Laya: 20 ವರ್ಷದ ಬಳಿಕ ಕನ್ನಡಕ್ಕೆ ಮತ್ತೆ ಬಂದ 'ಗಂಡುಗಲಿ ಕುಮಾರರಾಮ' ನಟಿ ಲಯ..!

Published : Jul 05, 2026, 11:24 PM IST

ಎರಡು ದಶಕಗಳ ಹಿಂದೆ ನಟ ಶಿವರಾಜ್‌ಕುಮಾರ್ ಅಭಿನಯದ 'ಗಂಡುಗಲಿ ಕುಮಾರರಾಮ' ಚಿತ್ರದಲ್ಲಿ ಮಿಂಚಿದ್ದ ಈ ತೆಲುಗು ನಟಿ ಲಯ, ಈಗ ಮತ್ತೆ ಧ್ಯಾನ್ ಯೋಗೇಶ್ವರ್ ನಟನೆಯ ಕನ್ನಡ ಚಿತ್ರದಲ್ಲಿ ನಟಿಸಲು ಬಂದಿದ್ದಾರೆ.

PREV
18

20 ವರ್ಷಗಳ ನಂತರ ಸ್ಯಾಂಡಲ್‌ವುಡ್‌ಗೆ ಮರಳಿದ ತೆಲುಗು ಬೆಡಗಿ!

ಸಿನಿಮಾ ರಂಗದಲ್ಲಿ ಕಾಲ ಉರುಳಿದಂತೆ ಎಷ್ಟೋ ಮುಖಗಳು ಮರೆಯಾಗುತ್ತವೆ, ಮತ್ತೆ ಕೆಲವು ಮುಖಗಳು ನೆನಪಿನ ಬುತ್ತಿಯಲ್ಲಿ ಹಾಗೆಯೇ ಉಳಿದುಬಿಡುತ್ತವೆ. ಅಂತಹ ಒಂದು ಸುಂದರ ಮುಖದ ನೆನಪು ನಟಿ ಲಯ.

28

ಹೌದು, ಸುಮಾರು ಎರಡು ದಶಕಗಳ ಹಿಂದೆ ನಟ ಶಿವರಾಜ್‌ಕುಮಾರ್ ಅಭಿನಯದ 'ಗಂಡುಗಲಿ ಕುಮಾರರಾಮ' ಚಿತ್ರದಲ್ಲಿ ಮಿಂಚಿದ್ದ ಈ ತೆಲುಗು ನಟಿ, ಈಗ ಮತ್ತೆ ಕನ್ನಡ ಚಿತ್ರದಲ್ಲಿ ನಟಿಸಲು ಬಂದಿದ್ದಾರೆ. ಈ 20 ವರ್ಷ ಎಲ್ಲಿದ್ದರು ಲಯ? ಈಗ ಯಾವ ಚಿತ್ರದ ಮೂಲಕ ವಾಪಸ್ ಬರುತ್ತಿದ್ದಾರೆ? ಇಲ್ಲಿದೆ ಫುಲ್ ಡಿಟೇಲ್ಸ್!

38

ಲಯ ಕಾಣಿಸಿಕೊಳ್ಳಲಿರುವ ಸಿನಿಮಾ ಯಾವುದು?

ಫ್ಲ್ಯಾಶ್‌ಬ್ಯಾಕ್‌ಗೆ ಹೋಗುವುದಾದರೆ, ಅದು 2006ನೇ ಇಸವಿ. ಹಿರಿಯ ನಿರ್ದೇಶಕ ಎಚ್ಆರ್ ಭಾರ್ಗವ್ ಆಕ್ಷನ್ ಕಟ್ ಹೇಳಿದ್ದ 'ಗಂಡುಗಲಿ ಕುಮಾರರಾಮ' ಚಿತ್ರ. ಆ ಚಿತ್ರದಲ್ಲಿ ಶಿವಣ್ಣನಿಗೆ ಜೋಡಿಯಾಗಿ ಗ್ಲಾಮರಸ್ ಗೊಂಬೆ ರಂಭಾ ಮಿಂಚಿದ್ದರೆ, ಸಾಂಪ್ರದಾಯಿಕ ಲುಕ್‌ನಲ್ಲಿ ಲಯ ಪ್ರೇಕ್ಷಕರ ಮನ ಗೆದ್ದಿದ್ದರು. ಆದರೆ ಕುಮಾರರಾಮ ಚಿತ್ರದ ಬಳಿಕ ನಟಿ ಲಯ ಅವರು ಕನ್ನಡದ ಯಾವುದೇ ಸಿನಿಮಾದಲ್ಲಿ ನಟಿಸಲಿಲ್ಲ. ಈಗ ಸರಿಯಾಗಿ 20 ವರ್ಷಗಳ ನಂತರ ಮತ್ತೆ ಲಯ ಅವರು ಕನ್ನಡ ಸಿನಿಮಾಗೆ ಬಣ್ಣ ಹಚ್ಚಲಿದ್ದಾರೆ.

48

ನಾಗಣ್ಣನ 'ಕರ್ಣಾಟ ಬಲಂ ಅಜೇಯಂ'!

ಲಯ ಅವರನ್ನು ಮತ್ತೆ ಕನ್ನಡಕ್ಕೆ ಕರೆತಂದ ಕ್ರೆಡಿಟ್ ಕನ್ನಡದ ಸ್ಟಾರ್ ನಿರ್ದೇಶಕ ನಾಗಣ್ಣ ಅವರಿಗೆ ಸಲ್ಲಬೇಕು. ಸಿಪಿ ಯೋಗೀಶ್ವರ್ ಅವರ ಪುತ್ರ ಧ್ಯಾನ್ ಯೋಗೀಶ್ವರ್ ನಾಯಕರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ 'ಕರ್ಣಾಟಬಲಂ' ಚಿತ್ರದಲ್ಲಿ ಲಯ ಒಂದು ಪ್ರಮುಖ ಪಾತ್ರ ಮಾಡಲಿದ್ದಾರೆ.

