ಬೆಂಗಳೂರು(ಅ. 04) ನಟಿ, ಚಿರಂಜೀವಿ ಸರ್ಜಾ ಪತ್ನಿ ಮೇಘನಾ ರಾಜ್ ಗೆ ಸೀಮಂತ ಕಾರ್ಯ ನೆರವೇರಿಸಲಾಗಿದೆ. ಹೃದಯಾಘಾತದಿಂದ ಅಗಲಿದ ಪತಿ ಚಿರಂಜೀವಿ ಅವರ ಕಟೌಟ್ ಇಟ್ಟುಕೊಂಡು ಸೀಮಂತ ನೆರವೇರಿಸಲಾಗಿದೆ. ಮೇಘನಾ ರಾಜ್ ಅವರಿಗೆ ಸರಳವಾಗಿ ಸೀಮಂತ ಶಾಸ್ತ್ರ ಮಾಡಲಾಗಿದೆ. ಪತಿಯ ಅಗಲಿಕೆ ನೋವನ್ನು ಯಾವ ಹೆಣ್ಣು ಮರೆಯಲು ಸಾಧ್ಯವಿಲ್ಲ. ಆದರೆ ಸಂಪ್ರದಾಯದ ಕಾರಣಕ್ಕೆ ಸೀಮಂತ ಮಾಡಲಾಗಿದೆ. ತಂದೆ ಸುಂದರ್ ರಾಜ್ , ತಾಯಿ ಪ್ರಮಿಳಾ ಮಗಳನ್ನು ಆಶೀರ್ವದಿಸಿದ್ದಾರೆ. ಚಿರಂಜೀವಿ ಸರ್ಜಾ ಹೃದಯಾಘಾತದಿಂದ ಅಗಲಿದ್ದು ಮೇಘನಾ ಅವರಿಗೆ ಅವಳಿ ಮಗುವಾಗಿದೆ ಎಂಬ ವದಂತಿ ಸಹ ಹರಿದಾಡಿತ್ತು. ಈ ಬಗ್ಗೆ ಸ್ವತ ಸ್ಪಷ್ಟನೆ ನೀಡಿದ್ದ ಮೇಘನಾ ಮಗುವಾಗಿದ್ದು ಸುಳ್ಳು ಸುದ್ದಿ ಎಂದು ಹೇಳಿದ್ದರು. Late Actor chiranjeevi-sarja Wife meghana-raj seemantha held at Bengaluru ಚಿರಂಜೀವಿ ಸರ್ಜಾ ಪತ್ನಿ ಮೇಘನಾ ರಾಜ್ಗೆ ಸೀಮಂತ ಶಾಸ್ತ್ರ