಲಿ ಶಿಮನ್ ಮಂದಣ್ಣ ಅವರು ಬರೆದಿದ್ದಾರೆ ಎನ್ನುವ ಪೋಸ್ಟ್ ಒಂದು ವೈರಲ್ ಆಗುತ್ತಿದ್ದು, ಅದರಲ್ಲಿ ಶಿಮನ್ ಅಕ್ಕನ ಮದುವೆಯ ಮಧುರ ಕ್ಷಣಗಳನ್ನು ಮೆಲುಕು ಹಾಕಿದ್ದು, ಜೊತೆಗೆ ವಿಜಯ್ ದೇವರಕೊಂಡ ಕೇವಲ ಭಾವ ಆಗಿಲ್ಲ, ಬದಲಾಗಿ ಅಣ್ಣನೇ ಆಗಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.