58

ಅಷ್ಟಕ್ಕೂ ಇದು ಸುಮ್ಮನೆ ಬಂದು ಹೋಗುವ ಪಾತ್ರವಲ್ಲ ಎನ್ನಲಾಗಿದೆ. ಇಡೀ ಕತೆಗೆ ತಿರುವು ನೀಡುವ ತೂಕದ ಪಾತ್ರದಲ್ಲಿ ನಟಿ ಲಯ ನಟಿಸಲಿದ್ದಾರೆ ಎನ್ನುವ ಸುದ್ದಿ ಸಿಕ್ಕಿದೆ. ಈ ಚಿತ್ರವು ಐತಿಹಾಸಿಕ ಚಕ್ರವರ್ತಿ ಇಮ್ಮಡಿ ಪುಲಕೇಶಿಯ ಕತೆಯನ್ನು ಆಧರಿಸಿದ್ದು, ಲಯ ಅವರ ಉಪಸ್ಥಿತಿ ಚಿತ್ರಕ್ಕೆ ಮತ್ತಷ್ಟು ಮೆರುಗು ನೀಡಲಿದೆ ಖಂಡಿತ.

68

ಧ್ಯಾನ್ ಬಗ್ಗೆ ಲಯ ಏನಂದ್ರು?

ಚಿತ್ರದ ಮುಹೂರ್ತ ಕಾರ್ಯಕ್ರಮದಲ್ಲಿ ಮಾತನಾಡಿದ ಲಯ, "ಗಂಡುಗಲಿ ಕುಮಾರರಾಮ ಚಿತ್ರವೇ ನನ್ನ ಕೊನೆಯ ಕನ್ನಡ ಸಿನಿಮಾ ಆಗಿತ್ತು. ಅದಾದ ಮೇಲೆ ಯಾವುದೇ ಆಫರ್ ಬಂದಿರಲಿಲ್ಲ ಅಥವಾ ಸಮಯ ಕೂಡಿ ಬಂದಿರಲಿಲ್ಲ. ಈಗ ಕರ್ಣಾಟ ಬಲಂ ಅಜೇಯಂ ಮೂಲಕ ಮತ್ತೆ ಬಂದಿರುವುದು ಖುಷಿ ತಂದಿದೆ" ಎಂದಿದ್ದಾರೆ. ಜೊತೆಗೆ, ಚಿತ್ರದ ನಾಯಕ ಧ್ಯಾನ್ ಯೋಗೀಶ್ವರ್ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. "ಧ್ಯಾನ್ ತುಂಬಾ ಚೆನ್ನಾಗಿ ತಯಾರಿ ನಡೆಸಿದ್ದಾರೆ. ಅವರಿಗೆ ಇದು ಮೊದಲ ಸಿನಿಮಾ ಅನಿಸುವುದೇ ಇಲ್ಲ" ಎಂದು ಧ್ಯಾನ್ ಬೆನ್ನು ತಟ್ಟಿದ್ದಾರೆ.

78

ಯೋಗೀಶ್ವರ್ ಫ್ಯಾಮಿಲಿಯ ಡಬಲ್ ಧಮಾಕಾ!

ಇನ್ನೂ ವಿಶೇಷ ಎಂದರೆ, ಒಂದೆಡೆ ಮಗ ಧ್ಯಾನ್ ಅವರ ಲಾಂಚಿಂಗ್ ಸಿನಿಮಾ 'ಕರ್ಣಾಟ ಬಲಂ ಅಜೇಯಂ' ಸಿದ್ಧವಾಗುತ್ತಿದ್ದರೆ, ಇನ್ನೊಂದೆಡೆ ಸಿ.ಪಿ. ಯೋಗೀಶ್ವರ್ ಅವರ ಬಹುನಿರೀಕ್ಷಿತ 'ಸೈನಿಕ-2' ಚಿತ್ರ ಕೂಡ ಲಾಂಚ್ ಆಗಿದೆ. ಈ ಎರಡೂ ಸಿನಿಮಾಗಳನ್ನು ಸ್ವತಃ ಯೋಗೀಶ್ವರ್ ಅವರೇ ನಿರ್ಮಾಣ ಮಾಡುತ್ತಿದ್ದು, ಆ ಮೂಲಕ ದೊಡ್ಡ ಮಟ್ಟದ ಹೈಪ್ ಕ್ರಿಯೇಟ್ ಮಾಡುತ್ತಿದ್ದಾರೆ.

88

ಒಟ್ಟಿನಲ್ಲಿ, 20 ವರ್ಷಗಳ ಹಿಂದೆ ಶಿವಣ್ಣನ ಜೊತೆ ನಟಿಸಿದ್ದ ಲಯ, ಈಗ ಇಮ್ಮಡಿ ಪುಲಕೇಶಿಯ ಕಾಲದ ಕತೆಯಲ್ಲಿ ಯಾವ ರೀತಿ ಪಾತ್ರದ ಮೂಲಕ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲ ಸಿನಿರಸಿಕರಲ್ಲಿ ಮನೆ ಮಾಡಿದೆ. 'ವೆಲ್ಕಮ್ ಬ್ಯಾಕ್ ಲಯ ಮೇಡಂ' ಅಂತಿದ್ದಾರೆ ಸ್ಯಂಡಲ್‌ವುಡ್ ಸಿನಿಮಾಪ್ರಿಯರು!

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories