ರಾತ್ರೋ ರಾತ್ರಿ ರೊಚ್ಚಿಗೆದ್ದು ಪೋಟೋಶೂಟ್‌ ಮಾಡಿಸಿದ 'ಹೆಂಗೆ ನಾವು' ನಟಿ ರಚನಾ ಇಂದರ್‌: ಆದರೂ ಬೇಜಾರಂತೆ...

Published : Jul 15, 2024, 07:34 PM ISTUpdated : Jul 16, 2024, 09:31 AM IST

ಸ್ಯಾಂಡಲ್‌ವುಡ್‌ ಡಾರ್ಲಿಂಗ್ ಕೃಷ್ಣ ಅಭಿನಯದ ಲವ್ ಮಾಕ್ಟೆಲ್ ಸಿನಿಮಾದ ಮೂಲಕ ಸಿನಿರಸಿಕರ ಹೃದಯ ಕದ್ದ ನಟಿ ರಚನಾ ಇಂದರ್, ಆಗಾಗ ಹೊಸ ಹೊಸ ರೀತಿಯ ಫೋಟೋಶೂಟ್‌ನಲ್ಲಿ ಮಿಂಚುತ್ತಿರುತ್ತಾರೆ.

PREV
17
ರಾತ್ರೋ ರಾತ್ರಿ ರೊಚ್ಚಿಗೆದ್ದು ಪೋಟೋಶೂಟ್‌ ಮಾಡಿಸಿದ 'ಹೆಂಗೆ ನಾವು' ನಟಿ ರಚನಾ ಇಂದರ್‌: ಆದರೂ ಬೇಜಾರಂತೆ...

ಸದ್ಯ ರಚನಾ ಇಂದರ್‌ ಒಂದು ಕಾಲು ಸ್ಯಾಂಡಲ್‌ವುಡ್‌ನಲ್ಲಿದ್ರೆ, ಇನ್ನೊಂದು ಕಾಲು ಟಾಲಿವುಡ್‌ನಲ್ಲಿದೆ. ಈ ಬೆಡಗಿಗೆ ಸೂರ್ಯನನ್ನು ಕಂಡರೆ ಒಂಥರಾ ಪ್ರೀತಿ, ಒಂಥರಾ ಬೇಜಾರು. ಯಾಕೆ ಗೊತ್ತಾ?

27

ಬೇಜಾರು ಯಾಕೆ ಅಂದರೆ ತಾನು ಏಳುವಾಗ ಸೂರ್ಯ ನಡುನೆತ್ತಿಯಲ್ಲಿರುತ್ತಾನೆ, ಅವನ ಜೊತೆ ಫೋಟೋ ತೆಗೆಸಿಕೊಳ್ಳಲಿಕ್ಕಾಗ್ತಿಲ್ವಲ್ಲಾ ಅಂತ. ಇಂತಿಪ್ಪ ನಟಿ ಒಂದಿನ ರಾತ್ರೋ ರಾತ್ರಿ ರೊಚ್ಚಿಗೆದ್ದು ಸನ್‌ ಲೈಟ್‌ ಎಫೆಕ್ಟ್‌ ಬಳಸಿ ಫೋಟೋಶೂಟ್‌ ಮಾಡಿಸಿಯೇ ಬಿಟ್ಟರು. 

37

ಸದ್ಯ ರಚನಾ ಫೋಟೋಸ್‌ಗಳು ಒಂದಕ್ಕಿಂತ ಒಂದು ಚೆಂದ ಬಂದವು. ಸೂರ್ಯ ಮುದ್ದಿಸುವಂತಿದ್ದ ಈ ಫೋಟೋ ನೋಡಿ ಈಕೆ ಕಣ್ಣರಳಿಸಿದ ರೀತಿ ಥೇಟ್‌ ಸೂರ್ಯಕಾಂತಿ ಹೂ ಸೂರ್ಯನತ್ತ ನೋಡಿ ಕಣ್ ಕಣ್ ಬಿಟ್ಟಂಗಿತ್ತು.

47

ಇನ್ನು ಲವ್​ ಮಾಕ್ಟೇಲ್​ ಚಿತ್ರದಿಂದ ಹೆಂಗೆ ನಾವು ಅಂತ ರಾಜ್ಯಾದ್ಯಂತ ಜನಪ್ರಿಯತೆ ಪಡೆದ ನಟಿ ರಚನಾ ಇಂದರ್ ಅವರಿಗೆ ಅನೇಕ ಅವಕಾಶಗಳು ಹರಿದುಬರುತ್ತಿವೆ. ಲವ್ ಮಾಕ್ಟೇಲ್​ 2 ಚಿತ್ರದಲ್ಲೂ ಅವರ ಪಾತ್ರ ಸಖತ್ ಗಮನ ಸೆಳೆದಿದೆ.

57

ನಂತರ ರಿಷಬ್ ಶೆಟ್ಟಿ ಅಭಿನಯದ ಹರಿಕಥೆ ಅಲ್ಲ ಗಿರಿಕಥೆ ಚಿತ್ರದಲ್ಲಿ ಕೂಡ ಪ್ರೇಕ್ಷಕರನ್ನು ರಂಜಿಸುತ್ತಿದ್ದು, ಬ್ಯಾಕ್​ ಟು ಬ್ಯಾಕ್​ ಯಶಸ್ಸು ಪಡೆಯುತ್ತಿರುವ ಅವರು ಹೆಂಗೆ ನಾವು ಅಂತ ತಮ್ಮದೇ ಶೈಲಿಯಲ್ಲಿ ನಗೆ ಬೀರುತ್ತಿದ್ದಾರೆ. 

67

ಒಬ್ಬರ ಜೀವನ ಬದಲಿಸಲು ಒಂದು ಪಾತ್ರ ಸಾಕು ಹಾಗೂ ಒಂದು ಸಿನಿಮಾ ಸಾಕು ಅನ್ನುವುದಕ್ಕೆ ರಚನ್‌ ಇಂದರ್‌ ಸಾಕ್ಷಿಯಾಗಿದ್ದು, ಶಶಾಂಕ್ ಆಕ್ಷನ್ ಕಟ್ ಹೇಳಿದ ಲವ್ 360 ನಲ್ಲಿ ಅವರು ನಾಯಕಿಯಾಗಿ ಮೊದಲ ಬಾರಿಗೆ ನಟಿಸಿದ್ದಾರೆ.

77

ನಟಿ ರಚನಾ ಇಂದರ್ ಸಿನಿಮಾ ಜರ್ನಿ ಸಖತ್ ದೊಡ್ಡದೆನೂ ಅಲ್ಲ. ಲವ್ ಮಾಕ್ಟೆಲ್, ಲವ್ ಮಾಕ್ಟೆಲ್-2, ತ್ರಿಬಲ್ ರೈಡಿಂಗ್, ಚಿಟ್ಟಂ ಮಹಾರಾಣಿ, ಲವ್ 360 ಚಿತ್ರಗಳಲ್ಲೂ ರಚನಾ ಇಂದರ್ ಕಾಣಿಸಿಕೊಂಡಿದ್ದು ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories